Sunday, Nov 17 2019 | Time 15:06 Hrs(IST)
 • ಕಾಶ್ಮೀರದಲ್ಲಿ ಹೆಚ್ಚಿನ ಅಂಗಡಿಗಳು ಪುನರಾರಂಭ: ಸಾಮಾನ್ಯ ಸ್ಥಿತಿಯತ್ತ ಜನ-ಜೀವನ
 • ಮೀಸಲಾತಿಗೆ ಶತಶತಮಾನಗಳ ಇತಿಹಾಸವಿದೆ: ನಾಡೋಜ ಬರಗೂರು ರಾಮಚಂದ್ರಪ್ಪ
 • ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ; ಜಯಗಳಿಸಿರುವ ಗೋಟ ಬಯಾ ರಾಜಪಕ್ಸೆ ಗೆ ಪ್ರಧಾನಿ ಮೋದಿ ಅಭಿನಂದನೆ
 • ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ
 • ಮೂವರು ಅಂತಾರಾಜ್ಯ ಮಾದಕ ವಸ್ತು ಮಾರಾಟಗಾರರ ಬಂಧನ
 • ಪೂಂಚ್‌ನಲ್ಲಿನ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
 • ಅಧ್ಯಕ್ಷೀಯ ಚುನಾವಣೆ: ಶ್ರೀಲಂಕಾ ರಕ್ಷಣಾ ಸಚಿವ ಗೋಟಬಯಾ ರಾಜಪಕ್ಸೆಗೆ ಜಯ
 • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಜಮೀನು ನೀಡಲು ಮುಂದಾದ ಹಿಂದೂ ಕುಟುಂಬಗಳು
 • ಶಿಕಾರಿಪುರದಲ್ಲಿ 15, 17 ನೇ ಶತಮಾನದ ಎರಡು ಶಿಲಾಶಾಸನಗಳು ಪತ್ತೆ
 • ಡಿಸೆಂಬರ್ ಎರಡನೇ ವಾರ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ; ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ
 • ಶಿವಮೊಗ್ಗದಲ್ಲಿ ಎರಡು ಶಿಲಾಶಾಸನ ಪತ್ತೆ
 • ಪವನ್ ದೇಶ್‍ಪಾಂಡೆ ಸ್ಫೋಟಕ ಅರ್ಧ ಶತಕ: ಗೋವಾಗೆ 173 ರನ್ ಗುರಿ ನೀಡಿದ ಕರ್ನಾಟಕ
 • ಶ್ರೀ ಲಂಕಾ ಅಧ್ಯಕ್ಷೀಯ ಚುನಾವಣೆ; ಗೋಟಬಯಾ ರಾಜಪಕ್ಸೆ ಗೆಲುವು, ಅಧಿಕೃತ ಘೋಷಣೆ ಬಾಕಿ
 • ಮರಳಿದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಪೃಥ್ವಿ ಶಾ
 • ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ; ಕೇಂದ್ರ ಸಚಿವ ಗಿರಿರಾಜ್ ಸಿಂಗ್
National Share

ಇಂದಿರಾ ಜೈಸಿಂಗ್ ಮನೆ ಮೇಲೆ ಸಿಬಿಐ ದಾಳಿ ಸೇಡಿನ ಕ್ರಮ: ವಿರೋಧ ಪಕ್ಷಗಳ ವಾಗ್ದಾಳಿ

ನವದೆಹಲಿ, ಜು 11 (ಯುಎನ್ಐ) ‘ಲಾಯರ್ಸ್ ಕಲೆಕ್ಟಿವ್’ ಎಂಬ ಎನ್‌ಜಿಒಗೆ ವಿದೇಶಿ ನಿಧಿ ಸಂಗ್ರಹಿಸುವಾಗ ಕಾನೂನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಮತ್ತು ಅವರ ಪತಿ ಆನಂದ್ ಗ್ರೋವರ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿರುವುದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಇದು ಸೇಡಿನ ಕ್ರಮ ಎಂದು ಆರೋಪಿಸಿವೆ.
ಇದೊಂದು ಸೂಪರ್ ತುರ್ತುಪರಿಸ್ಥಿತಿ ಎಂದು ಆರೋಪಿಸಿರುವ ತೃಣಮೂಲ ಕಾಂಗ್ರೆಸ್, ಇದು ಸೇಡಿನ ಅನೇಕ ನಿದರ್ಶನಗಳ ಪೈಕಿ ಮತ್ತೊಂದು ಉದಾಹರಣೆ ಎಂದು ಟೀಕಿಸಿದ್ದಾರೆ.
ಈ ಸರ್ಕಾರ, ನಾಗರಿಕರಿಗೆ ಕಿರುಕುಳ ನೀಡುತ್ತಿದ್ದು, ಎಲ್ಲಾ ವಿರೋಧ ಪಕ್ಷಗಳ ಧ್ವನಿಯನ್ನು ದಮನಿಸುತ್ತಿದೆ. ಇದೊಂದು ತುರ್ತುಪರಿಸ್ಥಿತಿ ಎಂದು ಟಿಎಂಸಿ ಟ್ವೀಟ್ ಮಾಡಿದೆ.

ದಾಳಿಯನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಇದು ಸೇಡಿನ ಕ್ರಮ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, 'ವಕೀಲರಾದ ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಅವರ ಆಸ್ತಿಯ ಮೇಲೆ ಸಿಬಿಐ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಆದರೆ, ತಮ್ಮ ಜೀವನದುದ್ದಕ್ಕೂ ಕಾನೂನು ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಹೋರಾಡಿದ ಅನುಭವಿಗಳನ್ನು ಗುರಿಯಾಗಿಸುವುದು ದುರುದ್ದೇಶಪೂರಿತ ' ಎಂದಿದ್ದಾರೆ.
ಸರ್ಕಾರದ ಏಜೆನ್ಸಿ, ವಕೀಲ ದಂಪತಿಯನ್ನು ಗುರಿಯಾಗಿಸಿ ದಾಳಿ ನಡೆಸಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ದೂರಿದ್ದು, ದಾಳಿಯ ಹಿಂದೆ ಸಂಶಯ ಹುಟ್ಟುಹಾಕಿವೆ ಎಂದು ಹೇಳಿದ್ದಾರೆ.
ಕಾನೂನು ತನ್ನ ಕ್ರಮಕೈಗೊಳ್ಳಬೇಕು, ಸರ್ಕಾರವು ತನ್ನ ಏಜೆನ್ಸಿಗಳ ಮೂಲಕ ಪ್ರಸಿದ್ಧ ಮತ್ತು ಗೌರವಾನ್ವಿತ ಹಿರಿಯ ವಕೀಲರನ್ನು ಗುರಿಯಾಗಿಸಿಕೊಂಡ ಅದರ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ನ ಖ್ಯಾತ ವಕೀಲರಾದ ಇಂದಿರಾ ಜೈ ಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಎನ್ ಜಿ ಒ ಹೆಸರಿನಲ್ಲಿ 2009-14ರ ಅವಧಿಯಲ್ಲಿ ವಿದೇಶಿ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಫೇರ್ ಕ್ರೆಡಿಟ್ ರಿಪೋರ್ಟಿಂಗ್ ಆ್ಯಕ್ಟ್ (ಎಫ್ ಸಿಆರ್ ಎ) ಅಡಿಯಲ್ಲಿ ದಾಳಿ, ಪರಿಶೀಲನೆ ನಡೆಸಲಾಗಿತ್ತು.
ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಜೈಸಿಂಗ್, ತಾವು ಹಲವು ವರ್ಷಗಳಿಂದ ನಡೆಸಿಕೊಂಡಿರುವ ಮಾನವ ಕಲ್ಯಾಣ ಕೆಲಸಗಳನ್ನು ಸಹಿಸದೆ ತಮ್ಮನ್ನು ಅನಾವಶ್ಯಕವಾಗಿ ಗುರಿಯಾಗಿಸಲಾಗಿದೆ ಎಂದಿದ್ದಾರೆ.
ಯುಎನ್ಐ ಎಎಚ್ 1750