ಬೆಂಗಳೂರು, ಡಿ ೦೨ (ಯುಎನ್ಐ) ಎಸ್ ಪಿ ಪಿಕ್ಚರ್ಸ್ ಲಾಂಛನದಲ್ಲಿ ಶೈಲಜಾ ಪ್ರಕಾಶ್ ಅವರು ನಿರ್ಮಿಸಿರುವ ‘ಐ ೧‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
ಆರ್ಎಸ್ ರಾಜಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ವಿಬಿನ್ ಆರ್ ಸಂಗೀತ ನೀಡಿದ್ದಾರೆ. ಶಿನೂಬ್ ಟಿ ಚಾಕೋ ಚಾಯಾಗ್ರಹಣ, ವಿಶಾಖ್ ರಾಜೇಂದನ್ ಸಂಕಲನ ಹಾಗೂ ಅಶೋಕ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಡಾ ವಿ.ನಾಗೇಂದ್ರಪ್ರಸಾದ್ ಹಾಗೂ ಉಮೇಶ್ ಎಸ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಕಿಶೋರ್, ಧೀರಜ್ ಪ್ರಸಾದ್ ಹಾಗೂ ರಂಜನ್ ಎಂ.ಎಸ್.ಬಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಯುಎನ್ಐ ಎಸ್ಎ ವಿಎನ್ ೧೭೧೬