Thursday, Nov 21 2019 | Time 21:18 Hrs(IST)
 • ಕರ್ನಾಟಕಕ್ಕೆೆ 159 ರನ್ ಗುರಿ ನೀಡಿದ ತಮಿಳುನಾಡು
 • ಉಪ ಚುನಾವಣೆಗೆ ಅಖಾಡ ಸಜ್ಜು: 53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, 165 ಅಭ್ಯರ್ಥಿಗಳು ಕಣದಲ್ಲಿ: ಸಂಜೀವ್ ಕುಮಾರ್
 • ಟಿ-20 ಮಹಿಳಾ ಶ್ರೇಯಾಂಕ: ರೊಡ್ರಿಗಸ್, ರಾಧ ಯಾದವ್‌ಗೆ ಬಂಪರ್
 • ದಾದಾ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
 • ಬಿಜೆಪಿ ಒತ್ತಡದಿಂದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ:ಹೆಚ್ ಡಿ ದೇವೇಗೌಡ
 • ಎಲ್ಲ ಬ್ಯಾಟ್ಸ್‌‌ಮನ್‌ಗಳು ಶೂನ್ಯಕ್ಕೆೆ ಔಟ್ ! : ಶಾಲಾ ಟೂರ್ನಿಯಲ್ಲಿ ಅನಗತ್ಯ ದಾಖಲೆ
 • ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್
 • ಮೀನುಗಾರಿಕೆ ನಿಯಂತ್ರಣ ನೀತಿ ತಿದ್ದುಪಡಿಗೆ ಪ್ರಸ್ತಾವನೆ ; ಸಚಿವ ಶ್ರೀನಿವಾಸ ಪೂಜಾರಿ
 • ಕೊರಿಯಾ ಓಪನ್: ಎರಡನೇ ಸುತ್ತಿನಲ್ಲಿ ಶ್ರೀಕಾಂತ್, ಸಮೀರ್‌ಗೆ ಸೋಲು
 • ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
 • ಅರಣ್ಯ ಕಾಯ್ದೆ ಕುರಿತು ಜಾವಡೇಕರ್ ಹೇಳಿಕೆ ಚುನಾವಣಾ ಆಯೋಗದಿಂದ ಪರಿಶೀಲನೆ
 • ಆಯೋಧ್ಯೆ ತೀರ್ಪು; ಪುರಿಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅತೃಪ್ತಿ
 • ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳ: ಬಿಬಿಎಂ ವಿದ್ಯಾರ್ಥಿ ಕೊಲೆ
 • ನಾಳೆ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ
 • ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌
Sports Share

ಆಸೀಸ್ ಅಬ್ಬರ್, ಸರಣಿ ಕೈ ಚೆಲ್ಲಿದ ಪಾಕ್

ಪರ್ತ್, ನ.8 (ಯುಎನ್ಐ)- ಅನುಭವಿ ಬೌಲರ್ ಕೇನ್ ರಿಚರ್ಡ್ಸನ್ (18ಕ್ಕೆ 3) ಹಾಗೂ ಏರಾನ್ ಫಿಂಚ್ (ಅಜೇಯ 52) ಅವರ ಉತ್ತಮ ಆಟದ ನೆರವಿನಿಂದ ಆಸ್ಟ್ರೇಲಿಯಾ 10 ವಿಕೆಟ್ ಗಳಿಂದ ಮೂರನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ, 2-0ಯಿಂದ ಸರಣಿ ವಶಕ್ಕೆ ಪಡೆಯಿತು.

ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲಾದರು. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಹ್ಯಾರಿಸ್ ಸೋಹಿಲ್ ರನ್ ಬರ ಅನುಭವಿಸಿದರು. ಪಾಕ್ ಪರ ಇಫ್ತಿಖರ್ ಅಹ್ಮದ್ 37 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 45 ರನ್ ಬಾರಿಸಿತು.

ಉಳಿದ ಬ್ಯಾಟ್ಸ್ ಮನ್ ಗಳು ನೆಲಕಚ್ಚಿ ಬ್ಯಾಟಿಂಗ್ ನಡೆಸಲಿಲ್ಲ. ಅಂತಿಮವಾಗಿ ಪಾಕ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 106 ರನ್ ಸೇರಿಸಿತು. ಆಸೀಸ್ ಪರ ಕೇನ್ ರಿಚರ್ಡ್ಸನ್ ಮೂರು, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್ ತಲಾ ಎರಡು ವಿಕೆಟ್ ಪಡೆದರು.

ಗುರಿಯನ್ನು ಹಿಂಬಾಲಿಸಿದ ಆಸೀಸ್ ತಂಡದ ಆರಂಭ ಭರ್ಜರಿಯಾಗಿತ್ತು. ಡೇವಿಡ್ ವಾರ್ನರ್ ಹಾಗೂ ಏರಾನ್ ಫಿಂಚ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ತಂಡಕ್ಕೆ ಜಯದ ಮಾಲೆ ತೊಡಿಸುವಲ್ಲಿ ಸಫಲರಾದರು.

ಆರಂಭಿಕರಾದ ಡೇವಿಡ್ ವಾರ್ನರ್ 35 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 48 ರನ್ ಬಾರಿಸಿದರೆ, ಏರಾನ್ ಫಿಂಚ್ ಅಜೇಯ 52 ರನ್ ಸಿಡಿಸಿದರು. ಅಂತಿಮವಾಗಿ ಆಸೀಸ್ 11.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 109 ರನ್ ಬಾರಿಸಿ ಜಯ ದಾಖಲಿಸಿತು.

ಯುಎನ್ಐ ವಿಎನ್ಎಲ್ 1709