Saturday, Jul 11 2020 | Time 09:45 Hrs(IST)
International Share

ಇನ್ನು ಮುಂದೆ ಬಾಂಗ್ಲಾದೇಶದಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಶುಲ್ಕ

ಢಾಕಾ, ಜೂನ್ 29 (ಯುಎನ್ಐ) ಬಾಂಗ್ಲಾದೇಶದಲ್ಲಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ನಡೆಸುವ ಕೊರೊನಾ ವೈರಾಣು ಸೋಂಕು ಪರೀಕ್ಷೆಗೆ ಶುಲ್ಕ ವಿಧಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅನಗತ್ಯ ಪರೀಕ್ಷೆಗಳನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಯೋಗಾಲಯದಲ್ಲಿ ಸಂಗ್ರಹಿಸುವ ಮಾದರಿಗಳಿಗೆ 200 ಟಾಕಾ ಹಾಗೂ ಮನೆಗಳಿಂದ ಸಂಗ್ರಹಿಸುವ ಮಾದರಿಗಳಿಗೆ 500 ಟಾಕಾ ವಿಧಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತಿತ್ತು.
ಈ ಮಧ್ಯೆ ಬಾಂಗ್ಲಾದೇಶದಲ್ಲಿ ಸೋಮವಾರ ಒಂದೇ ದಿನದ ಅತಿ ಹೆಚ್ಚು 4014 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಅಲ್ಲದೇ 45 ಜನರು ಮೃತಪಟ್ಟಿದ್ದಾರೆ. 2053 ಜನರು ಚೇತರಿಸಿಕೊಂಡಿದ್ದಾರೆ.
ಈವರೆಗೆ 1,41,801 ಸೋಂಕು ಪ್ರಕರಣಗಳು ದೃಢಪಟ್ಟಿದ್ದು 1783 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ 8 ರಿಂದ ಈವರೆಗೆ ಬಾಂಗ್ಲಾದೇಶದಲ್ಲಿ 7,48,034 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಬಾಂಗ್ಲಾದೇಶದ ರಕ್ಷಣಾ ಕಾರ್ಯದರ್ಶಿ ಮೋಹ್ಸಿನ್ ಚೌಧರಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಕೊರೊನಾ ಬಿಕ್ಕಟ್ಟು ನಿವಾರಣೆಗೆ 2000 ವೈದ್ಯರನ್ನು 4000 ಶುಶ್ರೂಷಕ/ಕಿಯರನ್ನು ಶೀಘ್ರದಲ್ಲೇ ಸರ್ಕಾರ ನೇಮಕ ಮಾಡಲಿದೆ ಎಂದು ಸಂಸತ್ತಿನಲ್ಲಿ ಪ್ರಧಾನಿ ಶೇಕ್ ಹಸೀನಾ ಸೋಮವಾರ ಘೋಷಿಸಿದ್ದಾರೆ.
ಯುಎನ್ಐ ಜಿಎಸ್ಆರ್ 2214
More News

ಬ್ರೆಜಿಲ್ ನಲ್ಲಿ ಕರೋನ ಸೋಂಕಿಗೆ 70 ಸಾವಿರ ಬಲಿ

11 Jul 2020 | 9:13 AM

 Sharesee more..

ಮೆಕ್ಸಿಕೊದಲ್ಲಿ 6,891 ಹೊಸ ಕರೋನ ಪ್ರಕರಣ ದಾಖಲು

11 Jul 2020 | 8:47 AM

 Sharesee more..

ದಕ್ಷಿಣ ಫಿಲಿಪೈನ್ಸ್ನಲ್ಲಿ 5 2-ತೀವ್ರತೆಯ ಭೂಕಂಪನ

11 Jul 2020 | 8:39 AM

 Sharesee more..
ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

ಅಮೆರಿಕದಲ್ಲಿ ಒಂದೇ ದಿನದಲ್ಲಿ ಅತಿಹೆಚ್ಚು 63,200 ಕರೋನವೈರಸ್ ಪ್ರಕರಣಗಳು ವರದಿ

10 Jul 2020 | 8:57 PM

ವಾಷಿಂಗ್ಟನ್, ಜುಲೈ 10 (ಸ್ಪುಟ್ನಿಕ್) ಅಮೆರಿಕದಲ್ಲಿ ಒಂದೇ ದಿನದಲ್ಲಿ ಕೊರೊನವೈರಸ್‍ ಪ್ರಕರಣಗಳು ಹೊಸ ಎತ್ತರವನ್ನು ತಲುಪಿದ್ದು, ಕಳೆದ 24 ಗಂಟೆಗಳಲ್ಲಿ ಆರೋಗ್ಯ ಅಧಿಕಾರಿಗಳು 63,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳನ್ನು ವರದಿ ಮಾಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.

 Sharesee more..