Saturday, Jan 18 2020 | Time 20:42 Hrs(IST)
 • ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
 • “ಉತ್ತರ ಕೊಡಿ ಅಮಿತ್ ಶಾ’ ರಾಜ್ಯ ಕಾಂಗ್ರೆಸ್ ನಿಂದ ಸರಣಿ ಟ್ವೀಟ್ ಸವಾಲು
 • ಸಿನಿಮಾ, ದಾರಾವಾಹಿಗಳ ಅಬ್ಬರದ ನಡುವೆಯೂ ರಂಗಭೂಮಿ ಪ್ರೇಕ್ಷಕರಿಗೆ ಕೊರೆತೆಯಾಗಿಲ್ಲ: ಶೇಖ್ ಮಾಸ್ತರ
 • ರಜನಿಕಾಂತ್ ವಿರುದ್ದ ಪ್ರಕರಣ ದಾಖಲು
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
 • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
 • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
International Share

ಇರಾನ್ ನಲ್ಲಿ ಯುಕ್ರೇನ್ ವಿಮಾನ ಪತನ ಘಟನೆ: ಅನೇಕರ ಬಂಧನ

ಟೆಹ್ರಾನ್, ಜ14(ಸ್ಪುಟ್ನಿಕ್)- ಇರಾನ್ ನಲ್ಲಿ ಯುಕ್ರೇನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿ ಇರಾನ್ ಸರ್ಕಾರ ಅನೇಕರನ್ನು ಬಂಧಿಸಿದೆ ಎಂದು ಅಲ್ಲಿನ ನ್ಯಾಯಾಂಗ ವಕ್ತಾರ ಗೊಲಾಮ್ ಹೊಸೇನ್ ಇಸ್ಮಾಯಿಲ್ ಮಂಗಳವಾರ ತಿಳಿಸಿದ್ದಾರೆ.
ಜ 8ರಂದು ಟೆಹ್ರಾನ್ ನ ಇಮಾಮ್ ಖೋಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಕ್ರೇನ್ ನ ಕೀವ್ ಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲ 176 ಮಂದಿ ಮೃತಪಟ್ಟಿದ್ದರು.
‘ ವಿಮಾನ ಪತನ ಪ್ರಕರಣದಲ್ಲಿ ಪಾತ್ರ ವಹಿಸಿದ್ದಾರೆನ್ನಲಾದ ಕೆಲವರನ್ನು ಬಂಧಿಸಲಾಗಿದೆ. ವಿಮಾನ ಪತನಕ್ಕೆ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.’ ಎಂದು ವಕ್ತಾರರು ತಿಳಿಸಿದ್ದಾರೆ.
ಡಿಕೋಡಿಂಗ್ ಗಾಗಿ ಬ್ಲಾಕ್ ಬಾಕ್ಸ್ ಗಳ ಪೈಕಿ ಒಂದನ್ನು ಫ್ರಾನ್ಸ್ ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ ನ ಕಮಾಂಡರ್ ಖಾಸೆಮ್ ಸೊಲೆಮನಿ ಅವರು ಇರಾಕ್ ನ ಬಾಗ್ದಾದ್ ನಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತ್ಯೆಯಾಗಿ ಇರಾನ್ ನಲ್ಲಿ ಉದ್ವಿಗ್ನತೆ ಎದುರಾದ ಒಂದು ವಾರದಲ್ಲೇ ವಿಮಾನ ಪತನವಾಗಿತ್ತು.
ಯುಎನ್ ಐ ಎಸ್‍ಎಲ್ ಎಸ್ 1422