Tuesday, Jun 25 2019 | Time 13:22 Hrs(IST)
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
Sports Share

ಐಸ್ ಹಾಕಿ: ಕೆನಡಾ ಫೈನಲ್ ಗೆ

ಬ್ರಾಟಿಸ್ಲಾವಾ, ಮೇ 26, (ಯುಎನ್‍ಐ)- ಇಲ್ಲಿ ನಡೆದಿರುವ ಐಸ್ ಹಾಕಿ ಕ್ರಿಕೆಟ್ ಟೂರ್ನಿಯಲ್ಲಿ ಕೆನಡಾ 5-1 ರಿಂದ ಜೆಕ್ ಗಣರಾಜ್ಯವನ್ನು ಸೆಮಿಫೈನಲ್ಸ್ ಪಂದ್ಯದಲ್ಲಿ ಸೋಲಿಸಿ, ಫೈನಲ್ ಗೆ ಅರ್ಹತೆ ಪಡೆದಿದೆ.
ಉಪಾಂತ್ಯ ಪಂದ್ಯದ ಆರಂಭದಿಂದಲೂ ಕೆನಡಾ ತಂಡ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ಮೊದಲಾವಧಿಯಲ್ಲಿ ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಳಸಿಕೊಂಡ ಕೆನಡಾ ಆಟಗಾರರು ಅಬ್ಬರಿಸಿದರು. ಅಲ್ಲದೆ ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಸಫಲರಾದರು.
ಇನ್ನು ಎರಡನೇ ಅವಧಿಯಲ್ಲೂ ಕೆನಡಾ ಆಟಗಾರರು ಅಮೋಘ ಪ್ರದರ್ಶನ ಮುಂದುವರೆಸಿದರು. ಈ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸ್ಟಾರ್ ಆಟಗಾರರು ಮತ್ತೆರಡು ಗೋಲು ಸಿಡಿಸಿ, ಅಂತರವನ್ನು ಹಿಗ್ಗಿಸಿದರು.
ಮೂರನೇ ಅವಧಿಯಲ್ಲಿ ಕೆನಡಾ ಮತ್ತೆರಡು ಗೋಲು ದಾಖಲಿಸಿ ಮಿಂಚಿತು. ಈ ಅವಧಿಯಲ್ಲಿ ಜೆಕ್ ಗಣರಾಜ್ಯ ಒಂದು ಗೋಲು ದಾಖಲಿಸಿ, ಸೋಲಿನ ಅಂತರವನ್ನು ಕಡಿಮೆ ಮಾಡಿತು.
ಯುಎನ್‍ಐ ವಿಎನ್‍ಎಲ್ ಡಿವಿ 1753