Wednesday, Dec 2 2020 | Time 09:25 Hrs(IST)
  • ಯಲಚೇನಹಳ್ಳಿ-ಅಂಜನಾಪುರ ನಮ್ಮ ಮೆಟ್ರೋ ಸಂಚಾರ ಶೀಘ್ರ ಆರಂಭ
  • ಭಾರತ vs ಆಸ್ಟ್ರೇಲಿಯಾ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ
  • ಶ್ರೀಲಂಕಾದಲ್ಲಿ ಕೊರೋನ ತಡೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
Sports Share

ಐಎಸ್ಎಲ್: ನಾರ್ತ್ ಈಸ್ಟ್ ಯುನೈಟೆಡ್ ಗೆಲುವಿನ ಆರಂಭ

ಗೋವಾ, ನ.21 (ಯುಎನ್ಐ)- ಪ್ರಸಕ್ತ ಆವೃತ್ತಿ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡ ಶುಭಾರಂಭ ಮಾಡಿದೆ. ಶನಿವಾರ ನಡೆದ ಟೂರ್ನಿಯ ಎರಡನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡ 1-0 ಮುಂಬೈ ಸಿಟಿ ಎಫ್ ಸಿ ತಂಡವನ್ನು ಮಣಿಸಿತು.

ಮೊದಲಾರ್ಧದ ಪಂದ್ಯದಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿದ ಉಭಯ ತಂಡದ ಆಟಗಾರರು ಎದುರಾಳಿ ತಂಡಕ್ಕೆ ಗೋಲು ನೀಡದಂತೆ ತಡೆಯುವಲ್ಲಿ ಸಫಲರಾದರು. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ಉಭಯ ತಂಡದ ಆಟಗಾರರು ವಿಫಲರಾದರು.

ಮೊದಲಾವಧಿ ಗೋಲು ರಹಿತವಾಗಿದ್ದರಿಂದ ಎರಡನೇ ಅವಧಿಯತ್ತ ಎಲ್ಲರ ಚಿತ್ತ ನೆಟ್ಟಿತ್ತು. ಆದರೆ ಈ ಅವಧಿಯ ಆರಂಭದಲ್ಲೇ ಕ್ವೆಸಿ ಅಪ್ಪೈ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದರು. 49ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ನಾರ್ತ್ ಈಸ್ಟ್ ತಂಡ ಮೊದಲ ಗೋಲಿನ ನಗೆ ಬೀರಿತು.

ಮುಂಬೈ ಸಿಟಿ ಗೋಲು ಬಾರಿಸುವ ಆಸೆ ಕೈ ಗೂಡಲಿಲ್ಲ.

ಯುಎನ್ಐ ವಿಎನ್ಎಲ್ 2233