Sunday, Aug 25 2019 | Time 01:23 Hrs(IST)
International Share

ಐಎಪ್‌ಎಫ್ ಮುಖ್ಯಸ್ಥ ಲಗಾರ್ಡೆ ರಾಜೀನಾಮೆ ಸ್ವೀಕಾರ

ವಾಷಿಂಗ್‌ಟನ್, ಜುಲೈ 17 (ಯುಎನ್‌ಐ) ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್‌) ಮುಖ್ಯಸ್ಥ ಹುದ್ದೆಗೆ ಕ್ರಿಸ್ಟಿಯಾನೆ ಲಗಾರ್ಡೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಐಎಮ್‌ಎಫ್‌ ಹೇಳಿಕೆ ತಿಳಿಸಿದೆ.

ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿಯಾನೆ ಲಗಾರ್ಡೆ ಅವರು 2019 ರ ಸೆಪ್ಟೆಂಬರ್ 12 ರಿಂದ ಅನ್ವಯವಾಗುವಂತೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಮಂಡಳಿ ಹೇಳಿಕೆ ತಿಳಿಸಿದೆ. ಜಾಗತಿಕ ಆರ್ಥಿಕ ಮುಗ್ಗಟ್ಟು ಮೊದಲಾದ ಸವಾಲಿನ ಸಂದರ್ಭಗಳಲ್ಲಿ ಅವರು ಮಾರ್ಗದರ್ಶನರಾಗಿದ್ದರು ಎಂದು ಅವರ ಕಾರ್ಯಕ್ಕೆ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಮುಂದಿನ ವ್ಯವಸ್ಥಾಪಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಸಹ ಪ್ರಕಟಣೆ ತಿಳಿಸಿದೆ.
ಯುಎನ್ಐ ಜಿಎಸ್‌ಆರ್ 1149