Tuesday, Aug 11 2020 | Time 17:49 Hrs(IST)
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
 • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
 • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
 • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
 • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
 • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
 • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
 • ಕನ್ನಡ ಭಾಷಾ ಕೌಶಲ್ಯ ಆನ್‌ ಲೈನ್ ಪರೀಕ್ಷೆ ತಂತ್ರಾಂಶಕ್ಕೆ ರಾಜ್ಯೋತ್ಸವ ವೇಳೆ ಚಾಲನೆ: ಟಿ ಎಸ್ ನಾಗಾಭರಣ
 • ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಯಶಸ್ವಿ; ಮುಖ್ಯಮಂತ್ರಿ ಕೃತಜ್ಞತೆ
 • ಕೋವಿಡ್ ಸೋಂಕಿತ ಅಧಿಕಾರಿ, ಸಿಬ್ಬಂದಿಗೆ ಧೈರ್ಯ ತುಂಬಿದ ಡಾ ಪಿ ಎಸ್ ಹರ್ಷ ಮಾತುಕತೆ
 • ಕೋವಿಡ್‌ ನಡುವಲ್ಲೂ ತ್ವರಿತ ಪ್ರಗತಿಯಲ್ಲಿ ಸಾಗಿದೆ ಕೇಂದ್ರದ ಮಹತ್ವಾಕಾಂಕ್ಷೆಯ 'ಜಲ ಜೀವನ' ಯೋಜನೆ
 • ಪ್ರಣಬ್ ಮುಖರ್ಜಿ ಆರೋಗ್ಯ ಪರಿಸ್ಥಿತಿ ಗಂಭೀರ
Health -Lifestyle Share

ಕರ್ಲಾನ್‌ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ: ಪ್ರೀಮಿಯಂ, ಲಕ್ಷುರಿ ವಿಭಾಗದಲ್ಲಿ ಮೊದಲ ಮ್ಯಾಟ್ರೆಸ್ ಇದು

ಕರ್ಲಾನ್‌ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ: ಪ್ರೀಮಿಯಂ, ಲಕ್ಷುರಿ ವಿಭಾಗದಲ್ಲಿ ಮೊದಲ ಮ್ಯಾಟ್ರೆಸ್ ಇದು
ಕರ್ಲಾನ್‌ನಿಂದ ಮೊದಲ ವಿವಾಹ ಮ್ಯಾಟ್ರೆಸ್ ಬಿಡುಗಡೆ: ಪ್ರೀಮಿಯಂ, ಲಕ್ಷುರಿ ವಿಭಾಗದಲ್ಲಿ ಮೊದಲ ಮ್ಯಾಟ್ರೆಸ್ ಇದು

ಬೆಂಗಳೂರು, ನ 7 [ಯುಎನ್ಐ] ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್ ಬ್ರ್ಯಾಂಡ್ ಕರ್ಲಾನ್ ಇದೇ ಮೊದಲ ಬಾರಿಗೆ ವಿವಾಹ ಮ್ಯಾಟ್ರೆಸ್ ಬಿಡುಗಡೆ ಮಾಡಿದ್ದು, ತನ್ನ ಜಾಲವನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡಿದೆ.

ಸ್ಪ್ರಿಂಗ್‌ಏರ್‌ನ ಸಹಯೋಗದಲ್ಲಿ ಕುರ್ಲಾನ್ ಈ ವರ್ಷದ ಆರಂಭದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕರ್ಲಾನ್‌ನ ಹೊಸ ವೆಡ್ಡಿಂಗ್ ಮ್ಯಾಟ್ರೆಸ್ ಬಿಡುಗಡೆಯೊಂದಿಗೆ ಕಂಪನಿಯು ಕಳೆದ ಎರಡು ವರ್ಷಗಳಲ್ಲಿ ತನ್ನ ೫ ಬಗೆಯ ಮ್ಯಾಟ್ರೆಸ್‌ಗಳನ್ನು ಬಿಡುಗಡೆ ಮಾಡಿದಂತಾಗಿದೆ.

ಮ್ಯಾಟ್ರೆಸ್ ಮತ್ತು ಹೋಂ ಫರ್ನಿಶಿಂಗ್ ವಿಭಾಗದಲ್ಲಿ ೨೦೦ ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿರುವ ಕುರ್ಲಾನ್ ಸದಾಕಾಲ ಹೊಸ ಹೊಸ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಹೊಸ ಪೀಳಿಗೆಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸುತ್ತಿದೆ.

ನೂತನ ಮ್ಯಾಟ್ರಿಕ್ಸ್ ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕುರ್ಲಾನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ಸುಧಾಕರ್ ಪೈ, “ಕರ್ಲಾನ್ ನಾವೀನ್ಯತೆಗೆ ಸದಾ ಉತ್ಸಾಹ ತೋರುವ ಕಂಪನಿಯಾಗಿದೆ. ವಿವಾಹ ಕಾಲಕ್ಕೆಂದೇ ಇದೇ ಮೊದಲ ಬಾರಿಗೆ ಮ್ಯಾಟ್ರೆಸ್ ಅನ್ನು ಬಿಡುಗಡೆ ಮಾಡಿದ್ದು, ಇದು ನಮ್ಮ ನಾವೀನ್ಯತೆಯ ಪರಿಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ. ಭಾರತೀಯ ವಿವಾಹಗಳು ತಮ್ಮದೇ ಆದ ಸಂಪ್ರದಾಯ, ಆಚರಣೆಗಳನ್ನು ಹೊಂದಿರುತ್ತವೆ. ನವ ವಿವಾಹಿತರಿಗೆ ಉಡುಗೊರೆ ನೀಡುವುದು ಸಹ ಸಂಪ್ರದಾಯವಾಗಿ ಬೆಳೆದಿದೆ. ಈ ಸಂಪ್ರದಾಯದಂತೆ ನೂತನ ವಧು-ವರರಿಗೆ ಏನನ್ನು ಗಿಫ್ಟ್ ಆಗಿ ಕೊಡಬೇಕೆಂಬ ಜಿಜ್ಞಾಸೆಯಲ್ಲಿ ಸಾಕಷ್ಟು ಜನರಿರುತ್ತಾರೆ. ಈ ಅಂತರವನ್ನು ಕಡಿಮೆ ಮಾಡಲೆಂದೇ ನಾವು ಮದುವೆ ಪರಿಕಲ್ಪನೆಯ ಮ್ಯಾಟ್ರೆಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದೇವೆ ಎಂದರು.

ನವದಂಪತಿಗಳಿಗೆ ಕುರ್ಲಾನ್ ಮ್ಯಾಟ್ರೆಸ್ ಒಂದು ಉತ್ತಮ ಉಡುಗೊರೆಯಾಗಲಿದೆ. ಈ ಮೂಲಕ ಗ್ರಾಹಕರು ಏನಾದರೂ ಒಂದು ವಿನೂತನವಾದ ಉಡುಗೊರೆ ಕೊಡಬೇಕೆಂಬ ಇಚ್ಛೆ ಹೊಂದಿರುತ್ತಾರೆ. ಇಂತಹ ಗ್ರಾಹಕರು ತಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲೆಂದೇ ಈ ಹೊಸ ಮ್ಯಾಟ್ರೆಸ್ ಮಾರುಕಟ್ಟೆಗೆ ಬಂದಿದೆ ಎಂದು ತಿಳಿಸಿದರು.

ಕರ್ಲಾನ್‌ನ ಮಾರುಕಟ್ಟೆ ಮುಖ್ಯಸ್ಥರಾದ ಪ್ರಶಾಂತ್‌ ದೇಶಪಾಂಡೆ ಮಾತನಾಡಿ, “ಮದುವೆಯ ಪರಿಕಲ್ಪನೆಯಲ್ಲಿ ಪರಿಚಯಿಸಲಾಗಿರುವ ಕುರ್ಲಾನ್ ಮ್ಯಾಟ್ರೆಸ್ ವಿಶೇಷ ಮ್ಯಾಟ್ರೆಸ್ ವಿಭಾಗದಲ್ಲಿ ಇದುವರೆಗಿನ ಅಂತರವನ್ನು ಭರ್ತಿ ಮಾಡುತ್ತದೆ. ಮ್ಯಾಟ್ರೆಸ್‌ಆಫ್‌ಇಂಡಿಯಾ ಎಂಬ ಹೆಸರನ್ನು ಗಳಿಸಿಕೊಂಡಿರುವ ಕರ್ಲಾನ್‌ನ ಬಲವನ್ನು ಈ ಹೊಸ ಮದುವೆ ಮ್ಯಾಟ್ರೆಸ್ ಹೆಚ್ಚಿಸುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಮ್ಯಾಟ್ರೆಸ್‌ಗಳನ್ನು ಬಿಡುಗಡೆ ಮಾಡಲುಕಾರಣವಾಗುತ್ತದೆ”ಎಂದರು.

ಈ ಹೊಸ ಮ್ಯಾಟ್ರೆಸ್‌ಗಳು ಕಿಂಗ್ ಮತ್ತುಕ್ವೀನ್‌ಗಾತ್ರದಲ್ಲಿದೊರೆಯುತ್ತವೆ. ಈ ಹಾಸಿಗೆಯ ಬೆಲೆ ೨೦,೦೦೦ ರೂಪಾಯಿಯಿಂದ ಆರಂಭವಾಗುತ್ತದೆ. ಈ ಮದುವೆ ವಿಶೇಷತೆಯ ಹಾಸಿಗೆಯು ಬೆಂಗಳೂರು, ಹೈದ್ರಾಬಾದ್, ಕೊಚ್ಚಿನ್, ಮಂಗಳೂರು ಮತ್ತು ಮೈಸೂರಿನಲ್ಲಿರುವ ಕುರ್ಲಾನ್‌ನ ಹೋಂ ಕಂಫರ್ಟ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಅಲ್ಲದೇ, ಆನ್‌ಲೈನ್‌ www.kurlon.com ನಲ್ಲಿಯೂ ಲಭ್ಯವಿದೆ ಎಂದರು.

೨೦೧೮-೧೯ ನೇ ಹಣಕಾಸು ಸಾಲಿನಲ್ಲಿ ೧,೦೫೦ ಕೋಟಿ ರೂಪಾಯಿ ಮಾರಾಟ ಆದಾಯ ಗಳಿಸಿದ್ದ ಕುರ್ಲಾನ್, ೨೦೧೯-೨೦ ನೇ ಸಾಲಿನಲ್ಲಿ ೧,೨೦೦ ಕೋಟಿರೂಪಾಯಿಗೂ ಅಧಿಕ ವಹಿವಾಟು ನಡೆಸುವ ಮೂಲಕ ದಾಖಲೆಯ ಶೇ.೨೫ ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷಕುರ್ಲಾನ್‌ ರೀಟೇಲ್ ವಿಸ್ತರಣೆ, ಹೊಸ ಉತ್ಪನ್ನಗಳ ಪರಿಚಯ, ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವಾರು ಉಪಕ್ರಮಗಳಿಗೆ ಆದ್ಯತೆ ನೀಡುತ್ತಿದೆ. ರೀಟೇಲ್ ವಿಸ್ತರಣೆಯಲ್ಲಿಕುರ್ಲಾನ್‌ದೇಶಾದ್ಯಂತ ಹಾಲಿ ಇರುವ ೧೦೦ ಸ್ಟೋರ್‌ಗಳಿಂದ ೨೦೨೦ ರಅಂತ್ಯದ ವೇಳೆಗೆ ೨೫೦ ಸ್ಟೋರ್‌ಗಳಿಗೆ ಹೆಚ್ಚಿಸುವ ಯೋಜನೆ ರೂಪಿಸಿದೆ ಎಂದರು.

ದೇಶದಲ್ಲಿ “ಯುಎಲ್‌ಗ್ರೀನ್‌ಗಾರ್ಡ್‌ಗೋಲ್ಡ್”ಪ್ರಮಾಣೀಕೃತವಾದ ಮೊದಲ ಮತ್ತು ಏಕೈಕ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಕರ್ಲಾನ್‌ ಪಾತ್ರವಾಗಿದೆ. ಕಡಿಮೆ ರಾಸಾಯನಿಕ ಹೊರಸೂಸುವುದು, ಗಾಳಿಯ ಗುಣಮಟ್ಟವನ್ನು ಸುಧಾರಣೆ ಮಾಡುವುದು ಸೇರಿದಂತೆ ಇನ್ನೂ ಹಲವಾರು ಪರಿಸರ ಸ್ನೇಹಿ ಕ್ರಮಗಳನ್ನು ತೆಗೆದುಕೊಂಡ ಬ್ರ್ಯಾಂಡ್‌ಗಳಿಗೆ ಈ ಗ್ರೀನ್‌ಗಾರ್ಡ್ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಇದು ಗ್ರಾಹಕರು ಅತ್ಯುತ್ತಮವಾದ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ಮಾಹಿತಿ ನೀಡಿದರು.

ಕುರ್ಲಾನ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಮತ್ತು ಅತಿದೊಡ್ಡ ಮ್ಯಾಟ್ರೆಸ್, ಹೋಂ ಫರ್ನಿಚರ‍್ಸ್ ಮತ್ತು ಫರ್ನಿಶಿಂಗ್ ಬ್ರ್ಯಾಂಡ್‌ ಆಗಿದೆ. ಭಾರತಾದ್ಯಂತ ೭೦೦೦ ಕ್ಕೂ ಅಧಿಕ ಮಲ್ಟಿಬ್ರ್ಯಾಂಡ್ ಔಟ್‌ಲೆಟ್‌ಗಳು, ೧೩೦೦ ಕ್ಕೂ ಅಧಿಕ ಫ್ರಾಂಚೈಸಿ ಔಟ್‌ಲೆಟ್‌ಗಳು ಮತ್ತು ೧೦೦ ಕ್ಕೂ ಹೆಚ್ಚು ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್‌ಗಳಲ್ಲಿ ಕುರ್ಲಾನ್ ಬ್ರ್ಯಾಂಡ್‌ನ ಉತ್ಪನ್ನಗಳು ಲಭ್ಯವಿವೆ. ಇದಲ್ಲದೇ, ಕುರ್ಲಾನ್‌ ದೇಶಾದ್ಯಂತ ೧೦,೦೦೦ ಕ್ಕೂ ಅಧಿಕ ಡೀಲರ್‌ಗಳನ್ನು ಒಳಗೊಂಡಿದ್ದು, ೭೨ ಶಾಖೆಗಳು ಮತ್ತು ಸ್ಟಾಕ್ ಪಾಯಿಂಟ್‌ಗಳನ್ನು ಹೊಂದಿದೆ. ಪ್ರಮುಖವಾಗಿ ಕರ್ನಾಟಕ, ಒರಿಸ್ಸಾ, ಮಧ್ಯಪ್ರದೇಶ, ಉತ್ತರಾಂಚಲ್ ಮತ್ತು ಗುಜರಾತ್ ರಾಜ್ಯಗಳಲ್ಲಿ ತನ್ನ ವ್ಯಾಪ್ತಿಯನ್ನು ಬಲವರ್ಧನೆ ಮಾಡಿಕೊಂಡಿದೆ. ತನ್ನಅತ್ಯುನ್ನತತಂತ್ರಜ್ಞಾನದ ಮೂಲಕ ಕುರ್ಲಾನ್ ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ಭಾರತೀಯ ಮ್ಯಾಟ್ರೆಸ್ ಮತ್ತು ಫರ್ನಿಚರ್‌ ಉದ್ಯಮದಲ್ಲಿ ಗುಣಮಟ್ಟವನ್ನು ಸುಧಾರಣೆ ಮಾಡುತ್ತಿದೆ.

ಯುಎನ್ಐ ವಿಎನ್ 1548