Saturday, Jan 16 2021 | Time 07:58 Hrs(IST)
National Share

ಆಂಧ್ರ ರಸ್ತೆ ಸಾರಿಗೆ ಬಸ್‌- ಆಟೋರಿಕ್ಷಾ ನಡುವೆ ಡಿಕ್ಕಿ: ಮೂವರು ಸಾವು, ಇಬ್ಬರಿಗೆ ಗಾಯ

ಕಡಪ, ಜ 13 (ಯುಎನ್‌ಐ) ಜಿಲ್ಲೆಯ ಮುದ್ದನೂರು ಗ್ರಾಮದಲ್ಲಿ ಬುಧವಾರ ಆಟೋರಿಕ್ಷಾ ಮತ್ತು ಆಂಧ್ರ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್‌ಆರ್‌ಟಿಸಿ) ಬಸ್‌ ನಡುವೆ ಡಿಕ್ಕಿ ಸಂಭವಿಸಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಇತರ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯರನ್ನು ಬಾಲವರ್ಧನಮ್ಮ (57), ನರಸಮ್ಮ (46), ಆದಿ ಲಕ್ಷ್ಮಿ (35) ಎಂದು ಗುರುತಿಸಲಾಗಿದ್ದು, ಇವರೆಲ್ಲ ದಿನಸಿ ಖರೀದಿಸಲು ಮುದ್ದನೂರಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯರು ಆಟೋರಿಕ್ಷಾದಲ್ಲಿ ತಮ್ಮ ಸ್ವಗ್ರಾಮ ಪೆದ್ದ ದುದ್ಯಾಲಕ್ಕೆ ಹಿಂದಿರುಗುತ್ತಿದ್ದಾಗ ಬಿಎಸ್‌ಎನ್‌ಎಲ್ ಕಚೇರಿ ಬಳಿ ಪುಲಿವೆಂದುಲದಿಂದ ಪ್ರೊದ್ದಟೂರಿಗೆ ಹೋಗುತ್ತಿದ್ದ ವೇಗದ ಎಪಿಎಸ್‌ಆರ್‌ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ.
ಬಸ್‌ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಗಾಯಾಳುಗಳನ್ನು ಜಮ್ಮಲಮಡುಗುನಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುಎನ್ಐ ಎಸ್ಎಲ್ಎಸ್ 1800