Wednesday, Feb 26 2020 | Time 12:32 Hrs(IST)
 • ದೆಹಲಿ ಹಿಂಸಾಚಾರ; ಮೃತರ ಸಂಖ್ಯೆ 20ಕ್ಕೇರಿಕೆ, ಸೇನೆ ನಿಯೋಜನೆಗೆ ಕೇಜ್ರೀವಾಲ್ ಮನವಿ
 • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
business economy Share

ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ಗೆ ಅಗ್ಗದ ಪರ್ಯಾಯ ಅನ್ವೇಷಣೆ ಅಗತ್ಯ- ಪಾಸ್ವಾನ್

ನವದೆಹಲಿ, ಸೆ 9 (ಯುಎನ್‍ಐ) ಕುಡಿಯುವ ನೀರು ಮತ್ತು ಆಹಾರ ಪದಾರ್ಥಗಳ ಪ್ಯಾಕಿಂಗ್‍ಗೆ 'ಏಕ-ಬಳಕೆಯ ಪ್ಲಾಸ್ಟಿಕ್' (ಒಂದು ಬಾರಿ ಬಳಸಿ ಬಿಸಾಡುವ) ಅಗ್ಗದ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ಅನ್ವೇಷಿಸುವ ಅಗತ್ಯವಿದೆ ಎಂದು ಕೇಂದ್ರ ಆಹಾರ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೋಮವಾರ ಹೇಳಿದ್ದಾರೆ.
ಪ್ಲಾಸ್ಟಿಕ್ ಉದ್ಯಮದ ಪ್ರತಿನಿಧಿಗಳು ಮತ್ತು ಇತರ ಪಾಲುದಾರರೊಂದಿಗಿನ ಸಭೆಯ ನಂತರ, ಪಾಸ್ವಾನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಅಗ್ಗದ ಪರ್ಯಾಯವನ್ನು ಕಂಡುಹಿಡಿಯಲು ಕೈಗಾರಿಕೋದ್ಯಮಿಗಳನ್ನು ಕೇಳಲಾಗಿದೆ. ಈ ಆಯ್ಕೆಯು ಅಗ್ಗವಾಗಿರಬೇಕು. ಇದರಿಂದ ಗ್ರಾಹಕರಿಗೆ ಹೊರೆ ಕಡಿಮೆಯಾಗುತ್ತದೆ.. ಇದು ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿರಬೇಕು. ಈ ಮೂಲಕ ಗ್ರಾಹಕರು ವಸ್ತುವಿನ ಮೇಲಿನ ನಂಬಿಕೆ ಉಳಿಸಿಕೊಳ್ಳುತ್ತಾರೆ ಎಂದರು.
ಏಕ ಬಳಕೆಯ ಪ್ಲಾಸ್ಟಿಕ್‌ಗೆ ಅನೇಕ ಪರ್ಯಾಯಗಳನ್ನು ಪರಿಗಣಿಸಲಾಗಿದೆ ಮತ್ತು ಉದ್ಯಮದ ಅಭಿಪ್ರಾಯವೂ ತಿಳಿದಿದೆ ಎಂದು ಸಚಿವರು ಹೇಳಿದರು.
ದ್ರವ ಇರುವ ಪದಾರ್ಥಗಳಿಗೆ ಕಾಗದದ ಬಳಕೆ ಸೂಕ್ತ ಆಯ್ಕೆಯಾಗಲಾರದು. ಶುದ್ಧ ರೂಪದಲ್ಲಿ ದ್ರವಗಳ ಪ್ಯಾಕೇಜಿಂಗ್‌ಗೆ ಇದನ್ನು ಬಳಸಲಾಗುವುದಿಲ್ಲ. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧದ ನಿರ್ಧಾರವನ್ನು ಎಲ್ಲರೊಂದಿಗೆ ಸಮಾಲೋಚಿಸಿದ ನಂತರ ತೆಗೆದುಕೊಳ್ಳಲಾಗುವುದು. ಗ್ರಾಹಕರ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವರು ಹೇಳಿದರು. ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ಒಂದೇ ಬಾರಿ ನಿಷೇಧಿಸುವುದು ಸಾಧ್ಯವಿಲ್ಲ. ಇದನ್ನು ಕ್ರಮೇಣವಾಗಿ ತಡೆಯಬೇಕಾಗಿದೆ ಎಂದು ಪಾಸ್ವಾನ್‍ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್ ಕೆವಿಆರ್ 1658
More News

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..
ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

23 Feb 2020 | 8:29 PM

ನವದೆಹಲಿ, ಫೆ 23 (ಯುಎನ್ಐ) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್‌ ದರ ಭಾನುವಾರ ಕೊಂಚ ಏರಿಕೆಯಾಗಿದೆ.

 Sharesee more..