Thursday, Aug 22 2019 | Time 14:21 Hrs(IST)
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
 • ಬಾರ್ಸಿಲೋನಾದಿಂದ ನೇಯ್ಮಾರ್‌ಗೆ ಎರೆಡನೇ ಬಾರಿ ಅವಕಾಶ ಬಂದಿರಲಿಲ್ಲ: ವರದಿಗಳು
 • ಚೆಕ್ ಬೌನ್ಸ್ ಪ್ರಕರಣ : ಯುಎಇ ನಲ್ಲಿ ತುಷಾರ್ ವೆಲ್ಲಪ್ಪಲ್ಲಿ ಸೆರೆ
 • ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ
 • ನ್ಯಾಯಾಲಯಗಳ ಆವರಣಗಳನ್ನೂ ಕಾಡುತ್ತಿರುವ ಸ್ವಚ್ಚಭಾರತ ಯೋಜನೆ !!
 • ಚಿದು ಬಂಧನಕ್ಕೆ ಇಂದ್ರಾಣಿ ಹೇಳಿಕೆಯೇ ಪ್ರಮುಖ ಸಾಕ್ಷಿ, ಆಧಾರ !!
Sports Share

ಐಡಬ್ಲ್ಯುಎಲ್: ಸೆಮಿಫೈನಲ್‌ ಪ್ರವೇಶಿಸಿದ ಗೋಕುಲಂ ಕೇರಳ ಎಫ್‌ಸಿ

ಲುಧಿಯಾನಾ, ಮೇ 15 (ಯುಎನ್‌ಐ) ಇಲ್ಲಿನ ಗುರು ನಾನಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಇಂಡಿಯನ್ಸ್‌ ವುಮೆನ್ಸ್‌ ಲೀಗ್‌ನ 'ಐ' ಗುಂಪಿನ ಕೊನೆಯ ಪಂದ್ಯದಲ್ಲಿ ಗೋಕುಲಂ ಕೇರಳ ಎಫ್‌ಸಿ ತಂಡವು ಡೆಲ್ಲಿಯ ಹ್ಯಾನ್ಸ್‌ ಫುಟ್ಬಾಲ್‌ ಕ್ಲಬ್‌ ತಂಡದ ವಿರುದ್ಧ 3-1 ಅಂತರದಲ್ಲಿ ದಾಖಲೆಯ ಜಯ ಸಾಧಿಸಿದೆ.
ಅಂಜು ತಮಂಗಾ (10ನೇ ನಿ.), ರಂಜನಾ ಚಾನು (35ನೇ ನಿ.) ಹಾಗೂ ನಾಯಕಿ ದಲಿಮಾ ಚಿಬ್ಬರ್‌ (68ನೇ ನಿ.) ಅವರು ಗೋಕುಲಂ ಪರ ಮೂರು ಗೋಲು ಸಿಡಿಸಿ ಗೆಲುವು ತಂದು ಕೊಟ್ಟರು. ಹ್ಯಾನ್ಸ್‌ ಪರ ಅನುಷ್ಕಾ ಸ್ಯಾಮ್ಯೂಲ್‌ (23ನೇ ನಿ.) ಏಕೈಕ ಗೋಲು ಗಳಿಸಿದ್ದು ಬಿಟ್ಟರೆ ಉಳಿದವರು ಗೋಲು ಗಳಿಸುವಲ್ಲಿ ವಿಫಲರಾದರು.
ಗೋಕುಲಂ ಈಗಾಗಲೇ ಐಡಬ್ಲ್ಯುಎಲ್‌ ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದ ಆರಂಭದ 10ನೇ ನಿಮಿಷದಲ್ಲೇ ಅಂಜು ತಮಾಂಗ್‌ ಅವರು ಗೋಕುಲಂಗೆ ಗೋಲಿನ ಖಾತೆ ತೆರೆದರು. ಇದಾದ ಇನ್ನೂ 13 ನಿಮಿಷಗಳ ಅಂತರದಲ್ಲಿ ಹ್ಯಾನ್ಸ್‌ ತಂಡದ ಅನುಷ್ಕಾ ಸ್ಯಾಮ್ಯೂಲ್‌ ಗೋಲು ಪಟ್ಟಿಗೆ ಚೆಂಡನ್ನು ಕಳುಹಿಸುವ ಸಮಬಲ ಸಾಧಿಸಲು ನೆರವಾದರು.
ಮೊದಲಾರ್ಧದಲ್ಲಿ ಕೇರಳ ತಂಡದ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ತೋರಿದರು. 35ನೇ ನಿಮಿಷದಲ್ಲಿ ರಂಜನಾ ಚಾನು ಗಳಿಸಿದ ಗೋಲಿನ ಸಹಾಯದಿಂದ ಗೋಕುಲಂ ಮತ್ತೇ 2-1 ಮುನ್ನಡೆ ಪಡೆಯಿತು. ಮೊದಲಾರ್ಧದ ಮುಕ್ತಾಯಕ್ಕೆ ಕೇರಳ ಮುನ್ನಡೆಯೊಂದಿಗೆ ವಿಶ್ರಾಂತಿಗೆ ತೆರಳಿತು.
ಎರಡನೇ ಅವಧಿಯಲ್ಲಿ ಗೋಕುಲಂ ತಂಡ ಅದೇ ಲಯ ಮುಂದುವರಿಸಿತು. ನಾಯಕಿ ದಲಿಮಾ ಚಿಬ್ಬರ್‌ ಅವರು ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸುವಲ್ಲಿ ಸಫಲರಾದರು. ಅದರಂತೆ ಅವರು 68ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮುನ್ನಡೆಯ ಅಂತರವನ್ನು ಇನ್ನಷ್ಟು ಏರಿಸಿದರು.
ಇದರಿಂದ ತೀವ್ರ ಕೆರಳಿದ ಹ್ಯಾನ್ಸ್‌ ಫುಟ್ಬಾಲ್‌ ಕ್ಲಬ್‌ ಆಕ್ರಮಣಾಕಾರಿ ಆಟಕ್ಕೆ ಮೊರೆ ಹೋಯಿತು. ಗೋಲು ಗಳಿಸಲು ಸಾಕಷ್ಟು ಪ್ರಯುತ್ನ ನಡೆಸಿತಾದರೂ ಗೋಕುಲಂ ಕೇರಳ ತಂಡದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ ಪಂದ್ಯದ ನಿಗದಿತ ಅವಧಿ ಮುಕ್ತಾಯಕ್ಕೆ ಕೇರಳ ತಂಡ 3-1 ಅಂತರದಲ್ಲಿ ಗೆಲುವಿನ ನಗೆ ಬೀರಿತು.
ಗೋಕುಲಂ ಗುಂಪು ಹಂತದ ಪಂದ್ಯಗಳನ್ನು ಮುಗಿಸಿದ್ದು, ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಕೇರಳ ಎಫ್‌ಸಿ ಐದರಲ್ಲಿ ಗೆಲುವು ಸಾಧಿಸಿ, ಕೇವಲ ಒಂದರಲ್ಲಿ ಸೋಲು ಅನುಭವಿಸಿದೆ. ಕೇರಳ ಒಟ್ಟು 16 ಗೋಲುಗಳನ್ನು ಗಳಿಸಿದೆ.
ಮತ್ತೊಂದು ಪಂದ್ಯದಲ್ಲಿ ಎಸ್‌ಎಸ್‌ಬಿ ಮಹಿಳಾ ಫುಟ್ಬಾಲ್‌ ಕ್ಲಬ್‌ ತಂಡ, ಪಂಜಿಮ್‌ ಫುಟ್ಬಾಲರ್ಸ್‌ ತಂಡವನ್ನು 6-2 ಅಂತರದಲ್ಲಿ ಸೋಲಿಸಿ ಸೆಮಿಫೈನಲ್‌ ಪ್ರವೇಶ ಮಾಡಿತು.
ಸಂಗೀತ (12 ಮತ್ತು 57ನೇ ನಿ.) ಸುಮಿಲಾ ಚಾನು (55 ಮತ್ತು 60ನೇ ನಿ.) ಹಾಗೂ ರಂಜಿತಾ ದೇವಿ (67 ಹಾಗೂ 81ನೇ ನಿ.) ಅವರು ಗಳಿಸಿದ ಗೋಲುಗಳ ನೆರವಿನಿಂದ ಎಸ್ಎಸ್‌ಬಿ ತಂಡ ಗೆದ್ದು ಬೀಗಿತು. ಎದುರಾಳಿ ಪಂಜಿಮ್‌ ತಂಡದಲ್ಲಿ ಕರಿಷ್ಮಾ ಶಿರ್ವೊಕರ್‌ (4 ಮತ್ತು 89ನೇ ನಿ.) ಅವರು ಎರಡು ಗೋಲು ಗಳಿಸಿದರು.
ಯುಎನ್ಐ ಆರ್‌ಕೆ ಜಿಎಸ್‌ಆರ್‌ 2220