Tuesday, Sep 29 2020 | Time 13:17 Hrs(IST)
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
 • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
 • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
 • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
 • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
Parliament Share

ಆರ್ಯುವೇದ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ

ಆರ್ಯುವೇದ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ
ಆರ್ಯುವೇದ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ

ನವದೆಹಲಿ, ಸೆ 16(ಯುಎನ್ಐ) ಆಯುರ್ವೇದ ಬೋಧನಾ ಹಾಗೂ ಸಂಶೋಧನಾ ಸಂಸ್ಥೆ ವಿಧೇಯಕಕ್ಕೆ ರಾಜ್ಯಸಭೆ ಬುಧವಾರ ಅಂಗೀಕಾರ ನೀಡಿದೆ.

ಆಯುರ್ವೇದ ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ವಿವಿಧ ಪಕ್ಷಗಳ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ವಿಧೇಯಕ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಧೇಯಕಕ್ಕೆ ಬೆಂಬಲ ಸೂಚಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಆಧುನಿಕ ವೈದ್ಯಕೀಯದಲ್ಲಿ ನಾನು ವೈದ್ಯನಾಗಿದ್ದರೂ, ಆಯುರ್ವೇದ ಜೊತೆಗೆ ಇತರ ಸಾಂಪ್ರದಾಯಿಕ ವೈದ್ಯಕೀಯ ಪದ್ದತಿಗಳ ಬಗ್ಗೆ ಮೆಚ್ಚಿಗೆಹೊಂದಿದ್ದೇನೆ ಎಂದು ಸಚಿವರು ಹೇಳಿದರು.

ಗುಜರಾತ್ ಜಾಮ್‌ನಗರದಲ್ಲಿ ಸ್ಥಾಪಿಸಲಿರುವ ಆರ್ಯುವೇದ ಸಂಸ್ಥೆ ಬಗ್ಗೆ ಸಚಿವರು ಸ್ಪಷ್ಟನೆ ನೀಡಿ, ದೇಶದ ಇತರ ಆರ್ಯುವೇದ ಸಂಸ್ಥೆಗಳನ್ನು ನಾವು ಗೌರವಿಸುತ್ತೇವೆ. ದೇಶದಲ್ಲಿ 103 ಆರೋಗ್ಯ ಸಂಸ್ಥೆಗಳು ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿವೆ, ಜಾಮ್ ನಗರ್ ಆಯುರ್ವೇದ ಕಾಲೇಜಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಲ್ಲಿ ಯಾವುದೇ ಪಕ್ಷಪಾತವಿಲ್ಲ ಎಂದು ಸ್ಪಷ್ಟಪಡಿಸಿದರು. ಜಾಮ್‌ನಗರದಲ್ಲಿರುವ ಈ ಸಂಸ್ಥೆ ಅತ್ಯಂತ ಹಳೆಯದು, ಇದನ್ನು ಸರ್ಕಾರ ಸ್ಥಾಪಿಸಿದೆ ಎಂದರು. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಕೆಲಸ ಮಾಡುವ ಏಕೈಕ ಆಯುರ್ವೇದ ಸಂಸ್ಥೆಯಾಗಿದೆ. ಹಾಗಾಗಿ ಈ ಸ್ಥಾನಮಾನ ಹೊಂದಲು ಸೂಕ್ತವಾಗಿದೆ ಎಂದರು. ಇತರ ಆಯುರ್ವೇದ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಿದ ನಂತರ ಅವುಗಳಿಗೂ ರಾಷ್ಟ್ರೀಯ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಯುಎನ್ಐ ಕೆವಿಆರ್ 1220

More News

ಲೋಕಸಭೆಯಲ್ಲಿ ಶೇ 167 ಉತ್ಪಾದಕತೆ: ಓಂ ಬಿರ್ಲಾ

23 Sep 2020 | 10:20 PM

 Sharesee more..
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..
58 ದೇಶಗಳು 517 ಕೋಟಿ  ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..