Sunday, Apr 5 2020 | Time 15:40 Hrs(IST)
  • ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
  • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
  • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
  • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
  • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
  • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
  • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
  • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
  • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
  • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
  • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
  • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
  • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
  • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
  • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
Parliament Share

ಕಳೆದ 2 ವರ್ಷಗಳಲ್ಲಿ ನೇಕಾರರಿಗೆ 616 ಕೋಟಿ ರೂ.ಸಾಲ ಮಂಜೂರು: ಸ್ಮೃತಿ ಇರಾನಿ

ಕಳೆದ 2 ವರ್ಷಗಳಲ್ಲಿ ನೇಕಾರರಿಗೆ 616 ಕೋಟಿ ರೂ.ಸಾಲ ಮಂಜೂರು: ಸ್ಮೃತಿ ಇರಾನಿ
ಕಳೆದ 2 ವರ್ಷಗಳಲ್ಲಿ ನೇಕಾರರಿಗೆ 616 ಕೋಟಿ ರೂ.ಸಾಲ ಮಂಜೂರು: ಸ್ಮೃತಿ ಇರಾನಿ

ನವದೆಹಲಿ, ಮಾರ್ಚ್ 20(ಯುಎನ್‍ಐ)- ಮುದ್ರಾ ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ ನೇಕಾರರಿಗೆ 616 ಕೋಟಿ ರೂ.ಗಳ ಸಾಲವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಕೇಂದ್ರ ಜವಳಿ ಸಚಿವ ಸ್ಮೃತಿ ಇರಾನಿ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ಸರ್ಕಾರಗಳು ಸಾಮಾನ್ಯವಾಗಿ ಕೇಂದ್ರಗಳ ಮುಂದೆ ಬೇಡಿಕೆಗಳನ್ನು ಇಡುತ್ತವೆ. ಇದರಿಂದ ರಾಜ್ಯಗಳ ಮೂಲಕ ನೇಕಾರರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ಒದಗಿಸುತ್ತಿದೆ. ನೇಕಾರರು ಮತ್ತು ಕುಶಲಕರ್ಮಿಗಳಿಗೆ ಸಂಬಂಧಿಸಿದ ಸ್ಥಳೀಯ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ತಿಳಿಸಬೇಕು ಎಂದು ಕೋರಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ ಇ-ವೇದಿಕೆಯಡಿ 1,300 ಕ್ಕೂ ಹೆಚ್ಚು ನೇಕಾರರನ್ನು ನೋಂದಾಯಿಸಲಾಗಿದೆ. ಅವರ ಉತ್ಪನ್ನಗಳನ್ನು 103 ಚಿಲ್ಲರೆ 'ಬ್ರಾಂಡ್ ಅಂಗಡಿಗಳ' ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಉತ್ಪನ್ನಗಳನ್ನು ಉತ್ತೇಜಿಸಲು ದೇಶ ಮತ್ತು ವಿದೇಶಗಳಲ್ಲಿ ಸುಮಾರು 600 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಮಾರ್ಚ್ 23 ರಂದು ಸರ್ಕಾರದ ಇ-ಮಾರ್ಕೆಟ್‌ಪ್ಲೇಸ್‌ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದ ಸಚಿವರು, ಭೇಟಿಯ ವೇಳೆ ನೇಕಾರರಿಂದ ನೇರವಾಗಿ ಜಿಎಂ ಮೂಲಕ ಉತ್ಪನ್ನಗಳನ್ನು ಖರೀದಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುವುದು. ಮಧ್ಯವರ್ತಿಗಳಿಗೆ ಹೋಗುವ ದೊಡ್ಡ ಭಾಗಕ್ಕಿಂತ ಹೆಚ್ಚಾಗಿ ನೇಕಾರರಿಗೆ ಪೂರ್ಣ ಲಾಭ ಪಡೆಯುವುದಕ್ಕೆ ಇದು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್ಎಸ್ 1600

There is no row at position 0.