Tuesday, Jan 21 2020 | Time 22:15 Hrs(IST)
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
business economy Share

ಇಂಧನ ಕ್ಷಮತೆಯ ಸೂಪರ್ ಎಫೀಷಿಯೆಂಟ್ ಎ.ಸಿಗಳನ್ನು ಪರಿಚಯಿಸಿದ ಇಇಎಸ್ ಎಲ್

ಇಂಧನ ಕ್ಷಮತೆಯ ಸೂಪರ್ ಎಫೀಷಿಯೆಂಟ್ ಎ.ಸಿಗಳನ್ನು ಪರಿಚಯಿಸಿದ ಇಇಎಸ್ ಎಲ್
ಇಂಧನ ಕ್ಷಮತೆಯ ಸೂಪರ್ ಎಫೀಷಿಯೆಂಟ್ ಎ.ಸಿಗಳನ್ನು ಪರಿಚಯಿಸಿದ ಇಇಎಸ್ ಎಲ್

ಬೆಂಗಳೂರು, ಆ 13 (ಯುಎನ್ಐ) ಈ ಹಿಂದೆ ರಿಯಾಯ್ತಿ ದರದಲ್ಲಿ ಅತಿ ಹೆಚ್ಚು ಇಂಧನ ಸಾಮರ್ಥ್ಯದ ಎಲ್ ಇಡಿ ಬಲ್ಬ್ ಗಳನ್ನು ದೇಶಾದ್ಯಂತ ವಿತರಿಸಿ ಹೊಸ ಕ್ರಾಂತಿ ಮಾಡಿದ್ದ ಕೇಂದ್ರ ಸರ್ಕಾರದ ಸಾರ್ವಜನಿಕ ಸಹಭಾಗಿತ್ವದ ಎನರ್ಜಿ ಎಫೀಷಿಯನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‍ಎಲ್) ಸಂಸ್ಥೆಯು ಈಗ ಅದೇ ಮಾದರಿಯ ಹವಾನಿಯಂತ್ರಕಗಳನ್ನು (ಎ.ಸಿ) ವಿತರಿಸಲು ಮುಂದಾಗಿದೆ.ಪ್ರಸ್ತುತ ದೆಹಲಿಗೆ ಸೀಮಿತವಾಗಿರುವ ಸೂಪರ್-ಎಫಿಶಿಯೆಂಟ್ ಏರ್ ಕಂಡೀಶನರ್ ಯೋಜನೆಯನ್ನು ಇಇಎಸ್ ಎಲ್ ಬೆಂಗಳೂರು, ಮುಂಬೈ, ಕೋಲ್ಕತ್ತಾ, ಹೈದ್ರಾಬಾದ್, ಚೆನ್ನೈ ಮತ್ತು ಜೈಪುರ ನಗರಗಳಿಗೆ ವಿಸ್ತರಿಸಲಿದೆ. ಬೆಂಗಳೂರಿನ ಗ್ರಾಹಕರು ಮತ್ತು ಸರ್ಕಾರದ ಸಂಸ್ಥೆಗಳು ಸೇರಿದಂತೆ ಇತರೆ ಸಂಸ್ಥೆಗಳನ್ನು ಗುರಿಯಾಗಿಟ್ಟುಕೊಂಡು ಮುಂದಿನ ಎರಡು ವರ್ಷಗಳಲ್ಲಿ 20,000 ಕ್ಕೂ ಹೆಚ್ಚು ಸೂಪರ್ ಎಫೀಷಿಯೆಂಟ್ ಎಸಿಗಳನ್ನು ಮಾರಾಟ ಮಾಡುವ ಉದ್ದೇಶ ಇಟ್ಟುಕೊಂಡಿದೆ.ಈ ಕುರಿತು ಮಾತನಾಡಿದ ಇಇಎಸ್‍ಎಲ್‍ನ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಕುಮಾರ್ ಅವರು, ``ನಮ್ಮ ಸೂಪರ್ ಎಫಿಶಿಯೆಂಟ್ ಎಸಿಗಳ ಲಭ್ಯತೆ ಬೆಂಗಳೂರು ಮತ್ತು ಇತರೆ ನಗರಗಳ ಜನರು ವಿಚಾರಿಸಿರುವುದನ್ನು ಗಮನಿಸಿ, ಈ ವಿಸ್ತರಣೆಯ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಗ್ರಾಹಕರು ಕೈಗೆಟುಕುವ ದರದಲ್ಲಿ ಕೂಲಿಂಗ್ ಆಯ್ಕೆಯನ್ನು ಪಡೆಯಲಿದ್ದಾರೆ. ಸೂಪರ್ ಎಫಿಶಿಯೆಂಟ್ ಎ.ಸಿಗಳು ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಅಪಾಯವನ್ನು ತಗ್ಗಿಸುವ ಜೊತೆಗೆ, ವಿದ್ಯುತ್ ಶುಲ್ಕವನ್ನು ಉಳಿತಾಯ ಮಾಡಲಿದೆ ಎಂದರು.ಈ ಎ.ಸಿ ಗಳನ್ನು ವೋಲ್ಟಾಸ್ ಕಂಪನಿ ತಯಾರು ಮಾಡುತ್ತಿದ್ದು, ಇಇಎಸ್‍ಎಲ್‍ನ ಇ-ಕಾಮರ್ಸ್ ಪೋರ್ಟಲ್ ಇಇಎಸ್‍ಎಲ್‍ಮಾರ್ಟ್.ಇನ್ ಮೂಲಕ ಮಾರಾಟ ಮಾಡಲಾಗುತ್ತಿದೆ ಇದರ ಬೆಲೆ 41,300 ರೂ.ಗಳು . ಜೊತೆಗೆ ಒಂದು ವರ್ಷದ ವಾರಂಟಿಯನ್ನು ಒಳಗೊಂಡಿದೆ.ಇದು 1.5 ಟಿಆರ್ ಇನ್ವರ್ಟರ್ ಅನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಲಭ್ಯವಿರುವ 5-ಸ್ಟಾರ್ ಎಸಿಗಳಿಗಿಂತ ಶೇ.20 ರಷ್ಟು ಮತ್ತು 3-ಸ್ಟಾರ್ ಎಸಿಗಳಿಗಿಂತ ಶೇ.50 ರಷ್ಟು ಇಂಧನ ಉಳಿತಾಯ ಕಾರ್ಯದಕ್ಷತೆಯನ್ನು ಹೊಂದಿವೆ.ಪ್ರಾಯೋಗಿಕ ಹಂತದಲ್ಲಿ 50 ಸಾವಿರ ಎ.ಸಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಫಲಿತಾಂಶದ ಆಧಾರದ ಮೇಲೆ ಅದರ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.ಯುಎನ್ಐ ಎಸ್ಎಚ್ ಎಸ್ಎ 1617

More News

ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ

21 Jan 2020 | 5:19 PM

 Sharesee more..

ಸೆನ್ಸೆಕ್ಸ್ 205 10 ಅಂಕ ಇಳಿಕೆ

21 Jan 2020 | 4:19 PM

 Sharesee more..

ಸೆನ್ಸೆಕ್ಸ್‌ 128 ಅಂಕ ಕುಸಿತ

21 Jan 2020 | 12:03 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ

21 Jan 2020 | 12:03 PM

 Sharesee more..