business economyPosted at: Jan 13 2021 12:36PM Shareಐಟಿಸಿ ಸನ್ ಫೀಸ್ಟ್ ‘ನೂಡಲ್ಸ್ ಇನ್ ಅ ಬೌಲ್’ ನೊಂದಿಗೆ ಕ್ವಿಕ್ ಮೀಲ್ಝ್ ಬಿಡುಗಡೆನವದೆಹಲಿ, ಜ.13 (ಯುಎನ್ಐ) ಭಾರತದ ಅತ್ಯಂತ ಜನಪ್ರಿಯ ಇ ನ್ಸ್ಟಂ ಟ್ ನೂಡಲ್ಸ್ ಬ್ರಾಂಡ್ಸ್ ಪೈಕಿ ಒಂದಾಗಿರುವ ಸನ್ಫೀಂಸ್ಟ್ ಯಿಪ್ಪೀ, ಕ್ವಿಕ್ ಮೀಲ್ಝ್ ಎಂಬ ಹೆಸರಿನ ನೂಡಲ್ಸ್ ಅನ್ನು ಬೌಲ್ ನೊಂದಿಗೆ ಪೂರೈಸುವ ಮೂಲಕ ಇ ನ್ಸ್ಟಂಎಟ್ ನೂಡಲ್ಸ್ ಸೆಗ್ಮೆಂ ಟ್ ನಲ್ಲಿ ಮತ್ತೊಂದು ಹೊಸ ನವೋನ್ವೇಷಣೆಯನ್ನು ಮತ್ತು ಹೊಸ ಗ್ರಾಹಕ ಅನುಭವವನ್ನು ಸಾದರಪಡಿಸಿದೆ. ಇನ್ ಸ್ಟಂಟ್ ನೂಡಲ್ಸ್ ಈಗ ಬೌಲ್ ಫಾರ್ಮ್ಯಾಟ್ ನಲ್ಲಿ ಗ್ರಾಹಕರಿಗೆ ಸಿಗಲಿದ್ದು, ಈ ಹೊಚ್ಚ ಹೊಸ ಫಾರ್ಮ್ಯಾಟ್ ದೇಶದ ಇ ನ್ ಸ್ಟಂಟ್ ನೂಡಲ್ಸ್ ಕೆಟಗರಿಯಲ್ಲಿ ಸ್ವಾಗತಾರ್ಹ ಬದಲಾವಣೆಯನ್ನು ತರಲಿದೆ. ಹಲವು ಪ್ರಯೋಗಗಳ ಮೂಲಕ ಅತ್ಯುತ್ತಮ ಇನ್ ಸ್ಟಂಟ್ ನೂಡಲ್ಸ್ ಅನುಭವವನ್ನು ಖಾತರಿಗೊಳಿಸಿಯೇ ಸನ್ಫೀಂಸ್ಟ್ ಯಿಪ್ಪೀ! ಕ್ವಿಕ್ ಮೀಲ್ಝ್ ಅನ್ನು ಬೌಲ್ ಫಾರ್ಮ್ಯಾಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಿಶಾಲವಾದ ಕಂಟೇನರ್ ಬೇಸ್ ಹೊಂದಿರುವ ಅಂದರೆ ಬಹಳ ಸುಲಭವಾಗಿ ಮಿಕ್ಸ್ ಮಾಡಿ ಸವಿಸುವ ರೀತಿ ಹಾಗೂ ನೂಡಲ್ಸ್ ತಿನ್ನಬಹುದಾದ ರೀತಿಯಲ್ಲಿ ಈ ಬೌಲ್ ಇದೆ. ಅಲ್ಲದೆ, ಬಿಸಿ ಆರದಂತೆ ತಡೆಯಲು ಅದಕ್ಕೊಂದು ಮುಚ್ಚಳವನ್ನೂ ಒದಗಿಸಲಾಗಿದ್ದು, ನೂಡಲ್ಸ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇದು ಸುಗಮಗೊಳಿಸಿದೆ. ಈ ಅತ್ಯುತ್ತಮ ಫಾರ್ಮ್ಯಾಟ್ನ ಲ್ಲಿ ರುಚಿಕರವಾದ ಫ್ಲೇವರ್ ಗಳು ಇದ್ದು, ಚೆನ್ನಾಗಿ ಮಿಶ್ರಣಮಾಡಿದಾಗ ಹೊರಹೊಮ್ಮುತ್ತದೆ. ಅಷ್ಟೇ ಅಲ್ಲ, ಬೌಲ್ನಾಲ್ಲಿ ಟೇಸ್ಟಿ ನೂಡಲ್ಸ್ ತಿನ್ನುವುದು ಒಂದು ಅತ್ಯುತ್ತಮ ಅನುಭವ ಕೂಡ ಹೌದು ಎಂದು ಪ್ರಕಟಣೆ ತಿಳಿಸಿದೆ.ಯುಎನ್ಐ ಎಎಚ್ 1235