Monday, May 27 2019 | Time 09:39 Hrs(IST)
Sports Share

ಐಟಿಎಫ್‌ ಅಧ್ಯಕ್ಷರಾಗಿ ಸುರೇಖಾ ರಾಮಚಂದ್ರನ್‌ ಪುನರಾಯ್ಕೆ

ಚೆನ್ನೈ, ಮೇ 15 (ಯುಎನ್‌ಐ) ಭಾರತೀಯ ಟ್ರಿಯಾಥ್ಲಾನ್‌ ಒಕ್ಕೂಟದ ಅಧ್ಯಕ್ಷರಾಗಿ ಸುರೇಖಾ ರಾಮಚಂದ್ರನ್‌ ಹಾಗೂ ಕಾರ್ಯದರ್ಶಿಯಾಗಿ ಅಮನ್‌ ಗುಪ್ತಾ ಅವರು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದಾರೆ.
ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಯ ಜತೆಗೆ ಇನ್ನುಳಿದ ಸ್ಥಾನಗಳಿಗೂ ಚುನಾವಣೆ ನಡೆಸಲಾಯಿತು. ಎನ್‌ ರಾಮಚಂದ್ರನ್‌ ಅವರನ್ನು ಐಟಿಎಫ್‌ಗೆ ಸಂಸ್ಥಾಪಕ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ಅಕ್ಬರ್‌ ಅಲಿ ಅವರು ರಿಟರ್ನಿಂಗ್‌ ಆಫೀಸರ್‌ ಹಾಗೂ ಟಿಎನ್‌ಓಎ ಕಾರ್ಯದರ್ಶಿ ಜೆ.ಎಂ. ಫೆರ್ನಾಂಡೊ ವೀಕ್ಷಕರಾಗಿದ್ದರು.
ಉಪಾಧ್ಯರಾಗಿ ಟಿ.ಆರ್‌. ನಾರಯಣಸ್ವಾಮಿ ಹಾಗೂ ಉಪಾಧ್ಯಕ್ಷರುಗಳಾಗಿ ಜೆ.ಪಿ ಕಾರ್ನೇರೊ, ಕಮಲೇಶ್‌ ನಾನವತಿ, ರಾಕೇಶ್‌ ಗುಪ್ತಾ, ವಿಷ್ಣು ಕುಮಾರ್‌ ಶ್ರೀವಾತ್ಸವ, ಓ.ಪಿ ಆವಾಸ್ತಿ, ಪಿ. ಸುಬ್ರಮಣಿ, ಎ. ದಯಾನಂದ್ ಕುಮಾರ್‌ ನೇಮಕಗೊಂಡಿದ್ದಾರೆ.
ಜಂಟಿ ಕಾರ್ಯದರ್ಶಿಗಳಾಗಿ ಕೆ. ರಾಜೇಂದಿರನ್‌ ಹಾಗೂ ವಿ. ಶ್ರೀಸೈಲಂ, ಖಜಾಂಚಿಯಾಗಿ ಪಿ. ಮುರಳೀಧರನ್‌, ವ್ಯವಸ್ಥಾಪಕ ಸಮಿತಿಗೆ ಪರಂಜೀತ್‌ ಸಿಂಗ್‌, ಗೋಪಾಲ್‌ ಹೊಸೂರ್‌, ಬಿ.ಸಿ ಸಿಂಗ್‌, ನರೇಶ್‌ ಶರ್ಮಾ, ಸುಶೀಲ್‌ ಕುಮಾರ್‌, ಗುರ್ಭಾಗತ್‌ ಸಿಂಗ್‌ ಸಂಧು, ರವೀನ್ ಕಪೂರ್‌ ಹಾಗೂ ಓಂ ಪ್ರಕಾಶ್‌ ಅವರು ನೇಮಕಗೊಂಡಿದ್ದಾರೆ ಎಂದು ಐಟಿಎಫ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಯುಎನ್‌ಐ ಆರ್‌ಕೆ ಜಿಎಸ್‌ಆರ್‌ 2050
More News

ಫ್ರೆಂಚ್ ಓಪನ್: ಕೆರ್ಬರ್ ಗೆ ಸೋಲು

26 May 2019 | 5:34 PM

 Sharesee more..

ಚೀನಾಗೆ ಸುದೀರ್ ಮನ್ ಕಪ್

26 May 2019 | 5:27 PM

 Sharesee more..
ಭಾರತ ಕ್ರಿಕೆಟ್‌ ತಂಡ ಎದೆಗುಂದುವ ಅವಶ್ಯಕತೆ ಇಲ್ಲ- ಜಡೇಡಾ

ಭಾರತ ಕ್ರಿಕೆಟ್‌ ತಂಡ ಎದೆಗುಂದುವ ಅವಶ್ಯಕತೆ ಇಲ್ಲ- ಜಡೇಡಾ

26 May 2019 | 4:13 PM

ನವದೆಹಲಿ, ಮೇ 26 (ಯುಎನ್ಐ) ಐಸಿಸಿ ಪುರುಷರ ವಿಶ್ವಕಪ್ ಏಕದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದೆ, ಈ ಮೂಲಕ ನಿರಾಸೆ ಅನುಭವಿಸಿದೆಯಾದರೂ ತಂಡ ಎದೆಗುಂದುವ ಅವಶ್ಯಕತೆ ಇಲ್ಲ ಎಂದು ಆಲ್ ರೌಂಡರ್ ರವೀಂದ್ರ ಜಡೇಜಾ ಅಭಿಪ್ರಾಯಪಟ್ಟಿದ್ದಾರೆ

 Sharesee more..