Saturday, Nov 23 2019 | Time 03:57 Hrs(IST)
  • ಜಾರ್ಖಂಡ್: ಲತೇಹಾರ್‌ನಲ್ಲಿ ನಕ್ಸಲರೊಂದಿಗೆ ನಡೆದ ಘರ್ಷಣೆಯಲ್ಲಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್‌ ಹುತಾತ್ಮ
  • ಆಸ್ಟ್ರೇಲಿಯಾದ ಇಬ್ಬರು ಸಚಿವರೊಂದಿಗೆ ಪೋಖ್ರಿಯಾಲ್‍ ದ್ವಿಪಕ್ಷೀಯ ಮಾತುಕತೆ
International Share

ಇರಾನ್‌ನಲ್ಲಿ ಪ್ರಬಲ 5.9 ತೀವ್ರತೆಯ ಭೂಕಂಪನ; ಐವರ ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

ಇರಾನ್‌ನಲ್ಲಿ ಪ್ರಬಲ 5.9 ತೀವ್ರತೆಯ ಭೂಕಂಪನ; ಐವರ ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ
ಇರಾನ್‌ನಲ್ಲಿ ಪ್ರಬಲ 5.9 ತೀವ್ರತೆಯ ಭೂಕಂಪನ; ಐವರ ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

ಟೆಹ್ರಾನ್, ನವೆಂಬರ್ 8 (ಯುಎನ್‌ಐ) ವಾಯವ್ಯ ಇರಾನ್‌ನಲ್ಲಿ ಇಂದು ಮುಂಜಾನೆ ನಡೆದ 5.9 ತೀವ್ರತೆಯ ಭೂಕಂಪನದಿಂದ ಕನಿಷ್ಠ ಐವರು ಸಾವನ್ನಪ್ಪಿ, ಸುಮಾರು 120 ಮಂದಿ ಗಾಯಗೊಂಡಿದ್ದಾರೆ.

ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ರಾಜಧಾನಿಯಾದ ತಬ್ರಿಜ್ ನಗರದ ಪೂರ್ವಕ್ಕೆ 118 ಕಿಲೋಮೀಟರ್ (73 ಮೈಲಿ) ದೂರದಲ್ಲಿ ಶುಕ್ರವಾರ ಮುಂಜಾನೆ 5.7ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ (ಇಎಂಎಸ್‌ಸಿ) ದತ್ತಾಂಶ ತಿಳಿಸಿದೆ.

ಸುತ್ತಮುತ್ತಲ ನಗರಗಳಲ್ಲಿ 4.1-4.8ರಷ್ಟು ಭೂಮಿ ಕಂಪಿಸಿದೆ ಎಂದು ಪ್ರೆಸ್ ಟಿವಿ ವರದಿ ಮಾಡಿದೆ.

ಅಧಿಕಾರಿಗಳು ಎಂಟು ರಕ್ಷಣಾ ನಿರ್ವಹಣಾ ತಂಡಗಳನ್ನು ಭೂಕಂಪ ಪೀಡಿತ ಪ್ರದೇಶಗಳಿಗೆ ರವಾನಿಸಿದ್ದಾರೆ ಎಂದು ಪೂರ್ವ ಅಜರ್‌ಬೈಜಾನ್‌ನ ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥ ಮುಹಮ್ಮದ್ ಬಾಕರ್ ಹೊನಾರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಭೂಕಂಪದಿಂದ ಕನಿಷ್ಠ ಮೂರು ಗ್ರಾಮಗಳು ಮತ್ತು ಮಿಯಾನೆ ನಗರಗಳಲ್ಲಿನ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ ಎಂದು ಅದು ತಿಳಿಸಿದೆ.

ಇರಾನ್ ದೇಶವು, ಭೂಕಂಪನ ಹೆಚ್ಚಾಗಿ ಸಂಭವಿಸುವ ವಲಯದಲ್ಲಿದೆ ಮತ್ತು ಆಗಾಗ್ಗೆ ಪ್ರಬಲ ಭೂಕಂಪಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ. 2017 ರ ನವೆಂಬರ್‌ನಲ್ಲಿ ಇರಾನ್-ಇರಾಕ್ ಗಡಿಯ ಸಮೀಪವಿರುವ ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ನೂರಾರು ಜನರು ಸಾವನ್ನಪ್ಪಿದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು.

ಯುಎನ್ಐ ಎಎಚ್ 1012

More News
ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯ ವೀಕ್ಷಿಸಲು ಕೋಲ್ಕತ್ತಾಕ್ಕೆ ಬಂದಿಳಿದ ಶೇಖ್ ಹಸೀನಾ

ಭಾರತ-ಬಾಂಗ್ಲಾದೇಶ ಟೆಸ್ಟ್ ಪಂದ್ಯ ವೀಕ್ಷಿಸಲು ಕೋಲ್ಕತ್ತಾಕ್ಕೆ ಬಂದಿಳಿದ ಶೇಖ್ ಹಸೀನಾ

22 Nov 2019 | 1:28 PM

ಢಾಕ, ನ.22 (ಯುಎನ್ಐ) ಭಾರತ ಮತ್ತು ಬಾಂಗ್ಲಾದೇಶ ನಡುವೆ ಶುಕ್ರವಾರ ನಡೆಯುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ಶೇಖ್ ಹಸೀನಾ ಅವರು ಢಾಕಾದಿಂದ ವಿಶೇಷ ವಿಮಾನದ ಮೂಲಕ ಕೋಲ್ಕತ್ತಾಗೆ ಬಂದಿಳಿದಿದ್ದಾರೆ.

 Sharesee more..

ಇರಾಕಿನಲ್ಲಿ ಭುಗಿಲೆದ್ದ ಪ್ರತಿಭಟನೆ : 9 ಸಾವು

22 Nov 2019 | 8:39 AM

 Sharesee more..