Wednesday, Dec 2 2020 | Time 08:13 Hrs(IST)
Sports Share

ಎಲ್ ಪಿ ಎಲ್ ನಲ್ಲಿ ಭ್ರಷ್ಟಾಚಾರ ತಡೆಯಲು ಕಟ್ಟುನಿಟ್ಟಾದ ಕ್ರಮ

ಕೊಲಂಬೊ, ನ.21 (ಯುಎನ್ಐ)- ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ನಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಶ್ರೀಲಂಕಾ ಕ್ರಿಕೆಟ್ ಕಟ್ಟುನಿಟ್ಟಾಗಿದೆ ಮತ್ತು ‘ಜೋರೋ ಟಾಲರೆನ್ಸ್' ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ.

ಶ್ರೀಲಂಕಾ ಕ್ರಿಕೆಟ್ ಭ್ರಷ್ಟಾಚಾರ ನಿಗ್ರಹ ದಳ (ಎಸ್‌ಎಲ್‌ಸಿ ಎಸಿಯು), ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕದ (ಐಸಿಸಿ ಎಸಿಯು) ಸಹಯೋಗದೊಂದಿಗೆ ಲಂಕಾ ಪ್ರೀಮಿಯರ್ ಲೀಗ್ 2020 ರಲ್ಲಿ ಭ್ರಷ್ಟಾಚಾರ-ವಿರೋಧಿ ಚಟುವಟಿಕೆಗಳಿಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಕಾರ್ಯಕ್ರಮ, ಪಂದ್ಯಾವಳಿಗಳು ಮತ್ತು ಹೋಟೆಲ್‌ಗಳಲ್ಲಿ ಈ ತಂಡ ಹಾಜರಿರಲಿದ್ದು, ಹದ್ದಿನ ಕಣ್ಣು ಇಡಲಿದೆ.

ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಅವರು ಶುಕ್ರವಾರ ತಂಡದ ಮಾಲೀಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಂದ್ಯಾವಳಿಯ ಸಂಯೋಜನೆಯನ್ನು ಸುಗಮವಾಗಿ ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅವರ ಬೆಂಬಲವನ್ನು ಕೋರಿದರು.

"ಆಟಗಾರರು ಮತ್ತು ಅಧಿಕಾರಿಗಳು ಭ್ರಷ್ಟಾಚಾರ-ವಿರೋಧಿ ಪ್ರೋಟೋಕಾಲ್ ಅನ್ನು ಅನುಸರಿಸುತ್ತಾರೆ ಮತ್ತು ಪಾರದರ್ಶಕ ಮತ್ತು ನ್ಯಾಯಯುತ ಪಂದ್ಯಾವಳಿಯನ್ನು ಆಯೋಜಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನಾವು ಕೋರಿದ್ದೇವೆ" ಎಂದು ಡಿಸಿಲ್ವಾ ಹೇಳಿದರು.

"ಎಸ್‌ಎಲ್‌ಸಿ ಮತ್ತು ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಹೊರತಾಗಿ, ಎಸ್‌ಎಲ್‌ಸಿ ಸರ್ಕಾರಿ ಭದ್ರತಾ ಸಂಸ್ಥೆಗಳಿಂದ ಸಹಾಯವನ್ನು ಪಡೆಯುತ್ತದೆ ಮತ್ತು ಅಗತ್ಯವಿದ್ದಾಗ ಪಂದ್ಯಾವಳಿಯನ್ನು ಯಾವುದೇ ಭ್ರಷ್ಟಾಚಾರ ಚಟುವಟಿಕೆಗಳಿಲ್ಲದೆ ನಡೆಸಬಹುದು" ಎಂದಿದ್ದಾರೆ.

ಯುಎನ್ಐ ವಿಎನ್ಎಲ್ 2209