ಲಖನೌ, ಜ 12 (ಯುೆನ್ಐ) ದೇಶಾದ್ಯಂತ ಕೋವಿಡ್ ವಿರುದ್ಧ ಲಸಿಕೆ ವಿತರಣೆ ಪ್ರಾರಂಭವಾಗಲಿರುವ ಇದೇ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ರಾಜಧಾನಿ ಲಖನೌದ ಲಸಿಕೆದಾರರು ಮತ್ತು ಫಲಾನುಭವಿಗಳನ್ನು ಉದ್ದೇಶಿಸಿ ಸಂವಾದ ನಡೆಸುವ ನಿರೀಕ್ಷೆಯಿದೆ.
ಲಖನೌ ಮಾತ್ರವಲ್ಲದೆ ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯ ಕೆಲವು ಕೇಂದ್ರಗಳಲ್ಲೂ ಪ್ರಧಾನಿಯವರು ಸಂವಹನ ನಡೆಸುವ ಸಾಧ್ಯತೆ ಇದೆ.
ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿದಾಗ ಲಸಿಕೆ ಪಡೆಯುವ ಬಗ್ಗೆ ಪ್ರಧಾನಿ ಮೋದಿ ವೈದ್ಯರು, ಪ್ಯಾರಾ ವೈದ್ಯಕೀಯ ಸಿಬ್ಬಂದಿ ಮತ್ತು ಜನಸಾಮಾನ್ಯರೊಡನೆ ವರ್ಚುವಲ್ ಸಂವಹನ ನಡೆಸಲಿದ್ದಾರೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
ಲಖನೌದ 16 ಸ್ಥಳಗಳಲ್ಲಿ ಜನವರಿ 16 ರಂದು ಲಸಿಕೆ ಹಾಕಲಾಗುವುದು. ಈ ಕೇಂದ್ರಗಳಲ್ಲಿ ಪ್ರಧಾನಿ ಮೋದಿಯವರೊಂದಿಗೆ ದ್ವಿಮುಖ ಸಂವಹನ ಸೌಲಭ್ಯವನ್ನು ಹೊಂದಿರುತ್ತದೆ.
ಲಖನೌದಲ್ಲಿ, ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು), ಎರಾ ಮೆಡಿಕಲ್ ಕಾಲೇಜು, ಎಸ್ಜಿಪಿಜಿಐ, ಸಮುದಾಯ ಆರೋಗ್ಯ ಕೇಂದ್ರ ಮಾಲ್, ಅಲಿಗಂಜ್, ಇಂದಿರಾ ನಗರ ಮತ್ತು ಮೋಹನ್ಲಾಲ್ಗಂಜ್, ಲೋಕ ಬಂಧು ಆಸ್ಪತ್ರೆ, ಟಿಎಸ್ ಮಿಶ್ರಾ ಕಾಲೇಜು, ಅವಂತಿ ಬಾಯಿ ಆಸ್ಪತ್ರೆ, ಆರ್ಎಂಎಲ್ ಸಂಸ್ಥೆ ಮತ್ತು ಇತರ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ.
ಯುಎನ್ಐ ಎಸ್ಎ 1137