Sunday, Apr 5 2020 | Time 14:36 Hrs(IST)
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
 • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಗಣ್ಯರಿಂದ ಗೌರವ ಸಲ್ಲಿಕೆ
Parliament Share

ಕರೋನಾ ವಿರುದ್ದ ಸಮರ, ರಾಷ್ಟ್ರದ ಜೊತೆ ಸಂಸತ್ ಕೈ ಜೋಡಿಸಲಿದೆ: ಒಂ ಬಿರ್ಲಾ

ನವದೆಹಲಿ, ಮಾ 20(ಯುಎನ್ಐ) ಕರೋನಾ ಸೋಂಕಿನ ಹಾವಳಿಯಿಂದ ಪಾರಾಗಲು, ಇದನ್ನು ಮೆಟ್ಟಿನಿಲ್ಲಲು ಜಾಗೃತಿ, ಸ್ವಚ್ಚತೆ ಮತ್ತು ಮುನ್ನೆಚ್ಚರಿಕೆ ಬಹಳ ಅಗತ್ಯ ಎಂದು ಲೋಕಸಭಾ ಸ್ಪೀಕರ್ ಒಂ ಬಿರ್ಲಾ ಒತ್ತಿ ಹೇಳಿದ್ದಾರೆ.

ಕರೋನ ವಿರುದ್ದದ ಸಮರಕ್ಕೆ ದೇಶದ ಜನತೆಯ ಜೊತೆ ಸಂಸತ್ ಕೈಜೋಡಿಸಲಿದೆ ಅನಗತ್ಯ ಭಯ,ಆತಂಕ ಬೇಡ ಎಂದು ಭರವಸೆ ನೀಡಿದರು.
ಎಲ್ಲರ ಸಾಮೂಹಿಕ, ಸಂಘಟಿತ ಪ್ರಯತ್ನದಿಂದ ರಾಷ್ಟ್ರವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲಿದೆ ಎಂದು ಪಾರ್ಲಿಮೆಂಟ್ ಹೌಸ್ ಎಸ್ಟೇಟ್ನಲ್ಲಿ ಮಾಡಿದ ಸಿದ್ಧತೆಗಳ ಪರಿಶೀಲನೆ ನಂತರ ಅವರು ಈ ವಿಷಯ ತಿಳಿಸಿದರು.
"ಪಾರ್ಲಿಮೆಂಟ್ ಅವರಣದಲ್ಲಿ ಕರೋನ ಸೋಂಕು ಹರಡದಂತೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.ಮಾಧ್ಯಮದ ಸದಸ್ಯರು ಮತ್ತು ಪಾರ್ಲಿಮೆಂಟ್ ಹೌಸ್ ಎಸ್ಟೇಟ್ಗೆ ಭೇಟಿ ನೀಡುವವರು ಸೇರಿದಂತೆ ಎಲ್ಲಾ ಅಧಿಕಾರಿಗಳು ಮತ್ತು ಅಧಿಕಾರಿಗಳಲ್ಲದವರು ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಸೋಂಕು ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವ ಅಭ್ಯಾಸ ಬೆಳೆಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಕರೋನ ಸೋಂಕು ತಡೆಯಲು ಎನ್‌ಡಿಎಂಸಿ ಮತ್ತು ಅದಕ್ಕೆ ಸಂಬಂಧಿಸಿದ ಏಜೆನ್ಸಿಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು, ಸಂಸತ್ ಆವರಣ, ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ .
ಸ್ವಚ್ಚತೆಗೆ ಮತ್ತು ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಲ್ಲಾ ಉಪಕರಣಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.
ಇದಕ್ಕೂ ಮೊದಲು ಲೋಕಸಭೆಯಲ್ಲಿ ಮಾತನಾಡಿ ಅವರು ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಸಂಸತ್ತು ರಾಷ್ಟ್ರದ ಜೊತೆ ದೃಡವಾಗಿ ನಿಲ್ಲಲಿದೆ ಎಂದೂ ಒತ್ತಿ ಹೇಳಿದರು.
ಅವರು ನಿನ್ನೆ ರಾಷ್ಟ್ರದ ಜನತೆ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ಕೆಲವು ಪ್ರಸ್ತಾವನೆಯನ್ನು ಪುನರುಚ್ಚರಿಸಿ, ಬಿಕ್ಕಟ್ಟಿನ ಈ ಕ್ಷಣದಲ್ಲಿ ರಾಷ್ಟ್ರವು ಒಗ್ಗಟ್ಟಾಗಿದೆ ಭಯ ಅಥವಾ ಆತಂಕಕ್ಕೆ ಒಳಗಾಗಬೇಕಿಲ್ಲ ಎಲ್ಲಾ ಸಮಯದಲ್ಲೂ ಜಾಗರೂಕರಾಗಿ, ಸ್ವಚ್ಚತೆ ಕಾಪಾಡಿಕೊಂಡು ಕರೋನ ವಿರುದ್ದದ ಸಮರಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು .
ಯುಎನ್ಐ ಕೆಎಸ್ಆರ್ 2105
There is no row at position 0.