Thursday, Oct 22 2020 | Time 21:11 Hrs(IST)
 • ಶ್ರೀನಗರದಲ್ಲಿ ‘ಕಾಶ್ಮೀರ್ ಟೈಮ್ಸ್’ ಕಚೇರಿಗಳಿಗೆ ಮೊಹರು: ಎಡಿಟರ್ಸ್‍ ಗಿಲ್ಡ್ ಖಂಡನೆ
 • ಭಾರತದ ಈ ಕ್ರಮಗಳು ಚೀನಾ ದೇಶವನ್ನು ನಡುಗುವಂತೆ ಮಾಡಿವೆ: ಜೆ ಪಿ ನಡ್ಡಾ
 • ಅ 24ರಂದು ಪ್ರಧಾನಿಯಿಂದ ಗುಜರಾತ್‌ನ ಮೂರು ಪ್ರಮುಖ ಯೋಜನೆಗಳ ಉದ್ಘಾಟನೆ
 • ಪ್ರಾದೇಶಿಕ ಭಾಷೆಗಳಲ್ಲಿ ಜೆ ಇ ಇ ಮುಖ್ಯ ಪರೀಕ್ಷೆ: ರಮೇಶ್ ಪೋಖ್ರಿಯಾಲ್
 • ಪದವಿಪೂರ್ವ ಪಠ್ಯ ಶೇ 30 ರಷ್ಟು ಕಡಿತ
 • ಸಶಸ್ತ್ರ ಪಡೆಗಳ ಪಿಂಚಣಿ ಸೌಲಭ್ಯದಲ್ಲಿ ತಾರತಮ್ಯ; ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ
 • ತೆವಳುತ್ತಾ ಸಾಗುತ್ತಿದೆ ಸಮೃದ್ಧಿ ಯೋಜನೆ: ಲಾಭ ಪಡೆದಿದ್ದು ಕೇವಲ 177 ಫಲಾನುಭವಿಗಳು… !!!
 • ಬಿಹಾರಿಗಳ ಆತ್ಮಗೌರವ ಮಾರಾಟಕ್ಕಿಲ್ಲ , ತೇಜಸ್ವಿ ಯಾದವ್ ವಾಗ್ದಾಳಿ
 • ನಿತೀಶ್ ರಿಂದ ಜನತೆಗೆ ದ್ರೋಹ, ಲಾಲೂ ಕಿಡಿ
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
International Share

ಕಂಗನಾ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಲು ಮುಂಬೈ ನ್ಯಾಯಾಲಯ ಆದೇಶ

ಮುಂಬೈ, ಅ 17(ಯುಎನ್ಐ) ಕೋಮುಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವಂತಹ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಂಬೈ ನ್ಯಾಯಾಲಯವೊಂದು ಪೊಲೀಸರಿಗೆ ಸೂಚಿಸಿದೆ.
ಜನರ ನಡುವೆ ವಿಭಜನೆ ಸೃಷ್ಟಿಸುವಂತೆ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ದೂರು ಸ್ವೀಕರಿಸಿದ ನ್ಯಾಯಾಲಯ ಆಕೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಹಾರಾಷ್ಟ್ರ ಪೊಲೀಸರು, ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಸಮಯದಲ್ಲಿ ಜನಸಾಮಾನ್ಯರಲ್ಲಿ ಸಂಶಯ ಮೂಡುವಂತಹ ವಿವಾದಸ್ಪದ ಟ್ವೀಟ್ ಗಳ ಮೂಲಕ ಕಂಗನಾ ರಣಾವತ್ ಮುಂಬೈ ನಗರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಮುಂಬೈನ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿರ್ದೇಶನ ನೀಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ಮುಂಬೈ ಪೊಲೀಸರು ದೇಶದ್ರೋಹ ಪ್ರಕರಣದಡಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಯುಎನ್ಐ ಕೆವಿಆರ್ 16.09
More News
ಇಂಡೋನೇಷ್ಯಾದ ಕಲ್ಲಿದ್ದಲು ಗಣಿಯಲ್ಲಿ ಭೂಕುಸಿತ: 11 ಮಂದಿ ಸಾವು

ಇಂಡೋನೇಷ್ಯಾದ ಕಲ್ಲಿದ್ದಲು ಗಣಿಯಲ್ಲಿ ಭೂಕುಸಿತ: 11 ಮಂದಿ ಸಾವು

22 Oct 2020 | 1:29 PM

ಜಕಾರ್ತಾ, ಅಕ್ಟೋಬರ್ 22 (ಯುಎನ್‌ಐ) ಇಂಡೋನೇಷ್ಯಾದ ಪಶ್ಚಿಮ ಪ್ರಾಂತ್ಯದ ದಕ್ಷಿಣ ಸುಮಾತ್ರಾದಲ್ಲಿ ಕಲ್ಲಿದ್ದಲು ಗಣಿ ಭೂಕುಸಿತದಿಂದ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ಸಂಸ್ಥೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

 Sharesee more..
ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಗೆಲ್ಲಲಿದ್ದಾರೆ, ಭವಿಷ್ಯ ನುಡಿದ ಜ್ಯೋತಿಷಿಗಳು !

ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಗೆಲ್ಲಲಿದ್ದಾರೆ, ಭವಿಷ್ಯ ನುಡಿದ ಜ್ಯೋತಿಷಿಗಳು !

22 Oct 2020 | 1:10 PM

ವಾಷಿಂಗ್ಟನ್, ಅ 22(ಯುಎನ್ಐ) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಲಿದ್ದಾರೆ ಎಂದು ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ.

 Sharesee more..