Monday, Feb 24 2020 | Time 17:52 Hrs(IST)
 • ಅಯೋಧ್ಯೆ: ಐದು ಎಕರೆ ಪರ್ಯಾಯ ಭೂಮಿ ಸ್ವೀಕರಿಸಲು ಸುನ್ನಿ ಮಂಡಳಿ ನಿರ್ಧಾರ
 • ಅಯೋಧ್ಯೆ: ಐದು ಎಕರೆ ಪರ್ಯಾಯ ಭೂಮಿ ಸ್ವೀಕರಿಸಲು ಸುನ್ನಿ ಮಂಡಳಿ ನಿರ್ಧಾಋ
 • ರವಿ ಪೂಜಾರಿ ವಿರುದ್ಧ 97 ಪ್ರಕರಣ ದಾಖಲು; ಮಾರ್ಚ್ 7ರವರೆಗೆ ಸಿಸಿಬಿ ಕಸ್ಟಡಿಗೆ: ಎಡಿಜಿಪಿ ಅಮರ್ ಕುಮಾರ್ ಪಾಂಡೆ
 • 21 ನೇ ಶತಮಾನದಲ್ಲಿ ಭಾರತ-ಅಮೆರಿಕ ಸಂಬಂಧಗಳದ್ದು ಮಹತ್ವದ ಪಾತ್ರ-ಪ್ರಧಾನಿ ಮೋದಿ
 • ಮಹದಾಯಿ ತೀರ್ಪು: ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಎಚ್ ಕೆ ಪಾಟೀಲ್ ಸರ್ಕಾರಕ್ಕೆ ಒತ್ತಾಯ
 • ಟ್ರಂಪ್ ಭೇಟಿ ಹಿನ್ನೆಲೆ-ಕಾಶ್ಮೀರದಾದ್ಯಂತ ಭದ್ರತಾಪಡೆ ಹದ್ದಿನ ಕಣ್ಣು
 • ಕೆ2 ಸಮಸ್ಯೆಯಿಂದ ಶಿಕ್ಷಕರ ವೇತನ ವಿಳಂಬ: ರಮೇಶ್ ಬಾಬು ಆರೋಪ
 • ಭೂಗತ ಪಾತಕಿ ರವಿ ಪೂಜಾರಿಗೆ ಮಾರ್ಚ್ 7ರವರೆಗೆ ಪೊಲೀಸ್ ಕಸ್ಟಡಿಗೆ
 • ಗೌತಮ್ ಸ್ಪಿನ್ ಮೋಡಿ : ಸತತ ಮೂರನೇ ಬಾರಿ ಸೆಮಿಫೈನಲ್ ತಲುಪಿದ ಕರ್ನಾಟಕ
 • ಮೂರು ಶತಕೋಟಿ ಡಾಲರ್ ರಕ್ಷಣಾ ಒಪ್ಪಂದಕ್ಕೆ ನಾಳೆ ಸಹಿ: ಟ್ರಂಪ್
 • ಬನ್ನೇರುಘಟ್ಟ ಉದ್ಯಾನದ ಪರಿಸರ ಸೂಕ್ಷ್ಮ ವಲಯ ಕುಗ್ಗಿಸುವ ಪ್ರಸ್ತಾವನೆಗೆ ಬೆಂಗಳೂರು ಪ್ರತಿಷ್ಠಾನ ವಿರೋಧ
 • ಸಬರಮತಿ ಆಶ್ರಮದಲ್ಲಿ ಮಹಾತ್ಮ ಗಾಂಧಿ ಅವರಿಗೆ ಟ್ರಂಪ್, ಮೆಲಾನಿಯಾ ಗೌರವ ನಮನ ಸಲ್ಲಿಕೆ
 • ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ನೂರು ಕೋಟಿ : ದೇಶಕ್ಕೆ ಲಾಭವಿಲ್ಲ -ರಾಜ್ಭರ್
 • ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಲು ಯುವಜನತೆಗೆ ಉಪರಾಷ್ಟ್ರಪತಿ ಕರೆ
 • ಡಿ ವೈ ಪಾಟೀಲ್ ಟಿ20 ಆಡಲು ಸಜ್ಜಾದ ಹಾರ್ದಿಕ್ ಪಾಂಡ್ಯ
Parliament Share

ಎನ್ ಡಿಎ ಸರ್ಕಾರದಿಂದ ಹಣದುಬ್ಬರ, ವಿತ್ತ ಕೊರತೆ ನಿಯಂತ್ರಣದಲ್ಲಿ- ನಿರ್ಮಲಾ ಸೀತಾರಾಮನ್

ನವದೆಹಲಿ, ಫೆ .11 (ಯುಎನ್‌ಐ) ಎನ್‌ಡಿಎ ಸರ್ಕಾರದ ನೀತಿಗಳು ದೇಶದ ಆರ್ಥಿಕತೆಯ ಈಗಿನ ಸ್ಥಿತಿಗೆ ಕಾರಣವಾಗಿವೆ ಎಂಬ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ಸರ್ಕಾರದ ನೀತಿಗಳಿಂದಾಗಿ ಭಾರತದ ಬಗ್ಗೆ ಜಾಗತಿಕ ಮನೋಭಾವ ತುಂಬಾ ಅನುಕೂಲಕರ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ಮಂಗಳವಾರ ರಾಜ್ಯಸಭೆಯಲ್ಲಿ ಬಜೆಟ್ ಕುರಿತ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಎರಡಂಕಿಯಷ್ಟಿದ್ದ ಹಣದುಬ್ಬರ ದರ ಮತ್ತು ಆಹಾರ ಹಣದುಬ್ಬರಕ್ಕೆ ವಿರುದ್ಧವಾಗಿ, ಎನ್‌ಡಿಎ ಸರ್ಕಾರ, ಹಣದುಬ್ಬರ ದರವನ್ನು ಶೇ 4 ಕ್ಕಿಂತ ಕಡಿಮೆ ಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ವಿತ್ತ ಕೊರತೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ' 2014 ನೇ ವರ್ಷಕ್ಕೂ ಹಿಂದಿನ ಸಂಖ್ಯೆಗಳಿಗೆ ಹೋಲಿಸಿದರೆ ಎನ್ ಡಿಎ ಸರ್ಕಾರ ಹಣಕಾಸಿನ ಕೊರತೆಯನ್ನು ಮಿತಿಯಲ್ಲಿಟ್ಟುಕೊಂಡಿದೆ. ಬಂಡವಾಳ ವೆಚ್ಚ ಸಹ ಕಡಿಮೆಯಾಗಿಲ್ಲ. ಸರ್ಕಾರ ವಿತ್ತೀಯ ಶಿಸ್ತನ್ನು ಕಾಪಾಡಿಕೊಂಡಿದೆ. ಸರ್ಕಾರ ಎರಡನ್ನೂ ನಿರ್ವಹಿಸುತ್ತಿದೆ. ಆದರೆ, ಈ ಶಿಸ್ತನ್ನು ಗುರುತಿಸಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೈಗಾರಿಕಾ ಚಟುವಟಿಕೆಯಲ್ಲಿ ಚೇತರಿಕೆಯ ಚಿಗುರು ಗೋಚರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ರೂ.ಗೆ ಮುಟ್ಟಿದೆ ಎಂದು ಅವರು ಹೇಳಿದರು.
ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿರುವ ಅವರು, ಜಿಡಿಪಿ 2.9 ಟ್ರಿಲಿಯನ್ ರೂ.ಗೆ ಏರಿದೆ. ಹಣದುಬ್ಬರ ಶೇ 4.5 ರಷ್ಟಿದೆ. ಕೇಂದ್ರ ಸರ್ಕಾರದ ವಿತ್ತ ಹೊಣೆಗಾರಿಕೆಗಳು ಕಡಿಮೆಯಾಗಿವೆ. ಭಾರತ ಕುರಿತ ಜಾಗತಿಕ ಮನೋಭಾ ತುಂಬಾ ಅನುಕೂಲಕರ ಸ್ಥಿತಿಯಲ್ಲಿದೆ ಎಂದು ಅವರು ಹೇಳಿದರು.
ನಿವ್ವಳ ವಿದೇಶಿ ನೇರ ಬಂಡವಾಳ(ಎಫ್ ಡಿಐ) 24.4 ಶತಕೋಟಿ ಡಾಲರ್ ಗೆ ತಲುಪಿದೆ. ಸರ್ಕಾರ ರಾಷ್ಟ್ರೀಯ ಮೂಲಸೌಕರ್ಯವನ್ನು ಘೋಷಿಸಿದ್ದು, ಈ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂ. ವೆಚ್ಚ ಮಾಡಲಿದೆ. ವಿದೇಶೀ ವಿನಿಮಯ ಸಂಗ್ರಹ ಸಹ ಗಣನೀಯ ಏರಿಕೆಯಾಗಿದೆ. ಒಟ್ಟು ಜಿಎಸ್ ಟಿ ಆದಾಯ ಸಂಗ್ರಹ ಸ್ಥಿರವಾಗಿ ಸುಧಾರಿಸುತ್ತಿದೆ. ಭಾರತೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕ ವಿಶ್ವಾಸವಿದೆ. ಮುಂಬೈ ಷೇರು ಪೇಟೆಯ ಬಿಎಸ್ಇ ಸೂಚ್ಯಂಕ ಸಹ ಏರಿಕೆಯಾಗುತ್ತಿದ್ದು, ಹೂಡಿಕೆದಾರರ ಸಂಪತ್ತು ವೃದ್ಧಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಿಸರ್ವ್ ಬ್ಯಾಂಕ್ ನ ರೆಪೊ ದರ ಕಡಿತದಿಂದ ಸಕಾರಾತ್ಮಕ ಬೆಳವಣಿಗೆಯಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಕಳೆದ ಜುಲೈನಿಂದ ಸರ್ಕಾರ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ವಲಯವನ್ನು ಕಾಪಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ. ಯಾವುದೇ ವಲಯದ ಸಂಪನ್ಮೂಲಗಳಲ್ಲಿ ಕಡಿತವಾಗಿಲ್ಲ. ಜಾಗತಿಕ ಬೆಳವಣಿಗೆ ದರಕ್ಕಿಂತ ವೇಗವಾಗಿ ವೃದ್ಧಿಸುತ್ತಿರುವ ಭಾರತದ ಬೆಳವಣಿಗೆ ದರವು ಪ್ರಶಂಸೆ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.
ಯುಎನ್ಐ ಎಸ್ಎಲ್ಎಸ್ 1832
More News
ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

ಲೋಕಸಭೆಯ ಬಜೆಟ್‌ ಅಧಿವೇಶನದ ಮೊದಲ ಚರಣ ಮುಕ್ತಾಯ: ಮಾರ್ಚ್‌ ಎರಡರಿಂದ 2ನೆ ಚರಣದ ಅಧಿವೇಶನ

11 Feb 2020 | 5:27 PM

ನವದೆಹಲಿ, ಫೆ.11 (ಯುಎನ್‌ಐ) ಜನವರಿ 31 ರಂದು ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಸಾಂಪ್ರದಾಯಿಕ ಭಾಷಣದೊಂದಿಗೆ ಪ್ರಾರಂಭವಾದ ಲೋಕಸಭೆಯ ಬಜೆಟ್ ಅಧಿವೇಶನದ ಮೊದಲ ಚರಣ ಮಂಗಳವಾರ ಮುಕ್ತಾಯಗೊಂಡಿದೆ.

 Sharesee more..
ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

ಎಸ್ ಸಿ/ ಎಸ್ ಟಿ ಉಪ ಯೋಜನೆ ಪುನರಾರಂಭಿಸಿ; ರಾಜ್ಯಸಭೆಯಲ್ಲಿ ಕಾಂಗ್ರೆಸ್ ಒತ್ತಾಯ

11 Feb 2020 | 4:52 PM

ನವದೆಹಲಿ, ಫೆ 11(ಯುಎನ್ಐ) ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸರ್ಕಾರ 2020-21ನೇ ಸಾಲಿನ ಮುಂಗಡಪತ್ರದಲ್ಲಿ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಸಮುದಾಯದ ಅಭಿವೃದ್ದಿಗೆ ಎಸ್ ಸಿ/ಎಸ್ ಟಿ ಉಪ ಯೋಜನೆಗಳನ್ನು ಪುನರಾರಂಭಿಸಬೇಕು ಎಂದು ಮಂಗಳವಾರ ರಾಜ್ಯಸಭೆಯಲ್ಲಿ ಒತ್ತಾಯಿಸಿದೆ.

 Sharesee more..
ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

ಸದೃಢ ಆರ್ಥಿಕತೆಗಾಗಿ ಸರ್ಕಾರ ಕಾರ್ಯಮಗ್ನ: ನಿರ್ಮಲಾ ಸೀತಾರಾಮನ್ ಭರವಸೆ

11 Feb 2020 | 4:48 PM

ನವದೆಹಲಿ, ಫೆ 11(ಯುಎನ್ಐ)- ಸರ್ಕಾರಿ ಮತ್ತು ಖಾಸಗಿ ಹೂಡಿಕೆ, ಬಳಕೆ ಮತ್ತು ರಫ್ತು ಹೆಚ್ಚಿಸುವ ನಿಟ್ಟಿನಲ್ಲಿ ಸದೃಢ ಆರ್ಥಿಕತೆ ರೂಪಿಸಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಭರವಸೆ ನೀಡಿದ್ದು, ಎಲ್ಲಾ ವಲಯಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದರಿಂದ ಫಲಿತಾಂಶಗಳು ಈಗಾಗಲೇ ಗೋಚರಿಸಲಾರಂಭಿಸಿವೆ ಎಂದು ಹೇಳಿದ್ದಾರೆ.

 Sharesee more..