Sunday, May 31 2020 | Time 18:06 Hrs(IST)
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
National Share

ಎಫ್‌ಎಟಿಎಫ್ ಮಾನದಂಡಗಳು ಜಾರಿಗೆ ತರಲು ಭಾರತ ಬದ್ಧ- ಕಿಶನ್ ರೆಡ್ಡಿ

ಹೈದರಾಬಾದ್, ನ 8 (ಯುಎನ್‌ಐ) ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಮಾನದಂಡಗಳನ್ನು ಜಾರಿಗೆ ತರಲು ಹಾಗೂ ಭಯೋತ್ಪಾದನೆಗೆ ಹಣಕಾಸು ಪೂರೈಕೆ ಜಾಲವನ್ನು ನಿಗ್ರಹಿಸುವ ಹೋರಾಟಕ್ಕೆ ಭಾರತ ಸಂಪೂರ್ಣ ಬದ್ಧವಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.
ಗುರುವಾರ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಆರಂಭವಾದ ‘ಭಯೋತ್ಪಾದನೆಗೆ ಹಣದ ನೆರವಿಲ್ಲ’ ಎಂಬ ವಿಷಯ ಕುರಿತ ಎರಡನೇ ಅಂತಾರಾಷ್ಟ್ರೀಯ ಗೃಹ ಸಚಿವರ ಸಭೆಯ ಎರಡನೇ ದಿನದಂದು ಮಾತನಾಡಿದ ಸಚಿವರು, ಭಯೋತ್ಪಾದನೆಗೆ ಹಣಕಾಸು ನೆರವು ಕುರಿತು ಭಾರತದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಎಂದು ಶನಿವಾರ ಇಲ್ಲಿ ಪ್ರಕಟಿಸಲಾದ ಹೇಳಿಕೆ ತಿಳಿಸಿದೆ.
‘ಹೊಸ ತಂತ್ರಜ್ಞಾನಗಳು ಮತ್ತು ಭಯೋತ್ಪಾದನೆಗೆ ಹಣಕಾಸು ನೆರವಿನ ಅಪಾಯ’ ಕುರಿತ ದುಂಡು ಮೇಜಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಿಶನ್‍ ರೆಡ್ಡಿ, ಫಲಾ-ಇ-ಇನ್ಸಾನಿಯತ್ ಪ್ರತಿಷ್ಠಾನದ ಸೈಬರ್ ಚಟುವಟಿಕೆಗಳ ಬಗ್ಗೆ ಪ್ರಸ್ತಾಪಿಸಿದರು. ವಿಶ್ವಸಂಸ್ಥೆ ಈ ಸಂಸ್ಥೆಯನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಿದ್ದರೂ, ಸೈಬರ್‌ನಲ್ಲಿ ಇದು ಸಕ್ರಿಯವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ಹಣಕಾಸು ಜಾಲಗಳನ್ನು ತಡೆಯಲು ಮತ್ತು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಎಫ್‌ಎಟಿಎಫ್ ಮಾನದಂಡಗಳನ್ನು ಜಾರಿಗೆ ತರಲು ಹಾಗೂ ಪರಿಣಾಮಕಾರಿ ಎಎಂಎಲ್ ಮತ್ತು ಸಿಎಫ್‌ಟಿ ವ್ಯವಸ್ಥೆಗಳನ್ನು ಸ್ಥಾಪಿಸಲು ಭಾರತ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವರು ಪ್ರತಿನಿಧಿಗಳಿಗೆ ಭರವಸೆ ನೀಡಿದರು.

ಭಾರತೀಯ ಸನ್ನಿವೇಶದಲ್ಲಿ ಬ್ಲಾಕ್‌ಚೈನ್ ಆಧಾರಿತ ಕ್ರಿಪ್ಟೋ ಕರೆನ್ಸಿಗಳ ಬಳಕೆ ಪ್ರಸ್ತಾಪಿಸಿದ ಅವರು, ವರ್ಚುಯಲ್ ಸ್ವತ್ತುಗಳು, ವಿಶೇಷವಾಗಿ ಕ್ರಿಪ್ಟೋ-ಕರೆನ್ಸಿಗಳು ಅಪರಾಧಿಗಳಿಗೆ ಅವರ ಕಾವ್ಯನಾಮ, ಗೂಢ ಲಿಪೀಕರಣ, ಜಾಗತಿಕ ವ್ಯಾಪ್ತಿ ಮತ್ತು ಕಡಿಮೆ-ವೆಚ್ಚದ ಕಾರಣದಿಂದಾಗಿ ಕೆಲ ವಿಶಿಷ್ಟ ಅನುಕೂಲಗಳನ್ನು ಒದಗಿಸುತ್ತಿವೆ ಎಂದು ವಿವರಿಸಿದರು.

ಯುಎನ್‍ಐ ಎಸ್‍ಎಲ್‍ಎಸ್ ಕೆವಿಆರ್ 1848
More News
ಪ್ರಸ್ತುತ ಸನ್ನಿವೇಶವನ್ನು ಭವಿಷ್ಯದ ಪಾಠವನ್ನಾಗಿ ಪರಿಗಣಿಸಬೇಕು; ಪ್ರಧಾನಿ ಮೋದಿ

ಪ್ರಸ್ತುತ ಸನ್ನಿವೇಶವನ್ನು ಭವಿಷ್ಯದ ಪಾಠವನ್ನಾಗಿ ಪರಿಗಣಿಸಬೇಕು; ಪ್ರಧಾನಿ ಮೋದಿ

31 May 2020 | 5:25 PM

ನವದೆಹಲಿ, ಮೇ 31 (ಯುಎನ್ಐ) ಜಗತ್ತಿನಲ್ಲಿ ಕೊರೋನಾ ವೈರಸ್ ಸೋಂಕಿನ ಹರಡುವಿಕೆ ಬೆನ್ನಲ್ಲೇ ಪ್ರಸ್ತುತ ಪರಿಸ್ಥಿತಿಯನ್ನು ಭವಿಷ್ಯಕ್ಕೆ ಅವಕಾಶ ಕಲ್ಪಿಸುವ ಪಾಠವನ್ನಾಗಿ ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

 Sharesee more..