Saturday, Aug 15 2020 | Time 10:17 Hrs(IST)
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
business economy Share

ಕಳೆದ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಜಿಎಸ್‌ಟಿ ಆದಾಯ ಸಂಗ್ರಹ

ಕಳೆದ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಜಿಎಸ್‌ಟಿ ಆದಾಯ ಸಂಗ್ರಹ
ಕಳೆದ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಜಿಎಸ್‌ಟಿ ಆದಾಯ ಸಂಗ್ರಹ

ನವದೆಹಲಿ, ಡಿ 1 (ಯುಎನ್‌ಐ) 2019 ರ ನವೆಂಬರ್‌ನಲ್ಲಿ ಒಟ್ಟು 1,03,492 ಕೋಟಿ ರೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವಾಗಿದ್ದು, ಇದರಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) 19,592 ಕೋಟಿ ರೂ, ರಾಜ್ಯ ಸರಕು ಮತ್ತು ಸೇವಾ ತೆರಿಗೆ ( ಎಸ್‌ಜಿಎಸ್‌ಟಿ) 27,144 ಕೋಟಿ ರೂ, ಮತ್ತು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) 49,028 ಕೋಟಿ ರೂ ಸೇರಿದೆ.

ಐಜಿಎಸ್‌ಟಿಯಡಿ ಆಮದು ಮೇಲೆ ಸಂಗ್ರಹಿಸಿದ 20,948 ಕೋಟಿ ರೂ ಪೈಕಿ, 7,727 ಕೋಟಿ ರೂ. ಹೆಚ್ಚುವರಿ ಕರ(ಆಮದಿನ ಮೇಲೆ ಸಂಗ್ರಹಿಸಿದ 869 ಕೋಟಿ ರೂ. ಸೇರಿದಂತೆ) ಸೇರಿದೆ.

2017 ರ ಜುಲೈನಲ್ಲಿ ಜಿಎಸ್‌ಟಿ ಜಾರಿಗೊಳಿಸದಾಗಿನಿಂದ ಇದು ಎಂಟನೇ ಬಾರಿಗೆ ಮಾಸಿಕ ಸಂಗ್ರಹ ಒಂದು ಲಕ್ಷ ಕೋಟಿ ರೂ. ದಾಟಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಅಲ್ಲದೆ, 2019 ರ ನವೆಂಬರ್ ತಿಂಗಳಲ್ಲಿನ ಸಂಗ್ರಹವು ಜಿಎಸ್‍ಟಿ ಜಾರಿಗೊಳಿಸಿದ ನಂತರದ ಮೂರನೇ ಅತಿ ಹೆಚ್ಚು ಮಾಸಿಕ ಸಂಗ್ರಹವೆನಿಸಿದೆ. ಕಳೆದ ಏಪ್ರಿಲ್ ಮತ್ತು ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಸಂಗ್ರಹವಾಗಿತ್ತು.

ಅಕ್ಟೋಬರ್ ತಿಂಗಳಿಗಾಗಿ ನ 30 ರವರೆಗೆ ಒಟ್ಟು 77.83 ಲಕ್ಷ ಜಿಎಸ್‌ಟಿಆರ್ 3 ಬಿ ರಿಟನ್ರ್ಸ್ (ತೆರಿಗೆ ವಿವರ ಸಲ್ಲಿಕೆ) ಸಲ್ಲಿಸಲಾಗಿದೆ.

ಸರ್ಕಾರ ನಿಯಮಿತ ಇತ್ಯರ್ಥವಾಗಿ 25,150 ಕೋಟಿ ರೂ.ಗಳನ್ನು ಸಿಜಿಎಸ್‌ಟಿಗೆ ಮತ್ತು 17,431 ಕೋಟಿ ರೂ ಗಳನ್ನು ಎಸ್‌ಜಿಎಸ್‌ಟಿಗೆ ಇತ್ಯರ್ಥ ಪಡಿಸಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಿಯಮಿತವಾಗಿ ಇತ್ಯರ್ಥಪಡಿಸಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿಜಿಎಸ್‌ಟಿಯಿಂದ 44,742 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಯಿಂದ 44,576 ಕೋಟಿ ರೂ. ಆದಾಯ ಗಳಿಸಿವೆ.

ಯುಎನ್‍ಐ ಎಸ್‍ಎಲ್‍ಎಸ್ 1502