Saturday, Jul 11 2020 | Time 09:29 Hrs(IST)
business economy Share

ಎಸ್ ಎಮ್ ಎಸ್ ಮುಖಾಂತರ ಮಾರಾಟ ವಿವರಗಳಿಲ್ಲದ ಜಿ ಎಸ್ ಟಿ ಆರ್ - 1 ರಿಟರ್ನ್ ಸಲ್ಲಿಕೆಗೆ ಅವಕಾಶ

ನವದೆಹಲಿ, ಜೂನ್ 27 (ಯುಎನ್ಐ) ಎಸ್ ಎಮ್ ಎಸ್ ಮುಖಾಂತರ ಮಾರಾಟ ವಿವರಗಳಿಲ್ಲದ ಜಿ ಎಸ್ ಟಿ ಆರ್ - 1 ರಿಟರ್ನ್ ಸಲ್ಲಿಕೆಗೆ ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಅಡಿ ನೋಂದಾಯಿಸಲ್ಪಟ್ಟವರು ಪ್ರತಿ ತಿಂಗಳು ಖರೀದಿ ಮತ್ತು ಮಾರಾಟದ ವಿವರಗಳನ್ನು ದಾಖಲಿಸಿ ತೆರಿಗೆ ಪಾವತಿಸುವ ರಿಟರ್ನ್ ಸಲ್ಲಿಸುವ ಜಿ ಎಸ್ ಟಿ ಆರ್ - 3 ಬಿ ಜೊತೆಗೆ ಯಾರಿಗೆ ಮಾರಾಟ ಮಾಡಲಾಗಿದೆ, ಮಾರಾಟದ ವಸ್ತುವಿನ ವಿವರ, ದರ, ಬಿಲ್ ಸಂಖ್ಯೆ ಹೀಗೆ ಸವಿವರ ನೀಡುವ ಜಿ ಎಸ್ ಟಿ ಆರ್ - 1 ರಿಟರ್ನ್ ಸಲ್ಲಿಸುವ ಅಗತ್ಯವಿದ್ದು ಒಂದು ವೇಳೆ ಯಾವುದೇ ಮಾರಾಟ ಮಾಡಿಲ್ಲವಾದಲ್ಲಿ ಆ ತಿಂಗಳ ಜಿ ಎಸ್ ಟಿ ಆರ್ 1 ನಿಲ್ ರಿಟರ್ನ್ ಅನ್ನು ಮೊಬೈಲ್ ಸಂದೇಶ ಎಸ್ ಎಮ್ ಎಸ್ ಮುಖಾಂತರ ಸಲ್ಲಿಸಬಹುದಾಗಿದೆ.

ಇದರಿಂದ 12 ಲಕ್ಷಕ್ಕೂ ಹೆಚ್ಚು ನೋಂದಾಯಿತ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದ್ದು ಜಿ ಎಸ್ ಟಿ ಅಡಿ ನಿಯಮ ಸರಳೀಕರಣ ಪ್ರಕ್ರಿಯೆಯ ಭಾಗವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕು ಮಂಡಳಿ ಸಿಬಿಐಸಿ ಹೇಳಿದೆ.



ಪ್ರಸ್ತುತ ಜಿ ಎಸ್ ಟಿ ಅಡಿ ನೋಂದಾಯಿಸಲ್ಪಟ್ಟವರು ಪೋರ್ಟಲ್ ನಲ್ಲಿ ತಮ್ಮ ಲಾಗಿನ್ ಮೂಲಕ ಪ್ರತಿ ತಿಂಗಳು ಅಥವಾ ತ್ರೈಮಾಸಿಕದಲ್ಲಿ ಜಿ ಎಸ್ ಟಿ ಆರ್ - 1 ರಲ್ಲಿ ಮಾರಾಟದ ವಿವರಗಳನ್ನು ಸಲ್ಲಿಸಬೇಕಿದೆ. ಇದೀಗ ತೆರಿತೆ ಪಾವತಿದಾರರು 14409 ಕ್ಕೆ ಎಸ್ ಎಮ್ ಎಸ್ ಕಳುಹಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.

ಈ ಸಂಖ್ಯೆಗೆ ಎನ್ ಐ ಎಲ್ ಸ್ಪೇಸ್ ಆರ್ 1 ಸ್ಪೇಸ್ ಜಿ ಎಸ್ ಟಿ ಸಂಖ್ಯೆ ಸ್ಪೇಸ್ ತೆರಿಗೆ ಪಾವತಿ ಅವಧಿ(ಎಮ್ ಎಮ್ ವೈ ವೈ ವೈ ವೈ) ರೂಪದಲ್ಲಿ ಸಂದೇಶ ಕಳುಹಿಸಿದರೆ ಆರು ಅಂಕಿಗಳ ಖಾತರಿ ಸಂದೇಶ ಲಭಿಸಲಿದೆ. ಬಳಿಕ ಸಿಎನ್ಎಫ್ ಸ್ಪೇಸ್ ಆರ್ 1 ಸ್ಪೇಸ್ ಲಭಿಸಿದ ಆರು ಅಂಕಿಗಳ ಸಂದೇಶವನ್ನು 14409 ಕ್ಕೆ ಕಳುಹಿಸಬೇಕು. ಹೀಗೆ ವರ್ತಕರು ನಿಲ್ ರಿಟರ್ನ್ ಅಂದರೆ ಯಾವುದೇ ಮಾರಾಟ ಇಲ್ಲ ಎಂದು ದೃಢೀಕರಿಸಬಹುದಾಗಿದೆ.
ಈ ಸೌಲಭ್ಯ ಜಿ ಎಸ್ ಟಿ ಆರ್ 1 ಗೆ ಜುಲೈ 2020 ರಿಂದ ಲಭ್ಯವಾಗಲಿದೆ. ಜಿ ಎಸ್ ಟಿ ಆರ್ 3 ಬಿ ಗೆ ಈಗಾಗಲೇ ಈ ಸೌಲಭ್ಯ ಲಭ್ಯವಿದ್ದು ಆರ್ 1 ಬದಲಿಗೆ ಆರ್ 3 ಎಂದು ನಮೂದಿಸಿ ಸಂದೇಶದ ಮೂಲಕ ಯಾವುದೇ ಖರೀದ ಅಥವಾ ಮಾರಾಟ ಇಲ್ಲ ಎಂದು ದೃಢೀಕರಿಸುವ ನಿಲ್ ರಿಟರ್ನ್ಸ್ ಸಲ್ಲಿಸಬಹುದಾಗಿದೆ.
ಯುಎನ್ಐ ಜಿಎಸ್ಆರ್ 2314
More News
ಕೋವಿಡ್ ಯೋಧರಿಗೆ ಯಮಹಾದಿಂದ

ಕೋವಿಡ್ ಯೋಧರಿಗೆ ಯಮಹಾದಿಂದ "ವಿಶೇಷ ಹಣಕಾಸು ಯೋಜನೆ" ಘೋಷಣೆ

10 Jul 2020 | 4:10 PM

ಮುಂಬೈ, ಜು 10 (ಯುಎನ್ಐ) ಪ್ರಮುಖ ಆಟೊಮೊಬೈಲ್ ಕಂಪನಿ ಯಮಹಾ ಮೋಟಾರ್ ಇಂಡಿಯಾ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ನೆರವಾಗುವ ಸಲುವಾಗಿ ಎಲ್ಲಾ ಅಧಿಕೃತ ಯಮಹಾ ಮಾರಾಟಗಾರರ ಮೂಲಕ ವಿಶೇಷ ಹಣಕಾಸು ಯೋಜನೆ ಘೋಷಿಸಿದೆ.

 Sharesee more..
'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್

'ಜಿಯೋ-ಬಿಪಿ' ಪಾಲುದಾರಿಕೆ ಪ್ರಾರಂಭಿಸಿದ ರಿಲಯನ್ಸ್

10 Jul 2020 | 3:50 PM

ಮುಂಬೈ, ಜು.10 (ಯುಎನ್ಐ) ಇಂಧನಗಳು ಮತ್ತು ಮೊಬಿಲಿಟಿಗಾಗಿ ತಮ್ಮ ಹೊಸ ಭಾರತೀಯ ಜಂಟಿ ಉದ್ಯಮ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್‌ನ (ಆರ್‌ಬಿಎಂಎಲ್) ಪ್ರಾರಂಭವನ್ನು ಬಿಪಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಘೋಷಿಸಿವೆ.

 Sharesee more..