Thursday, Oct 1 2020 | Time 21:30 Hrs(IST)
 • ಭಾರತೀಯ ತೈಲ ನಿಗಮದಿಂದ ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಮಾರಾಟ ದರ ಇಳಿಕೆ
 • ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1 10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು
 • ರಾಹುಲ್, ಪ್ರಿಯಾಂಕಾ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಜೆಡಿಎಸ್
 • ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಖೈರು
 • ಮೀಸಲು ಅರಣ್ಯದಲ್ಲಿ ಕಡವೆ ಬೇಟೆ; ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
 • ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಚಿಟ್ಟೆ ಪ್ರಬೇಧಗಳ ಸಮೀಕ್ಷೆ
 • ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ
 • ಬಿಜೆಪಿ ಸರ್ಕಾರದ ಮನಸ್ಥಿತಿ ಏನು ಎಂಬುದು ಬಯಲಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮೂವರ ಬಂಧನ: 40 ಕೆಜಿ ಗಾಂಜಾ ವಶ
 • ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್
 • ಹೈಕಮಾಂಡ್ ಗೆ ಅಭ್ಯರ್ಥಿಗಳ ಪಟ್ಟಿ ರವಾನೆ,ಉಸ್ತುವಾರಿಗಳ ನೇಮಕ ;ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧಾರ
 • ಗೂಂಡಾ ಕಾಯಿದೆಯಡಿ ಏಳು ರೌಡಿಗಳ ಬಂಧನ
 • ಪಾಕಿಸ್ತಾನ ಮೊಸಳೆ ಕಣ್ಣೀರು ಸುರಿಸುತ್ತಿದೆ: ಭಾರತ ಆಕ್ರೋಶ
 • ರೈಲ್ವೆಯಿಂದ ಸೆಪ್ಟೆಂಬರ್‌ನಲ್ಲಿ ದಾಖಲೆ ಸರಕು ಸಾಗಣೆ
 • ಮೋದಿ ಸರ್ಕಾರ ಗಾಂಧಿ ಪಥದಲ್ಲಿ ಸಾಗುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
Entertainment Share

ಉತ್ತಮ ಚಿತ್ರಗಳ’ ಕೈಬಿಡಬೇಡಿ: ಸಂಚಾರಿ ವಿಜಯ್

ಬೆಂಗಳೂರು, ಫೆ 14 (ಯುಎನ್‍ಐ) ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದು, ವರ್ಷ‍ಕ್ಕೆ 200ಕ್ಕೂ ಹೆಚ್ಚಿನ ಚಿತ್ರಗಳು ಸೆನ್ಸಾರ್ ಆಗುತ್ತಿವೆ ಇನ್ನು ಬಿಡುಗಡೆಯಾಗುತ್ತಿರುವ ಚಿತ್ರಗಳು ಒಂದೆರಡು ದಿನ ಅಥವಾ ಒಂದು ವಾರದಲ್ಲೇ ಥಿಯೇಟರ್ ಗಳಿಂದ ಎತ್ತಂಗಡಿಯಾಗುತ್ತಿವೆ

ಇದರ ಬಗ್ಗೆ ದನಿಯೆತ್ತಬೇಕಾದ ನಿರ್ಮಾಪಕರಲ್ಲಿ ಒಗ್ಗಟ್ಟಿಲ್ಲದೆ ವಾಣಿಜ್ಯ ಮಂಡಳಿಯಂತಹ ಸಂಸ್ಥೆಗಳೂ ಕೈಚೆಲ್ಲಿ ಕುಳಿತಿವೆ ಪ್ರೇಕ್ಷಕ ಕೂಡ ಯಾವ ಚಿತ್ರ ನೋಡಬೇಕು, ಬಿಡಬೇಕು ಎಂಬ ಗೊಂದಲದಲ್ಲಿದ್ದಾನೆ

ಇಂದು 13 ಚಿತ್ರಗಳು ಬಿಡುಗಡೆಯಾಗಿರುವ ನಡುವೆಯೇ ಉತ್ತಮ ಚಿತ್ರಗಳ ಕೈಬಿಡಬೇಡಿ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಮನವಿ ಮಾಡಿದ್ದಾರೆ.

ಸಿನಿಮಾವನ್ನು ಉಳಿಸಿಕೊಡಿ ''ನಾನು ಎಲ್ಲವೂ ಒಳ್ಳೆಯ ಸಿನಿಮಾ ಮಾಡಲು ಆಗಿಲ್ಲ. ಆದರೆ, ಒಳ್ಳೆಯ ಸಿನಿಮಾ ಮಾಡಿದಾಗಲೂ ಚಿತ್ರಮಂದಿರದಿಂದ ತೆಗೆದಿದ್ದಾರೆ. 'ಜಂಟಲ್ ಮ್ಯಾನ್' ಜನರಿಗೆ ತಲುಪುತ್ತಿದೆ. ಶನಿವಾರ ಮತ್ತು ಭಾನುವಾರ ಸಿನಿಮಾ ನೋಡಿ. ಹಾಗಾದರೆ, ಸೋಮವಾರದಿಂದ ಸಿನಿಮಾ ಮುಂದೆ ಹೋಗುತ್ತದೆ. ಇದೇ ಸಿನಿಮಾ ಬೇರೆ ಭಾಷೆಯಲ್ಲಿ ಬಂದಿದ್ದರೆ, ನಾವು ಕನ್ನಡಿಗರೇ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ. ಈಗ ಈ ಚಿತ್ರವನ್ನು ಉಳಿಸಿಕೊಡಿ.'' – ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ

ಜಂಟಲ್ ಮ್ಯಾನ್ ನಂತಹ ಸ್ವಮೇಕ್ ಸಿನಿಮಾಗಳು ಗೆದ್ದರೆ ಕನ್ನಡದಲ್ಲಿ ಹೊಸ ಅಲೆಯ ನಿರ್ದೇಶಕ, ನಿರ್ಮಾಪಕರು ಹುಟ್ಟಿಕೊಳ್ಳುತ್ತಾರೆ. ಯಾವುದೇ ಕಳಪೆ ಸಿನಿಮಾ ಆಗಿದ್ದರೆ, ನಾನು ಮಾತನಾಡುತ್ತಿರಲಿಲ್ಲ. ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಬೇರೆ ಬೇರೆ ಸಿನಿಮಾಗಳು ಬರುತ್ತಿರುವ ಕಾರಣ ಒಂದಷ್ಟು ಚಿತ್ರಮಂದಿರಗಳು ಸಿಗುತ್ತಿಲ್ಲ.'' ಎಂದು ಸಂಚಾರಿ ವಿಜಯ್ ಹೇಳಿದ್ದಾರೆ.
ಯುಎನ್‍ಐ ಎಸ್ಎ ವಿಎನ್ 1330
More News

ನಿರ್ಮಾಪಕ ಎಸ್‍‍ ಕೆ ಕೃಷ್ಣಕಾಂತ್ ವಿಧಿವಶ

01 Oct 2020 | 2:34 PM

 Sharesee more..

‘ಗಾಂಧಿ ಮತ್ತು ನೋಟು' ಚಿತ್ರೀಕರಣ ಪೂರ್ಣ

01 Oct 2020 | 11:28 AM

 Sharesee more..

ಸಲ್ಮಾನ್ ಖಾನ್ ರ ರಾಧೆ ಚಿತ್ರದ ಚಿತ್ರಿಕರಣ ಆರಂಭ

30 Sep 2020 | 5:23 PM

 Sharesee more..