Saturday, Feb 29 2020 | Time 16:15 Hrs(IST)
 • ಯಡಿಯೂರಪ್ಪ ಹುಟ್ಟು ಹೋರಾಟಗಾರರೇ ಆದರೆ ಕೆಪಿಎಸ್ಸಿ ಅಕ್ರಮ ಬಯಲಿಗೆಳೆಯಲಿ; ಚಿಂತಕ ಪ್ರೊ ಮಹೇಶ್ ಚಂದ್ರ ಗುರು ಮುಖ್ಯಮಂತ್ರಿಗಳಿಗೆ ತಾಕೀತು
 • ಬಿಬಿಎಂಪಿ ಸಭೆ; ಇಂದಿರಾ ಕ್ಯಾಂಟೀನ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಕಿಡಿ
 • ಇರಾನ್ ನಲ್ಲಿರುವ ಕಾಶ್ಮೀರ ವಿದ್ಯಾರ್ಥಿಗಳು ವಾಪಸ್ಸಾಗಲು ಸೌಲಭ್ಯ ಕಲ್ಪಿಸಿ; ಸಚಿವ ಜೈಶಂಕರ್ ಗೆ ಸೋಜ್ ಮನವಿ
 • ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೇಲು: ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ
 • ಮಲೇಷಿಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಮಲೇಷಿಯಾದ ನೂತನ ಪ್ರಧಾನಮಂತ್ರಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
Sports Share

ಆರ್‌ಸಿಬಿ ತಂಡದ ಲೋಗೋ ಬದಲಾವಣೆ: 2020ಕ್ಕೆ ಅದೃಷ್ಠ ನೀಡುವುದೇ ಲಾಂಛನ?

ಬೆಂಗಳೂರು, ಫೆ 14(ಯುಎನ್‌ಐ) ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅದೃಷ್ಟವಿಲ್ಲ. ಇದರಿಂದಾಗಿ ಒಮ್ಮೆಯೂ ಚಾಂಪಿಯನ್ ಪಟ್ಟ ಅಲಂಕರಿಸಿರಲಿಲ್ಲ. ಈ ಕುಖ್ಯಾತಿಯಿಂದ ತಂಡವನ್ನು ಪಾರು ಮಾಡಲು ಆರ್‌ಸಿಬಿ ಫ್ರಾಂಚೈಸಿ ಮುಂಬರುವ 2020ರ ಐಪಿಎಲ್‌ ಟೂರ್ನಿಗೆ ಲಾಂಛನವನ್ನು ಶುಕ್ರವಾರ ಬದಲಾವಣೆ ಮಾಡಿದೆ. ಆ ಮೂಲಕ ಕಳೆದ ಎರಡು ದಿನಗಳಿಂದ ಆರ್‌ಸಿಬಿ ಫ್ರಾಂಚೈಸಿ ಸಾಮಾಜಿಕ ಜಾಲ ತಾಣದಲ್ಲಿ ತೆಗೆಯಲಾಗಿದ್ದ ಲೋಗೋ ಹಾಗೂ ಪ್ರೊಫೈಲ್ ಚಿತ್ರ ಇದೀಗ ಪರಿಷ್ಕರಣಿಗೊಂಡಿದ್ದು ಮುಂದಿನ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಚಾಂಪಿಯನ್ ಆಗುವುದೇ ಎಂದು ಕಾದು ನೋಡಬೇಕಾಗಿದೆ.
ಭವ್ಯ ಸಿಂಹದೊಂದಿಗೆ ಮರುವಿನ್ಯಾಸಗೊಳಿಸಲಾದ ಲೋಗೋ ಆರ್‌ಸಿಬಿಯ ತತ್ತ್ವಶಾಸ್ತ್ರವನ್ನು ವಿವರಿಸುತ್ತದೆ ಮತ್ತು ಜೀವಂತಿಕೆಯನ್ನು ತರುತ್ತದೆ. ಅತ್ಯಾಕರ್ಷಕ ಕ್ರಿಕೆಟ್ ಆಡುವ ದಿಟ್ಟ ಮತ್ತು ನಿರ್ಭೀತ ಮನೋಭಾವವನ್ನು ಇದು ಸೂಚಿಸುತ್ತದೆ.
ಕಳೆದ ವರ್ಷಾಂತ್ಯದಲ್ಲಿ ಐಪಿಎಲ್ 13ನೇ ಆವೃತ್ತಿಗಾಗಿ ನಡೆದ ಹರಾಜಿನ ಬಳಿಕ ಲೊಗೊದಿಂದ ಬೆಂಗಳೂರು ಹೆಸರನ್ನು ತೆಗೆದು ಹಾಕಿರುವುದು ಕನ್ನಡಾಭಿಮಾನಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಹೊಸ ಲೊಗೊದಲ್ಲಿ ತಪ್ಪನ್ನು ತಿದ್ದಿರುವ ಆರ್‌ಸಿಬಿ ಪರಿಷ್ಕೃತ ಲೊಗೊದಲ್ಲಿ ಬೆಂಗಳೂರು ಎಂಬ ಪದವನ್ನು ಆರಂಭದಲ್ಲೇ ಚಿನ್ನದ ವರ್ಣದಲ್ಲಿ ಉಲ್ಲೇಖಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ.
ರಾಯಲ್ ಚಾಜಲೆಂಜರ್ಸ್ ಬೆಂಗಳೂರು ತಂಡದ ಲಾಂಛನ ಪರಿಷ್ಕೃತಗೊಂಡಿರುವ ಬೆನ್ನಲ್ಲೇ ತಂಡದ ಸಮವಸ್ತ್ರವೂ ಬದಲಾಗುತ್ತಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಐಪಿಎಲ್‌ನಲ್ಲಿ ಪ್ರತಿ ಸಾಲಿನಲ್ಲೂ ವಾಡಿಕೆಯಂತೆ ಎಲ್ಲ ತಂಡಗಳು ಜೆರ್ಸಿಯಲ್ಲಿ ಸಣ್ಣ ಪುಟ್ಟ ಮಾರ್ಪಾಡುಗಳನ್ನು ತರುತ್ತದೆ. ಈ ನಿಟ್ಟಿನಲ್ಲಿ ಆರ್‌ಸಿಬಿ 'ಹೋಮ್' ಹಾಗೂ 'ಎವೇ' ಜೆರ್ಸಿಗಳು ಹೇಗೆ ಕಾಣಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಯುಎನ್‌ಐ ಆರ್‌ಕೆ 1338