InternationalPosted at: Jan 13 2021 9:41AM Shareಉತ್ತರ ಕೊಲಂಬಿಯಾದಲ್ಲಿ ಗ್ರೆನೇಡ್ ಸ್ಫೋಟ: 14 ಜನರಿಗೆ ಗಾಯಬ್ಯೂನಸ್ ಐರಿಸ್, ಜನವರಿ 13 (ಯುಎನ್ಐ) ಉತ್ತರ ಕೊಲಂಬಿಯಾದ ಅತಿದೊಡ್ಡ ನಗರವಾದ ಬರಾನ್ಕ್ವಿಲ್ಲಾದಲ್ಲಿ ಸಂಭವಿಸಿದ ಗ್ರೆನೇಡ್ ಸ್ಫೋಟದಲ್ಲಿ ಕನಿಷ್ಠ 14 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಶಾಪಿಂಗ್ ಮಾಲ್ ಬಳಿ ಜನರು ಹೋಗುತ್ತಿದ್ದಾಗ ಗ್ರೆನೇಡ್ ಅನ್ನು ಕಾರಿನಿಂದ ಎಸೆಯಲಾಗಿದೆ ಎಂದು ಅಲ್ಲಿನ ಪ್ರತ್ಯಕ್ಷ್ಯ ದರ್ಶಿ ಮೂಲಗಳು ಹೇಳಿವೆ ಹಗಲಿನ ವೇಳೆ ಅದು ಜನಸಾಗರ ಕಿಕ್ಕಿರಿದು ಸೇರಿದ್ದ ಸಮಯದಲ್ಲೇ ಈ ದಾಳಿ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿದ್ದರೂ ಅನೇಕರಿಗೆ ತೀವ್ರ ಸ್ವರೂಪದ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಯುಎನ್ಐ ಕೆಎಸ್ಆರ್ 0942