Monday, Sep 16 2019 | Time 19:39 Hrs(IST)
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
 • ರೈಲು ನಿಲ್ದಾಣಗಳ ಮೇಲಿನ ಯಾವುದೇ ದಾಳಿ ತಡೆಯಲು ಹೆಚ್ಚಿನ ಭದ್ರತಾ ವ್ಯವಸ್ಥೆ
 • “ಶಕುಂತಲಾ ದೇವಿ” ಚಿತ್ರೀಕರಣ ಆರಂಭ
Entertainment Share

ಆರೋಗ್ಯ ಕಾಪಾಡಿಕೊಳ್ಳಲು ಜಿಮ್ ಗೆ ಹೋಗ್ತಾರಂತೆ ಮೇಘನಾ

-ಎಸ್ ಆಶಾ

ಬೆಂಗಳೂರು, ಜೂನ್ 11 (ಯುಎನ್ಐ) ನಟಿ ಮೇಘನಾ ರಾಜ್ ಚಂದನವನದ ಚಂದದ ಬೆಡಗಿ. ಹಿರಿಯ ಕಲಾವಿದರಾದ ಸುಂದರ ರಾಜ್, ಪ್ರಮೀಳಾ ಜೋಷಾಯ್ ದಂಪತಿಯ ಪುತ್ರಿ ಮಾತ್ರವಲ್ಲ, ಜನಪ್ರಿಯ ನಟ ಚಿರಂಜೀವಿ ಸರ್ಜಾ ಮನದನ್ನೆ.

ಪ್ರಸ್ತತ ಕನ್ನಡವೇ ಅಲ್ಲದೆ ಮಲಯಾಳಂ ಚಿತ್ರಗಳಲ್ಲೂ ನಟಿಸುತ್ತಿರುವ ಮೇಘನಾ ಸಖತ್ ಬಿಝಿ. ನಟಿ ಎಂದ ಮೇಲೆ ಸೌಂದರ್ಯದ ಬಗ್ಗೆ ಕಾಳಜಿ ಇರಲೇ ಬೇಕು, ಫಿಟ್ ನೆಸ್ ಕಾಪಾಡಿಕೊಳ್ಳಬೇಕು. ಮೇಘನಾ ಕೂಡ ಇದಕ್ಕೆ ಹೊರತಲ್ಲ.

ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನೆಲೆಯಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆ ಮೇಘನಾ ರಾಜ್ ಅವರನ್ನು ಮಾತಿಗೆಳೆದಾಗ, “ಯೋಗದ ಬಗ್ಗೆ ಹೆಚ್ಚಿನ ಅರಿವಿಲ್ಲ. ಈ ಹಿಂದೆ ಕೆಲ ಆಸನಗಳನ್ನು ಮಾಡುತ್ತಿದ್ದೆ. ಆದರೆ ಬಳಿಕ ಜಿಮ್ ನತ್ತ ಆಸಕ್ತಿ ಬೆಳೆಯಿತು” ಎಂದರು.

“ಯೋಗಾಭ್ಯಾಸವೇ ಇರಲಿ ಅಥವಾ ಜಿಮ್, ಏರೋಬಿಕ್ಸ್ ಕಸರತ್ತಿರಲಿ, ಒಟ್ಟಾರೆ ದೇಹದ ಆರೋಗ್ಯ ಮುಖ್ಯ. ದೇಹ, ಮನಸ್ಸುಗಳು ಚೇತೋಹಾರಿಯಾಗಿರಲು, ನಮಗೆ ಅನುಕೂಲವಾದ ಹಾದಿಯನ್ನು ಆಯ್ದುಕೊಳ್ಳಬೇಕು. ಸಮತೋಲಿತ ಆರೋಗ್ಯವೂ ಒಂದು ಯೋಗ” ಎಂದು ಹೇಳಿದರು.

ಸಾಮಾನ್ಯವಾಗಿ ಯುವತಿಯರು ವಿವಾಹವಾದ ಹೊಸತರಲ್ಲಿ ದೇಹ ಸೌಂದರ್ಯದ ಕಡೆಗೆ ಮನಸ್ಸು ಮಾಡುವುದಿಲ್ಲ. ತೂಕ ಮಿತಿ ಮೀರಿದಾಗ ಯೋಗ, ಜಿಮ್, ಏರೋಬಿಕ್ಸ್ ನಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ಮೇಘನಾ ರಾಜ್ ಮದುವೆಯ ಬಳಿಕವೂ ತಮ್ಮ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಯುಎನ್ಐ ಎಸ್ಎ ವಿಎನ್ 1902