Saturday, Dec 5 2020 | Time 02:15 Hrs(IST)
Entertainment Share

ಉದ್ಯಾನನಗರಿಯ ಸ್ವಚ್ಛತೆಗೆ ನಟ ಅನಿರುದ್ಧ್ ಪ್ಲ್ಯಾನ್ ಹೀಗಿದೆ ನೋಡಿ. . .!

ಉದ್ಯಾನನಗರಿಯ ಸ್ವಚ್ಛತೆಗೆ ನಟ ಅನಿರುದ್ಧ್  ಪ್ಲ್ಯಾನ್ ಹೀಗಿದೆ ನೋಡಿ. . .!
ಉದ್ಯಾನನಗರಿಯ ಸ್ವಚ್ಛತೆಗೆ ನಟ ಅನಿರುದ್ಧ್ ಪ್ಲ್ಯಾನ್ ಹೀಗಿದೆ ನೋಡಿ. . .!

ಬೆಂಗಳೂರು, ನ 21 (ಯುಎನ್‍ಐ) ಅನಿರುದ್ಧ್ ಉತ್ತಮ ನಟ. ವಿಷ್ಣುವರ್ಧನ್ ಅಳಿಯನಾಗಿಯೂ, ಚಿತ್ರರಂಗದಲ್ಲಿ ನಿರೀಕ್ಷಿತ ಅವಕಾಶ ಸಿಗದಿದ್ದರೂ ಹತಾಶರಾಗದೆ, ಪ್ರಸ್ತುತ ಕಿರುತೆರೆಯಲ್ಲಿ ಅದ್ಭುತ ಯಶಸ್ಸು ಕಾಣುತ್ತಿದ್ದಾರೆ.ಕೇವಲ ತೆರೆಯ ಮೇಲೆ ಸಮಾಜಮುಖಿ ಕಾರ್ಯಗಳ ಬಗ್ಗೆ ಹೇಳುವುದು ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಇಂತಹ ಕಾರ್ಯಗಳಿಗೆ ಒತ್ತು ನೀಡುತ್ತಿದ್ದಾರೆ ಅನಿರುದ್ಧ್.

ಇತ್ತೀಚಿಗೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಅನಿರುದ್ಧ್ ಜಾಗೃತಿ ಮೂಡಿಸಿದ್ದರು. ಜಾಲತಾಣದಲ್ಲಿನ ಅವರ ಪೋಸ್ಟ್ ಗೆ ಬಿಬಿಎಂಪಿ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯಿಸಿ, ಎರಡು ಬಡಾವಣೆಗಳು ಸ್ವಚ್ಛವಾಗುವಂತೆ ಮಾಡಿದ್ದರು.ಇದೀಗ ಅನಿರುದ್ಧ್ ಬಿಬಿಎಂಪಿ ಸ್ಪೆಷಲ್ ಕಮಿಷನರ್ ರಣದೀಪ್ಅವರನ್ನು ಭೇಟಿಯಾಗಿ, ನಗರದ ಸ್ವಚ್ಛತೆಯ ಬಗ್ಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದಾರೆ.ರಣದೀಪ್ ಅವರ ಜೊತೆ ಚರ್ಚಿಸಿದ ಹಲವು ವಿಚಾರಗಳನ್ನು ಅನಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.1) ಸಲಹೆಗಾರರ ಮಂಡಳಿಯನ್ನ ಸ್ಥಾಪಿಸಿ ಆ ಮಂಡಳಿಯಲ್ಲಿ ಸಂಶೋಧಕರು, ಪಟ್ಟಣ ಯೋಜಕರು, ಸಮಾಜ ಸೇವಕರು, ಸಾಮಾಜಿಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಮಲ್ಟಿ ನ್ಯಾಷನಲ್ ಕಂಪನಿಗಳು, ಮತ್ತು ಇತರ ಗಣ್ಯರು ಇರುತ್ತಾರೆ.2) ತೆರೆದ ಕಾಲುವೆಗಳನ್ನ ಮುಚ್ಚಿ ಗುಜರಾತ್‌ ಮಾದರಿಯ ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಸುವುದು ಮತ್ತು ಎರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡುವುದು.3) ಮುಚ್ಚಿರೋ ಕಸ ಸಂಗ್ರಹಿಸೋ ಆಧುನಿಕ ವಾಹನ, ಅಭಿ‌ವೃದ್ಧಿಗೊಂಡಿರೋ ದೇಶಗಳಲ್ಲಿ ಇರೋಹಾಗೆ

4) ಸ್ವಚ್ಛ ಮುಚ್ಚಿರೋ (ಒಣ ಮತ್ತು ಹಸಿ) ಕಸದ ಪೆಟ್ಟಿಗೆಗಳನ್ನ ಅಲ್ಲಲ್ಲಿ ಇರಿಸುವುದು, ಇವುಗಳು ಕಸ ಸಂಗ್ರಹಿಸೋ ಆಧುನಿಕ ವಾಹನಗಳಿಂದ ಎತ್ತಲಾಗುವುದು.5) ಸಿಸಿಟಿವಿ ಗಳನ್ನ ಕಪ್ಪುಚುಕ್ಕೆ ಇರುವಂತಹ ಸ್ಥಳಗಳಲ್ಲಿ ಹಾಕುವುದು.6) ಪೌರಕಾರ್ಮಿಕರಿಗೆ ಸುರಕ್ಷಿತ ಕ್ರಮಗಳನ್ನ, ಕೈಗವಸುಗಳನ್ನ ಮತ್ತು ಬೂಟುಗಳನ್ನು ಒದಗಿಸುವುದು.7) ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.8) 'ಆರ್ಯವರ್ಧನ್ ಯೋಜನೆ' - ಕಸ ಕೊಳ್ಳುವುದು. ಇದು ಆದಲ್ಲಿ ಜನಗಳಿಗೆ ಕಸದಲ್ಲಿ ಕಾಸು ಕಾಣುವುದು ಮತ್ತು ಅಲ್ಲಲ್ಲಿ ಹಾಕುವುದನ್ನು ನಿಲ್ಲಿಸಬಹುದು.9) ಒಳ್ಳೆ ರಸ್ತೆಗಳು, ವೈಜ್ಞಾನಿಕ ಹಂಪ್ ಗಳು ಮತ್ತು ಎರಡೂ ಬದಿಯಲ್ಲಿ ಫುಟ್‌ಪಾಥ್‌ಗಳು.10) ರೋಟರಿ, ಲಯನ್ಸ ತರಹದ ಸಾಮಾಜಿಕ ಸಂಸ್ಥೆಗಳಿಗೆ ಮತ್ತು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಬಿ. ಬಿ.ಎಂ.ಪಿ ಯ ಜೊತೆಗೂಡಿ ಕೆಲಸ ಮಾಡಲು ಆಹ್ವಾನಿಸುವುದು.11) ರಸ್ತೆಯಲ್ಲಿ ಕಸ ಹಾಕಿದವರಿಗೆ ಅತಿಯಾದ ದಂಡ ಮತ್ತು ಕಠಿಣ ಶಿಕ್ಷೆ ವಿಧಿಸುವುದು. ತಮ್ಮ ಸಹಭಾಗದಿಂದ, ಹಾರೈಕೆ, ಆಶೀರ್ವಾದದಿಂದ ಮುಂಬರುವ ದಿನಗಳಲ್ಲಿ ಸ್ವಚ್ಛ, ವೈಜ್ಞಾನಿಕ, ಶಕ್ತಿ ಉತ್ಪಾದನೆ ಮಾಡುವಂತಹ, ಹಸಿರು, ಸುರಕ್ಷಿತ ದೇಶ ನಾವು ನೋಡಬಹುದು. ಅಲ್ಲದೆ ತಮ್ಮಲ್ಲಿ ಕಳಕಳಿಯ ವಿನಂತಿ. ತಮ್ಮಲ್ಲಿ ಯಾರಾದರು ಸಂಶೋಧನೆ ಮಾಡಿದ್ದಾಗಲಿ ಅಥವಾ ಈ ಕ್ಷೆತ್ರದಲ್ಲಿ ಅನುಭವ ಇದ್ದಲ್ಲಿ ತಮ್ಮ ಅನಸಿಕೆಗಳನ್ನ, ಕಲ್ಪನೆಗಳನ್ನ ಇಲ್ಲಿ ಹಂಚಿಕೊಳ್ಳಿ ಎಂದು ಅನಿರುದ್ಧ ಹೇಳಿದ್ದಾರೆ.ಯುಎನ್ಐ ಎಸ್‍ಎ 1612

More News
“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

04 Dec 2020 | 9:22 PM

ಬೆಂಗಳೂರು, ಡಿ 04 (ಯುಎನ್ಐ) ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಶೂಟಿಂಗ್ ಸೆಟ್ ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

 Sharesee more..

ತೆಲುಗು ನಟ, ನಿರ್ಮಾಪಕ ಯಾದ ಕೃಷ್ಣ ನಿಧನ

03 Dec 2020 | 6:17 PM

 Sharesee more..