Wednesday, Dec 11 2019 | Time 02:28 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
Sports Share

ಕರ್ನಾಟಕವನ್ನು ಟಿ-20 ಚಾಂಪಿಯನ್ ಮಾಡಿ ದಾಂಪತ್ಯ ಜೀವನಕ್ಕೆೆ ಕಾಲಿಟ್ಟ ಮನೀಷ್ ಪಾಂಡೆ

ಮುಂಬೈ, ಡಿ 2 (ಯುಎನ್‌ಐ) ಭಾನುವಾರ ರಾತ್ರಿ ಸೈಯದ್ ಮುಷ್ತಾಕ್ ಅಲಿ ಟ್ರೋೋಫಿ ಗೆದ್ದ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ನಾಯಕ ಮನೀಷ್ ಪಾಂಡೆ ಸೋಮವಾರ ತಮಿಳುನಾಡು ನಟಿ ಅರ್ಷಿತಾ ಶೆಟ್ಟಿ ಅವರನ್ನು ವರಿಸಿದರು.
ತಮಿಳುನಾಡು ವಿರುದ್ಧ ಫೈನಲ್ ಹಣಾಹಣಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ್ದ ಮನೀಷ್ ಪಾಂಡೆ, 45 ಎಸೆತಗಳಲ್ಲಿ 60 ರನ್ ಚಚ್ಚಿದ್ದರು. ಇವರ ಅರ್ಧ ಶತಕದ ಬಲದಿಂದ ಕರ್ನಾಟಕ ನಿಗದಿತ 20 ಓವರ್‌ಗಳಿಗೆ 180 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ತಮಿಳುನಾಡು ತಂಡ ಕೇವಲ ಒಂದು ರನ್‌ನಿಂದ ಸೋಲು ಒಪ್ಪಿಕೊಂಡಿತ್ತು.
ಭಾನುವಾರ ಪಂದ್ಯದ ಬಳಿಕ ಸೋಮವಾರ ಮದುವೆಯಾಗುವುದಾಗಿ ಹೇಳಿದ್ದರು. ಸೂರತ್‌ನಲ್ಲಿ ಪಂದ್ಯ ಮುಗಿಸಿಕೊಂಡ ಮನೀಷ್ ಪಾಂಡೆ ಮುಂಬೈಗೆ ತೆರಳಿ ತಮ್ಮ ಗೆಳತಿ ಅರ್ಷಿತಾ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆೆ ಕಾಲಿಟ್ಟರು.
26ರ ಪ್ರಾಾಯದ ದಕ್ಷಿಣ ಭಾರತದ ನಟಿ ಅರ್ಷಿತಾ ಶೆಟ್ಟಿ ಅವರು 2012ರಲ್ಲಿ ‘ತೆಲಿಕಾಡ ಬೊಳ್ಳಿ’ ತುಳು ಸಿನಿಮಾ ನಟಿಸುವ ಮೂಲಕ ಬಣ್ಣದ ಲೋಕಕ್ಕೆೆ ಪದಾರ್ಪಣೆ ಮಾಡಿದ್ದರು. ನಂತರ, ಅವರು ಉದಯಂ ಎನ್‌ಎಚ್7 ಹಾಗೂ ಇಂದ್ರಜಿತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅರ್ಷಿತಾ ಹಾಗೂ ಮನೀಷ್ ಪಾಂಡೆ ಅವರು ದಕ್ಷಿಣ ಭಾರತೀಯ ಶೈಲಿಯಲ್ಲಿ ವಿವಾಹವಾದರು.
ಮನೀಷ್ ಪಾಂಡೆ ಜೋಡಿಗೆ ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕರ್ನಾಟಕ ರಣಜಿ ತಂಡ ಕೂಡ ಶುಭಹಾರೈಸಿದೆ.
ಮನೀಷ್ ಪಾಂಡೆ ಭಾರತದ ಪರ 23 ಏಕದಿನ ಹಾಗೂ 32 ಟಿ-20 ಪಂದ್ಯಗಳಾಡಿದ್ದಾಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ವಿವಾಹದ ಬಳಿಕ ಮನೀಷ್ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ-20 ಸರಣಿ ಆಡಲು ಭಾರತ ತಂಡ ಕೂಡಿಕೊಳ್ಳಲಿದ್ದಾರೆ.
ಯುಎನ್‌ಐ ಆರ್ ಕೆ 1845
More News

ಏಕದಿನ ಸರಣಿ: ಧವನ್ ಸ್ಥಾನಕ್ಕೆೆ ಅಗರ್ವಾಲ್

10 Dec 2019 | 10:20 PM

 Sharesee more..
ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

10 Dec 2019 | 9:46 PM

ಸ್ಥಳ: ವಾಂಖೆಡೆ ಕ್ರೀಡಾಂಗಣ: ಮುಂಬೈ, ಡಿ 10 (ಯುಎನ್‌ಐ) ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ನಾಳೆ ನಡೆಯುವ ಮೂರನೇ ಅಥವಾ ನಿರ್ಣಾಯಕ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿವೆ.

 Sharesee more..