Tuesday, Jan 21 2020 | Time 21:59 Hrs(IST)
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
 • ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ
 • ವಿಶ್ವಕಪ್: ಕಿರಿಯರಿಗೆ ಸುಲಭ ತುತ್ತಾದ ಜಪಾನ್
business economy Share

ಏಪ್ರಿಲ್ 2020 ರ ಗಡುವಿನ ಮುನ್ನ ಯಮಹಾದ ಬಿಎಸ್-6 ರೂಪಾಂತರ ವಾಹನಗಳ ಬಿಡುಗಡೆ

ಚೆನ್ನೈ, ಆಗಸ್ಟ್ 13 (ಯುಎನ್‌ಐ) ಮುಂಚೂಣಿ ದ್ವಿಚಕ್ರ ವಾಹನ ತಯಾರಕ ಕಂಪೆನಿಗಳಲ್ಲಿ ಒಂದಾದ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಬಿಎಸ್-6 ಇಂಧನ ನಿಯಮಗಳಿಗೆ ಹೊಂದಾಣಿಕೆಯಾಗುವ ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಹಂತಗಳಲ್ಲಿ ಏಪ್ರಿಲ್ 2020ರ ಗಡುವಿನೊಳಗೆ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದೆ.
ಬಿಎಸ್-6 ಮೋಟರ್ ಸೈಕಲ್‌ಗಳು ಈ ವರ್ಷದ ನವೆಂಬರ್ ನಲ್ಲಿ ಹಾಗೂ ಜನವರಿ 2020 ರಲ್ಲಿ ಸ್ಕೂಟರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂದು ಯಮಹಾ ಮೋಟಾರ್ ಇಂಡಿಯಾ ಕಂಪನಿಗಳ ಸಮೂಹ ಅಧ್ಯಕ್ಷ ಮೋಟೋಫುಮಿ ಶಿತಾರ ತಿಳಿಸಿದ್ದಾರೆ.
ಜವಾಬ್ದಾರಿಯುತ ತಯಾರಕ ಕಂಪೆನಿಯಾದ ಯಮಹಾ, ಅದರ ಪರಿಸರ ಮತ್ತು ಗ್ರಾಹಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಲೇ ಬಂದಿದೆ.
ಕಂಪನಿಯ ಬದ್ಧತೆ ಪೂರೈಸಲು ಯಮಹಾ ಸಿಬ್ಬಂದಿ ತಂಡವು ಶ್ರಮಿಸುತ್ತಿದೆ. ಬಿಎಸ್- 6 ಹೊಂದಾಣಿಕೆಯ ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ಏಪ್ರಿಲ್ 2020 ರ ಗಡುವು ಮುನ್ನ ಮಾರುಕಟ್ಟೆಗೆ ಮಾರುಕಟ್ಟೆ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.
ಬಿಎಸ್-6 ರೂಪಾಂತರದ ಮಾದರಿಗಳನ್ನು ತಯಾರಿಸಲು ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಬಹುದು. ಇದರಿಂದ ದ್ವಿಚಕ್ರ ವಾಹನಗಳ ಬೆಲೆ ಶೇ. 10ರಿಂದ 15ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಈ ದರಗಳು ವಾಹನದ ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತವೆ ಎಂದು ಶಿತಾರಾ ಹೇಳಿದ್ದಾರೆ.
ಯುಎನ್‌ಐ ಎಸ್‌ಎಲ್‌ಎಸ್ ಕೆವಿಆರ್ 1611
More News

ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ

21 Jan 2020 | 5:19 PM

 Sharesee more..

ಸೆನ್ಸೆಕ್ಸ್ 205 10 ಅಂಕ ಇಳಿಕೆ

21 Jan 2020 | 4:19 PM

 Sharesee more..

ಸೆನ್ಸೆಕ್ಸ್‌ 128 ಅಂಕ ಕುಸಿತ

21 Jan 2020 | 12:03 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ

21 Jan 2020 | 12:03 PM

 Sharesee more..