Sunday, May 31 2020 | Time 19:49 Hrs(IST)
 • ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಟ್ಟಡಗಳ ನೆಲಸಮಕ್ಕೆ ಜಿಲ್ಲಾಧಿಕಾರಿ ಆದೇಶ
 • ಪೊಲೀಸ್ ಪೇದೆಗೆ ಕೋವಿಡ್ ದೃಢ: ಕೊಟ್ಟೂರು ಪೊಲೀಸ್ ಠಾಣೆ ಸೀಲ್ ಡೌನ್
 • ಜೂನ್ 4 ರವರೆಗೆ ಆಳ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
 • ದಕ್ಷಿಣ ಕನ್ನಡದಲ್ಲಿ ಕಂಡುಬಂದ ಮಿಡತೆ ಲೋಕಸ್ಟ್ ಮಿಡತೆಯಲ್ಲ: ಕೃಷಿ ಇಲಾಖೆ ಸ್ಪಷ್ಟನೆ
 • ಮದುವೆಗೂ ಮುನ್ನವೇ ತಂದೆಯಾಗುವ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ‌
 • ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ
 • 3 ಬಾರಿ ಒಲಿಂಪಿಕ್ ಚಾಂಪಿಯನ್ ಬಾಬಿ ನಿಧನ
 • ಇಂದಿನಿಂದ ಲಂಕಾ ಕ್ರಿಕೆಟಿಗರ ಅಭ್ಯಾಸ ಶುರು
 • ಅಮೇರಿಕಾ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸುವಂತೆ ಸಿದ್ದರಾಮಯ್ಯ ಒತ್ತಾಯ
 • ರಾಜ್ಯದಲ್ಲಿ ಒಂದೇ ದಿನ 299 ಕೊರೋನಾ ಸೋಂಕಿತರು ಪತ್ತೆ, ಒಟ್ಟು ಸಂಖ್ಯೆ 3221ಕ್ಕೇರಿಕೆ
 • ತಮ್ಮ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಭಾರತೀಯರನ್ನು ಹೆಸರಿಸಿದ ಅಂಪೈರ್ ಇಯಾನ್
 • ರಾಜ್ಯ ಸರ್ಕಾರದ ಲಾಕ್‌ ಡೌನ್‌ 5 0 ಹೊಸ ಮಾರ್ಗಸೂಚಿ ಪ್ರಕಟ; ಮೂರು ಹಂತಗಳಲ್ಲಿ ನಿರ್ಬಂಧ ಸಡಿಲಿಕೆ
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
Health -Lifestyle Share

ಆರೋಗ್ಯವಂತ ಕುಟುಂಬ ಮತ್ತು ಸಶಕ್ತ ಯುವಜನತೆ ಸೃಷ್ಟಿಸುವ ಕುರಿತು ಜಾಗತಿಕ ತಜ್ಞರ ವಿಚಾರ ವಿನಿಮಯ

ಬೆಂಗಳೂರು, ನ 5 [ಯುಎನ್ಐ] ಗರ್ಭಧಾರಣೆಯಿಂದ ಪ್ರಾರಂಭಿಕ ಹಂತದ ಪಾಲನೆಯವರೆಗೆ ಸಮಗ್ರ ಆರೈಕೆ " ಭಾರತದ ಹೊಸ ಆರೋಗ್ಯವಂತ ಮಾನವ ಸಂಪನ್ಮೂಲ " ಸೃಷ್ಟಿಗೆ ಅಗತ್ಯ ಎಂದು ಜಾಗತಿಕ ತಜ್ಞರು ಪ್ರತಿಪಾದಿಸಿದ್ದಾರೆ. ಆರೋಗ್ಯವಂತ ಕುಟುಂಬ ಮತ್ತು ಸಶಕ್ತ ಯುವಜನರನ್ನು ಮುಂದಿನ ದಶಕದಲ್ಲಿ ಸೃಷ್ಟಿಸುವ ಕುರಿತು ಸಮಗ್ರವಾಗಿ ವಿಚಾರ ವಿನಿಮಯ ನಡೆಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಸಮಾರೋಪಗೊಂಡ ೩-ದಿನಗಳ 'ಹೊಸ ಮಾನವತೆಗೆ ಜನನ-ಹೊಸ ಮಾನವತೆಯ ಕೇಂದ್ರದಲ್ಲಿ ಯುವಜನ ' ಎಂಬ ವಿಚಾರ ಸಂಕಿರಣ ಹಲವಾರು ಪ್ರತಿನಿಧಿಗಳು ಹಾಗೂ ತಜ್ಞರು ಭಾಗವಹಿಸಿ ಸಮಾಲೋಚನೆ ನಡೆಸಿದರು.
ಫಿಗೊಗೆ ಫೊಗ್ಸಿ ರಾಯಭಾರಿ ಮತ್ತು ಆರ್ಟಿಸ್ಟ್(ಏಷ್ಯನ್ ರೀಸರ್ಚ್ ಅಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್‌ಫರ್)ನ ಸಿಇಒ ಡಾ.ಹೇಮಾ ದಿವಾಕರ್ ಅವರು ಈ ಸಮ್ಮೇಳನದ ವಿಶೇಷ ಅತಿಥಿಯಾಗಿದ್ದರು. ಡಾ.ಹೇಮಾ ಅವರ ಕನಸಿನ ಕೂಸು ಆರ್ಟಿಸ್ಟ್ ೨೦೦೫ರಲ್ಲಿ ಪ್ರಾರಂಭವಾದ ದಿನದಿಂದಲೂ ತನ್ನ ವಿಶೇಷ ಉಪಕ್ರಮದ ಮೂಲಕ ವಿಷಯ ಪ್ರತಿಪಾದನೆ, ಸಾಮರ್ಥ್ಯವೃದ್ಧಿ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ರಕ್ತಹೀನತೆಯ ಆರೈಕೆ ಮತ್ತು ಹದಿವಯಸ್ಸಿನವರ ಆರೋಗ್ಯ; ಸಂತಾನೋತ್ಪಾದನೆಯ ಆಯ್ಕೆಗಳ ನಿರ್ಮಾಣ ಮತ್ತು ಯುವಜನರಿಗೆ ಅವಕಾಶಗಳು; ಲಸಿಕೆಯೊಂದಿಗೆ ಕ್ಯಾನ್ಸರ್ ಪ್ರಾರಂಭಿಕ ಪತ್ತೆ ಮತ್ತು ರೋಗತಡೆ; ಮಧುಮೇಹ ಆರೈಕೆ ಮತ್ತು ಚಿಕಿತ್ಸೆ; ಶಿಕ್ಷಣ ಮತ್ತು ಸಬಲೀಕರಣ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಈ ಸಮ್ಮೇಳನ ಕುರಿತು ಡಾ.ಹೇಮಾ ದಿವಾಕರ್ ಮಾತನಾಡಿ, ದೇಶದ ಯುವಜನರಲ್ಲಿ ಹೂಡಿಕೆ ಮಾಡುವುದು ಭವಿಷ್ಯದ ಜನಸಂಖ್ಯೆಯ ದೃಷ್ಟಿಯಿಂದ ಉನ್ನತ ಫಲಿತಾಂಶಗಳನ್ನು ನೀಡುತ್ತದೆ, ಏಕೆಂದರೆ ಮಾಹಿತಿಪೂರ್ಣ ಹಾಗೂ ಪ್ರಜ್ಞಾವಂತ ಯುವಜನರು ಮುಂದಿನ ತಲೆಮಾರಿನ ಪ್ರಬುದ್ಧ ನಾಗರಿ ತಲೆಮಾರನ್ನು ಸೃಷ್ಟಿಸುತ್ತಾರೆ. ದೇಶವ್ಯಾಪಿಯಾಗಿ ಆರ್ಟಿಸ್ಟ್‌ನ ಪ್ರಮುಖ ಗಮನವು ತಾಯಿ ಹಾಗೂ ಶಿಶು ಆರೋಗ್ಯಸೇವೆಯನ್ನು ಒದಗಿಸುವ ಮುಂಚೂಣಿಯ ಸಿಬ್ಬಂದಿಗೆ ಬರೀ ಪ್ರಮಾಣಪತ್ರಗಳನ್ನು ಪೂರೈಸುವುದಕ್ಕೆ ಸೀಮಿತವಾಗದೆ ಕೌಶಲ್ಯ ವರ್ಗಾವಣೆ ಮತ್ತು ಸಾಮರ್ಥ್ಯ ಹೆಚ್ಚಿಸಲು ಒತ್ತು ನೀಡಿದೆ ಎಂದರು.
ಸಮಗ್ರ ಆರೋಗ್ಯ ಮತ್ತು ಪಾಲನೆಯಲ್ಲಿ ಮುಂಚೂಣಿಯಲ್ಲಿರುವ ಡಾ.ಜೂಲೀ ಜೆರ್ಲ್ಯಾಂಡ್ ಹಿಪ್ನೊಬರ್ಥಿಂಗ್ ಚೈಲ್ಡ್‌ಬರ್ಥ್ ಶಿಕ್ಷಣದಲ್ಲಿ ತರಬೇತುದಾರರೂ ಆಗಿದ್ದಾರೆ. ಹಲವು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿರುವ ಅವರು ವಿಶ್ವಸಂಸ್ಥೆಯ ಪ್ರತಿನಿಧಿಯೂ ಆಗಿದ್ದಾರೆ. ಡಾ.ಜೂಲೀ ತಮ್ಮ ಕಾಳಜಿ ವ್ಯಕ್ತಪಡಿಸಿ, ಪ್ರಮುಖ ಜಾಗತಿಕ ಸವಾಲುಗಳು ಈ ಭೂಗ್ರಹದ ಪ್ರತಿಯೊಬ್ಬರನ್ನೂ ಹಾಗೂ ಪ್ರತಿಯೊಂದನ್ನೂ ಕಾಡುತ್ತಿವೆ ಎಂದರು.
ಗರ್ಭಧಾರಣೆಯ ಅವಧಿಯಿಂದ ೩ನೇ ವರ್ಷ ವಯಸ್ಸಿನವರೆಗಿನ ಅವಧಿಯಲ್ಲಿ ಮೆದುಳು ಬೇರೆ ಸಮಯಕ್ಕಿಂತ ವೇಗವಾಗಿ ಬೆಳೆಯುವುದರಿಂದ ಈ ಸಮಯ ಬಹಳ ಸಂಕೀರ್ಣವಾದುದು ಎಂದು ನಾವು ಈಗ ಅರ್ಥ ಮಾಡಿಕೊಳ್ಳುತ್ತಿದ್ದೇವೆ; ಶೇ.೮೦ರಷ್ಟು ಮಗುವಿನ ಮೆದುಳು ಈ ವಯಸ್ಸಿನಲ್ಲಿ ರೂಪುಗೊಳ್ಳುತ್ತದೆ. ಈ ವರ್ಷಗಳಲ್ಲಿ ಆರೋಗ್ಯಕರ ಮೆದುಳು ಅಭಿವೃದ್ಧಿಯಾಗಲು ಮಕ್ಕಳಿಗೆ ಸುರಕ್ಷಿತ, ಸುಭದ್ರ ಹಾಗೂ ಪ್ರೀತಿಯುತ ಪರಿಸರ ಇರಬೇಕು, ಅದು ಪೌಷ್ಠಿಕತೆಯಿಂದ ಪೋಷಕರು ಮತ್ತು ಆರೈಕೆ ಮಾಡುವವರಿಂದ ಉತ್ತೇಜನವೂ ಒಳಗೊಂಡಿರಬೇಕು. ಇದು ಆರೋಗ್ಯಕರ ಮತ್ತು ಸೌಖ್ಯದ ತಳಹದಿ ನಿರ್ಮಿಸಲು ಅವಕಾಶಗಳ ಹೆಬ್ಬಾಗಿಲಾಗಿದೆ ಅದರ ಅನುಕೂಲಗಳು ಜೀವನಪೂರ್ತಿ ಇರುತ್ತವೆ ಮತ್ತು ಮುಂದಿನ ತಲೆಮಾರಿಗೂ ಕೊಂಡೊಯ್ಯುತ್ತವೆ ಎಂದರು.
ಈ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬರ್ಥ್‌ದಿಚೇಂಜ್ ಮತ್ತು ಬರ್ಥಿಂಗ್ ದಿ ನ್ಯೂ ಹ್ಯುಮಾನಿಟಿಯ ಸಹ-ಸಂಸ್ಥಾಪಕ ಡಾ. ಫ್ರಾಂಕಾಯಿಸ್ ಗೆಲ್ಯಾಂಡ್; ಕ್ಲಿಯರ್‌ಸೆನ್ಸ್, ಎಲ್‌ಎಲ್‌ಸಿಯ ಚೀಫ್ ಇನ್ನೊವೇಷನ್ ಆಫೀಸರ್ ಶ್ರೀ ಚಾರ್ಲ್ಸ್ ಬಾಯ್ಸೀ; ಭಾರತದ ಹೈಪರ್‌ಬರ್ಥಿಂಗ್ ಚೈಲ್ಡ್ ಬರ್ಥ್ ಎಜುಕೇಟರ್ ಮತ್ತು ಲ್ಯಾಕ್ಟೇಷನ್ ಎಜುಕೇಟರ್, ಪೇರೆಂಟಲ್ ಸೈಕೊಥೆರಪಿಸ್ಟ್ ಡಾ.ಕಲ್ಯಾಣಿ ಎನ್. ಮತ್ತು ಶುಶ್ರೂಷಕಿ, ಬಾಂಗ್ಲಾದೇಶ್ ಅಡ್ವೆಂಟಿಸ್ಟ್ ನರ್ಸಿಂಗ್ ಇನ್ಸ್‌ಟಿಟ್ಯೂಟ್‌ನ ಪ್ರಿನ್ಸಿಪಾಲ್ ಸಾಂಡ್ರಾ ರೂಮಿ ತಮ್ಮ ವಿವಿಧ ವೈದ್ಯಕೀಯ ವಿಭಾಗದಲ್ಲಿನ ಸಾಧನೆಗಳನ್ನು ಅನಾವರಣಗೊಳಿಸಿದರು.
ಯುಎನ್ಐ ವಿಎನ್ 1830