Tuesday, Jan 21 2020 | Time 23:02 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
Entertainment Share

ಆ 23ರಿಂದ ಶಂಕರ್ ನಾಗ್ “ಫ್ಯಾನ್” ತಂಗಾಳಿ : ಆಟೋ ಚಾಲಕರಿಗೆ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಉಚಿತ ಟಿಕೆಟ್

ಆ 23ರಿಂದ ಶಂಕರ್ ನಾಗ್ “ಫ್ಯಾನ್” ತಂಗಾಳಿ : ಆಟೋ ಚಾಲಕರಿಗೆ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಉಚಿತ ಟಿಕೆಟ್
ಆ 23ರಿಂದ ಶಂಕರ್ ನಾಗ್ “ಫ್ಯಾನ್” ತಂಗಾಳಿ : ಆಟೋ ಚಾಲಕರಿಗೆ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಉಚಿತ ಟಿಕೆಟ್

ಬೆಂಗಳೂರು, ಆ 13 (ಯುಎನ್ಐ) ಅಭಿಮಾನಿಯ ಅಭಿಮಾನವನ್ನು ಸಾರುವ “ಫ್ಯಾನ್” ಚಿತ್ರ ಇದೇ 23ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಶಂಕರ್ ನಾಗ್ ಅವರನ್ನೇ ಆಧಾರವಾಗಿಟ್ಟುಕೊಂಡು ಅವರ ಜೀವನ ಚರಿತ್ರೆಯಿಂದ ಪ್ರೇರಣೆ ಪಡೆದು ನಿರ್ಮಿಸಿರುವ ಚಿತ್ರ ಹೀಗಾಗಿ ಅವರ ಕಟ್ಟಾ ಅಭಿಮಾನಿಗಳಾದ ಆಟೋ ಚಾಲಕರಿಗೆ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಉಚಿತ ಟಿಕೆಟ್ ನೀಡುವುದಾಗಿ ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು ಘೋಷಿಸಿದ್ದಾರೆ ಆಟೊ ಚಾಲಕರು ತಮ್ಮ ಆಟೋ ಚಾಲನೆಯ ರಹದಾರಿ ಪತ್ರ ನೀಡಿ ಉಚಿತ ಟಿಕೆಟ್ ಪಡೆದು ಚಿತ್ರ ವೀಕ್ಷಿಸಬಹುದು ಎಂದು ಮಾಹಿತಿ ನೀಡಿದ್ದಾರೆಶಂಕರ್ ನಾಗ್ ಅಭಿಮಾನಿಗೊಬ್ಬ ಅಭಿಮಾನಿಯಿದ್ದು, ಮುಂದೇನಾಗುತ್ತದೆ, ಅಭಿಮಾನಕ್ಕೆ ಅದೆಷ್ಟು ಘನತೆಯಿದೆ, ಶಂಕರ್ ನಾಗ್ ಅವರನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದು ಚಿತ್ರದ ತಿರುಳು ಹೊನ್ನಾವರ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಶೇ 80ರಷ್ಟು ಚಿತ್ರೀಕರಣವಾಗಿದ್ದು, ಅದ್ಭುತ ನಟ ನಡೆದಾಡಿದ ನೆಲ ಎಂಬ ಕಾರಣಕ್ಕೆ ಎಲ್ಲರ ಮನಸ್ಸಿಗೆ ಹತ್ತಿರವಾಗುತ್ತದೆ ಅಲ್ಲದೆ ಉತ್ತರಕನ್ನಡ ಜಿಲ್ಲೆಯ ಹವ್ಯಕ ಭಾಷೆಯನ್ನು ಚಿತ್ರದಲ್ಲಿ ಬಳಸಿರುವುದು ವಿಶೇಷಎಸ್ ಎಲ್ ಎಸ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಸವಿತಾ ಈಶ್ವರ್, ಶಶಿಕಿರಣ್ ಎಂ ಇ ಬಂಡವಾಳ ಹೂಡಿರುವ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಹೊಣೆಯನ್ನು ದರ್ಶಿತ್ ಭಟ್ ನಿರ್ವಹಿಸಿದ್ದು, ಮಂಗಳವಾರ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ಹೊನ್ನಾವರದಲ್ಲಿ ಚಿತ್ರೀಕರಿಸಲಾಗಿರುವ ಯೋಗರಾಜ್ ಭಟ್ ಸಾಹಿತ್ಯದ “ನಾಲಿಗೆಗೆ ಜ್ವರ ಬಂದಂತಿದೆ” , ಜಯಂತ್ ಕಾಯ್ಕಿಣಿ ಬರೆದಿರುವ “ಯಾಕೆ ನಾನಿಷ್ಟ ಅಂತ ಹೇಳು”, ಸಂಭಾಷಣೆಯ ರೂಪದಲ್ಲಿರುವ “ಹಾಯ್ ಹಲ್ಲೋ ಸರ್” ಎಂಬ ವಿಶಿಷ್ಟ ಗೀತೆ ಈಗಾಗಲೇ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಲಕ್ಷಾಂತರ ಲೈಕ್ಸ್ ಪಡೆದಿದೆಶಂಕರ್ ನಾಗ್ ಅಭಿಮಾನಿಯ ಪಾತ್ರದಲ್ಲಿ ಆರ್ಯನ್, ಸೀರಿಯಲ್ ನಟನ ಅಭಿಮಾನಕ್ಕಾಗಿ ತುಡಿಯುವ ಮುಗ್ಧ ಅಭಿಮಾನಿಯಾಗಿ ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ ಈಗಾಗಲೇ ಧಾರಾವಾಹಿಗಳ ಮೂಲಕ ಗಮನ ಸೆಳೆದಿರುವ ಸಮೀಕ್ಷಾ, ಸೆಲೆಬ್ರಿಟಿ ಹೀರೋಯಿನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ

ತಾರಾಗಣದಲ್ಲಿ ಆರ್ಯನ್, ಅದ್ವಿತಿ ಶೆಟ್ಟಿ, ಸಮೀಕ್ಷಾ, ಮಂಡ್ಯ ರಮೇಶ್, ನವೀನ್ ಪಡೀಲ್, ರವಿ ಭಟ್, ರಘುಪಾಂಡೇಶ್ವರ್, ವಿಜಯ್ ಕಾಶಿ, ಸ್ವಾತಿ, ವಿಜಯಲಕ್ಷ್ಮೀ ಉಪಾಧ್ಯಾಯ, ವಿಟ್ಲ ಮಂಗೇಶ್ ಭಟ್, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ್, ಗಣೇಶ್ ಕೊಂಡಾಣಿ, ಪ್ರಣತಿ ಆರ್ ಗಾಣಿಗ, ಉದಯ್ ರಾಜು ಮೇಸ್ತಾ ಮುಂತಾದವರಿದ್ದಾರೆಯುಎನ್ಐ ಎಸ್ಎ ಎಸ್ಎಚ್ 1633

More News
`ನಾನು ಮತ್ತು ಗುಂಡ’ ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ!

`ನಾನು ಮತ್ತು ಗುಂಡ’ ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ!

21 Jan 2020 | 7:22 PM

ಬೆಂಗಳೂರು, ಜ 21 (ಯುಎನ್‍ಐ) ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ ‘ನಾನು ಮತ್ತು ಗುಂಡ’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..