Monday, Sep 23 2019 | Time 02:48 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
National Share

ಓಣಂ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಬ್ಯಾನರ್ಜಿ

ನವದೆಹಲಿ, ಸೆ 11 (ಯುಎನ್ಐ) ಓಣಂ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶುಭಕೋರಿದ್ದಾರೆ.
ಓಣಂನ ಶುಭ ಸಂದರ್ಭದಲ್ಲಿ ದೇಶದ ಜನರಿಗೆ ಶುಭಾಶಯಗಳು. ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಮೋದಿ ತಮ್ಮ ಶುಭ ಹಾರೈಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಮಲಯಾಳಂ ಸಮುದಾಯದವರಿಗೆ ಓಣಂ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, "ನನ್ನ ಮಲಯಾಳಿ ಸಹೋದರ ಸಹೋದರಿಯರಿಗೆ ಒಣಂ ಶುಭಾಶಯ ಕೋರುತ್ತೇನೆ" ಎಂದು ಹೇಳಿದರು.
"ಕೇರಳದ ವಿನಾಶಕಾರಿ ಪ್ರವಾಹದಿಂದ ಉಂಟಾದ ನೋವನ್ನು ಜಯಿಸುತ್ತೀರಿ ಮತ್ತು ಮುಂದಿನ ವರ್ಷ ಸಾಕಷ್ಟು ಸುಗ್ಗಿಯ ತಯಾರಿಗಾಗಿ ಸಿದ್ಧರಾಗುತ್ತೀರಿ" ಎಂದು ಅವರು ಹೇಳಿದರು.
ಕೇರಳ ರಾಜ್ಯದಲ್ಲಿ ವಾರ್ಷಿಕ ಸುಗ್ಗಿಯ ಹಬ್ಬವಾದ ಓಣಂ ಅನ್ನು ಕೇರಳದಲ್ಲಿ ಮಾತ್ರವಲ್ಲ, ಎಲ್ಲೆಡೆ ಮಲಯಾಳಿಯ ಸಮುದಾಯವು ಉತ್ಸಾಹದಿಂದ ಆಚರಿಸುತ್ತಾರೆ.
ಓಣಂ ಹಬ್ಬವು ಕೇರಳದ ಪ್ರಮುಖ ಹಬ್ಬವಾಗಿದ್ದು, ಇದನ್ನು ಇಲ್ಲಿನ ಜನತೆ ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಸದಲ್ಲಿ ಬರುವ ಈ ಹಬ್ಬವು ಮಲಯಾಳಂ ಮಾಸದ ಚಿಂಗಮ್ ಮಾಸದಂದೇ ಬರುತ್ತದೆ. ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ಜನರು ಈ ಹಬ್ಬವನ್ನು ಪ್ರತ್ಯೇಕವಾಗಿ ತಮ್ಮದೇ ಶೈಲಿಯಲ್ಲಿ ಆಚರಿಸುತ್ತಾರೆ.
ಈ ಬಾರಿ ಸೆಪ್ಟೆಂಬರ್ 1ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.
ಸಂಕ್ರಾಂತಿ ಪದದಿಂದ ಓಣಂ ಪದವನ್ನು ಬೇರ್ಪಡಿಸಲಾಗಿದೆ. ಸಂಕ್ರಾಂತಿ ಎಂದರೆ 27 ನಕ್ಷತ್ರಗಳ ಒಗ್ಗೂಡುವಿಕೆ ಎಂಬ ಅರ್ಥವೂ ಇದೆ. ತಿರು ಎಂಬುದು ಭಗವಾನ್ ವಿಷ್ಣುವಿಗೆ ಸಂಬಂಧಪಟ್ಟದ್ದಾಗಿದೆ. ತಿರುಓಣಂ ಎಂಬುದು ವಿಷ್ಣುವಿನ ನಕ್ಷತ್ರವಾಗಿದೆ. ಈ ದಿನದಂದೇ ಮಹಾಬಲಿ ರಾಜನ ತಲೆಯ ಮೇಲೆ ವಾಮನ ಅವತಾರದಲ್ಲಿದ್ದ ಕೃಷ್ಣನು ಕಾಲಿಟ್ಟಿದ್ದನು ಎಂಬ ಐತಿಹ್ಯವಿದೆ.
ಯುಎನ್ಐ ಎಎಚ್ 1021