Tuesday, Jan 21 2020 | Time 23:31 Hrs(IST)
 • ಸೌಹಾರ್ದತೆಯನ್ನು ಕೆಡಿಸುವ ರೇಣುಕಾಚಾರ್ಯ ಹೇಳಿಕೆ: ಎಸ್‍ಡಿಪಿಐ
 • ವುಹಾನ್‌ ವೈರಸ್‌: ಏಳು ವಿಮಾನ ನಿಲ್ದಾಣಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ
 • ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
 • ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದವರನ್ನು ಪಕ್ಷದಿಂದ ಅಮಾನತುಗೊಳಿಸಿದ ದಿನೇಶ್ ಗುಂಡೂರಾವ್
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
Health -Lifestyle Share

ಏಳು ವರ್ಷದ ಬಾಲಕನ ಬಾಯಲ್ಲಿ 526 ಹಲ್ಲುಗಳು!

ಚೆನ್ನೈ, ಜುಲೈ 31 (ಯುಎನ್ಐ) ಏಳು ವರ್ಷದ ಬಾಲಕನ ಬಾಯಲ್ಲಿತ್ತು ಬರೋಬ್ಬರಿ 526 ಹಲ್ಲುಗಳು!
ಇಂತಹದೊಂದು ಅಪರೂಪದ ಪ್ರಕರಣ ತಮಿಳುನಾಡು ರಾಜಧಾನಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ಬಾಲಕನಿಗೆ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರ ತಂಡ, ಬಾಯಲ್ಲಿ ಹುದುಗಿದ್ದ 526 ಅತಿ ಸಣ್ಣ ಹಲ್ಲುಗಳನ್ನು ಹೊರತೆಗೆದಿದ್ದಾರೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಸವಿತಾ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ದಂತ ವಿಭಾಗದ ಪ್ರೊ.ಪಿ.ಸೆಂತಿಲ್ ನಾಥನ್, ಇದು ಜಗತ್ತಿನ ಮೊದಲ ಅಪರೂಪದ ಪ್ರಕರಣವಾಗಿದೆ. ಒಬ್ಬ ಬಾಲಕನಲ್ಲಿ ಅತಿ ಹೆಚ್ಚು ಸಣ್ಣ ಹಲ್ಲುಗಳಿರುವ ಪ್ರಕರಣ ಈ ಹಿಂದೆ ಬೆಳಕಿಗೆ ಬಂದಿರಲಿಲ್ಲ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಕಾಂಪೌಂಡ್‌ ಕಂಪೋಸಿಟ್ ಆಂಡೋನ್ ಟೋಮ್' ಎಂದು ಕರೆಯಲಾಗುತ್ತದೆ ಎಂದರು.
ಈ ಬಾಲಕನಿಗೆ ಮೂರು ವರ್ಷವಿದ್ದಾಗಲೇ ಬಲ ದವಡೆಯಲ್ಲಿ ಊತ ಕಾಣಿಸಿಕೊಂಡಿತ್ತು.ಆದರೆ, ಆಗ ಆತ ಚಿಕಿತ್ಸೆಗೆ ಸಹಕರಿಸಿರಲಿಲ್ಲ. ನಂತರ, ದಿನದಿಂದ ದಿನಕ್ಕೆ ಊತ ಹೆಚ್ಚುತ್ತಲೇ ಸಾಗಿತು. ಆಗ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆತಂದರು. ಎಕ್ಸ್ -ರೇ ವರದಿಯಲ್ಲಿ ದವಡೆಯಲ್ಲಿ ಹಲವಾರು ಸಣ್ಣ ಹಲ್ಲುಗಳಿರುವುದು ಪತ್ತೆಯಾಗಿತ್ತು. ಸಿಟಿ-ಸ್ಕ್ಯಾನ್ ವರದಿಯಲ್ಲಿ ಕೂಡ ಇದೇ ಫಲಿತಾಂಶ ಕಂಡುಬಂದಿತ್ತು.
ವೈದ್ಯರ ತಂಡ ಐದು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ 526 ಸಣ್ಣ ಹಾಗೂ ಮಧ್ಯಮ ಗಾತ್ರದ ಹಲ್ಲುಗಳನ್ನೊಳಗೊಂಡ 200 ಗ್ರಾಂ ತೂಕದ ಚೀಲವನ್ನು ಪತ್ತೆ ಮಾಡಿದ್ದರು. ಅದನ್ನು ಎಚ್ಚರಿಕೆಯಿಂದ ಹೊರತೆಗೆದ ವೈದ್ಯರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದಾಗಿ ಘೋಷಿಸಿದ್ದು, ಈಗ ಬಾಲಕ ಸಹಜ ಸ್ಥಿತಿಗೆ ಮರಳಿದ್ದಾನೆ.
ಯುಎನ್ಐ ಎಸ್ಎಚ್ ಎಸ್ಎ 1624
More News
ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

ವಾಗ್ಮೀ, ಕವಿ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಪ್ರಧಾನಿಯಾಗಿ ಹತ್ತು ಹಲವು ಆಯಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ

25 Dec 2019 | 4:06 PM

ನವದೆಹಲಿ, ಡಿ 25 [ಯುಎನ್ಐ] ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು, ಬರಹ, ರಾಜಕೀಯ ಜೀವನ ಕುರಿತು ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವರಾಗಿದ್ದ ಸಂದರ್ಭದಲ್ಲಿ ಈಗಿನ ಉಪ ರಾಷ್ಟ್ರಪತಿ ಎಂ.

 Sharesee more..