Monday, Sep 23 2019 | Time 01:49 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
National Share

ಇಂಧನ ನ್ಯಾಯ ಭಾರತದ ಪ್ರಥಮ ಆದ್ಯತೆ : ಧರ್ಮೇಂದ್ರ ಪ್ರಧಾನ್

ನವದೆಹಲಿ, ಸೆ 10 (ಯುಎನ್ಐ) ಇಂಧನ ವಲಯದಲ್ಲಿ ಸುಮಾರು ಶತಕೋಟಿಗೂ ಹೆಚ್ಚು ಜನರಿಗೆ ನ್ಯಾಯ ಒದಗಿಸಲು ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಅನೇಕ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಅಬುಧಾಬಿಯಲ್ಲಿ ಮಂಗಳವಾರ ಆರಂಭವಾಗದ ಇಂಧನ ಕುರಿತಾದ ಎಂಟನೇ ಏಷ್ಯಾ ಸಚಿವರಮಟ್ಟದ ದುಂಡುಮೇಜಿನ ಸಭೆಯಲ್ಲಿ ಅವರು ಭಾಗವಹಿಸಿದ್ದಾರೆ.
ಇಂಧನ ನ್ಯಾಯ ಭಾರತದ ಅಗ್ರ ಆದ್ಯತೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದು ಸುಭದ್ರ, ಕೈಗೆಟಕುವ ಮತ್ತು ಸುಸ್ಥಿರ ಇಂಧನ ದೊರಕಿಸುವ ಬದ್ಧತೆ ಹೊಂದಲಾಗಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಘೋಷಿಸಿರುವಂತೆ ಇಂಧನ ಕುರಿತ ಭಾರತದ ನೋಟ ಇಂಧನ ಲಭ್ಯತೆ, ಸಾಮರ್ಥ್ಯ, ಸುಸ್ಥಿರತೆ ಮತ್ತು ಭದ್ರತೆಯ ಮೇಲೆ ಅವಲಂಬಿಸಿದೆ. ಕಳೆದ ಐದು ವರ್ಷಗಳಲ್ಲಿ ಇಂಧನ ಲಭ್ಯತೆ ಖಾತ್ರಿಪಡಿಸಲು ಭಾರತ ಒತ್ತು ನೀಡಿದೇ ಎಂದೂ ಸಹ ಸಚಿವರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 7 ರ ಅಡಿಯಲ್ಲಿ ಭಾರತ ತನ್ನ ಬದ್ಧತೆಯನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಸಾಗಿದೆ. ಇತ್ತೀಚಿನ ಉಪಕ್ರಮಗಳಲ್ಲಿನ ಯಶಸ್ಸು ಇಂತಹ ಕ್ರಮಗಳನ್ನು ಕೈಗೊಳ್ಳಲು ವಿಶ್ವಾಸ ನೀಡಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

2030 ರ ವೇಳೆಗೆ ಪೆಟ್ರೋಲ್ ನಲ್ಲಿ ಶೇ.20 ರಷ್ಟು ಎಥನಾಲ್ ಮತ್ತು ಡೀಸೆಲ್ ನಲ್ಲಿ ಶೇ. 5 ರಷ್ಟು ಜೈವಿಕ ಇಂಧನ ಸೇರ್ಪಡೆ ಮಾಡುವ ಗುರಿಯೊಂದಿಗೆ ರಾಷ್ಟ್ರೀಯ ಜೈವಿಕ ಇಂಧನ ನೀತಿ 2018 ಅನ್ನು ಜಾರಿಗೆ ತರಲಾಗಿದೆ. ಜೈವಿಕ ಇಂಧನ ಬಳಸಿ ವಿಮಾನ ಹಾರಾಟ ನಡೆಸುವ ರಾಷ್ಟ್ರಗಳ ಸಾಲಿಗೆ ಭಾರತ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಬಳಕೆಯತ್ತ ಈಗಾಗಲೇ ಜನರು ಮನಸ್ಸು ಮಾಡಿದ್ದಾರೆ. 2022 ರ ವೇಳೆಗೆ 175 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು ಈ ಪೈಕಿ 100 ಗಿಗಾ ವ್ಯಾಟ್ ವಿದ್ಯುತ್ ಅನ್ನು ಸೌರಶಕ್ತಿಯಿಂದ ಪಡೆಯುವ ಯೋಜನೆಯಿಂದ. ಎಥನಾಲ್, ಜೈವಿಕ ಇಂಧನ ಮೊದಲಾದ ಪರ್ಯಾಯ ಇಂಧನ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವರು ತಿಳಿಸಿದ್ದಾರೆ.
ವಿಶ್ವ ಬ್ಯಾಂಕ್‌ ವಿದ್ಯುತ್ ಶ್ರೇಯಾಂಕದಲ್ಲಿ ಭಾರತದ ಸ್ಥಾನ ಸುಧಾರಿಸಿದ್ದು 2014 ರಲ್ಲಿ 111 ನೇ ಸ್ಥಾನದಲ್ಲಿದ್ದ ಭಾರತ 2018 ರಲ್ಲಿ 29 ನೇ ಸ್ಥಾನಕ್ಕೆ ಜಿಗಿದಿದೆ ಎಂದು ಅಂಕಿ ಅಂಶ ನೀಡಿದರು. ಉಜಾಲಾ ಯೋಜನೆಯಡಿ ರಾಷ್ಟ್ರವ್ಯಾಪಿಯಾಗಿ ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಾಗಿದ್ದು ವಾರ್ಷಿಕವಾಗಿ 2.5 ಶತಕೋಟಿ ಡಾಲರ್ ಉಳಿತಾಯವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಅಡುಗೆ ಅನಿಲ ವ್ಯಾಪ್ತಿ ಸಹ ಕಳೆದ ಐದು ವರ್ಷಗಳಲ್ಲಿ ಶೇ 55 ರಿಂದ ಶೇ 90 ಕ್ಕೆ ಹೆಚ್ಚಿದೆ. ಎಲ್ಲಾ ಗ್ರಾಮಗಳಲ್ಲಿ ಭಾರತ ಸಾರ್ವತ್ರಿಕ ವಿದ್ಯುದೀಕರಣ ಸಾಧಿಸಿದ್ದು ಈ ವರ್ಷಾಂತ್ಯದ ವೇಳೆಗೆ ಸೌಭಾಗ್ಯ ಯೋಜನೆ ಮೂಲಕ ಎಲ್ಲಾ ಮನೆಗಳಿಗೂ ವಿದ್ಯುತ್ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಧಾನ್ ಹೇಳಿದರು.
ಅಡುಗೆಗೆ ಶುದ್ಧ ಇಂಧನ ಲಭ್ಯತೆಗಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಗಿದ್ದು ಮೂರು ವರ್ಷಗಳಲ್ಲಿ 80 ದಶಲಕ್ಷ ಎಲ್‌ಪಿಜಿ ಸಂರ್ಪಕ ನೀಡಲಾಗಿದೆ ಎಂದರು.
ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ 7 ಸಾಧನೆಗೆ ಅನೇಕ ಕ್ರಾಂತಿಕಾರಕ ನೀತಿ ಮತ್ತು ಉಪಕ್ರಮಗಳನ್ನು ಜಾರಿಗೆ ತರಲಾಗಿದ್ದು ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ ಬಳಕೆ ಮೊದಲಾದ ಕ್ರಮಗಳ ಮೂಲಕ ಇಂಧನ ಮೂಲಸೌಕರ್ಯ ವಿಸ್ತರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚುತ್ತಿದ್ದು 2040 ರ ವೇಳೆಗೆ ಒಟ್ಟಾರೆ ವಿದ್ಯುತ್ ಅಗತ್ಯದ 2 / 3 ರಷ್ಟು ನವೀಕರಿಸಬಹುದಾದ ಇಂಧನ ಬಳಕೆಯಾಗಲಿದೆ ಎಂದರು.
ಪಳೆಯುಳಿಕೆ ಇಂಧನ ಲಭ್ಯವಾಗದಂತೆ ಮತ್ತು ಈ ಇಂಧನದ ಬೆಲೆ ಹೆಚ್ಚಳ ಮಾಡುವುದರ ಬದಲಾಗಿ ಕಡಿಮೆ ಆದಾಯ ಗುಂಪಿಗೆ ತಂತ್ರಜ್ಞಾನ ಮತ್ತು ಬಂಡವಾಳ ನೀಡಿದಾಗ ಮಾತ್ರ ಪ್ರತಿ ವ್ಯಕ್ತಿಯ ಇಂಧನ ಬಳಕೆ ಪ್ರಮಾಣ ತಗ್ಗಲಿದ್ದು ಇಂಧನ ಭದ್ರತೆಯತ್ತ ದಾಪುಗಾಲಿರಸಬಹುದಾಗಿದೆ ಎಂದು ಅವರು ತಿಳಿಸಿದರು.
ಯುಎನ್‌ಐ ಜಿಎಸ್ಆರ್ 2359