Monday, Sep 16 2019 | Time 19:37 Hrs(IST)
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
 • ರೈಲು ನಿಲ್ದಾಣಗಳ ಮೇಲಿನ ಯಾವುದೇ ದಾಳಿ ತಡೆಯಲು ಹೆಚ್ಚಿನ ಭದ್ರತಾ ವ್ಯವಸ್ಥೆ
 • “ಶಕುಂತಲಾ ದೇವಿ” ಚಿತ್ರೀಕರಣ ಆರಂಭ
business economy Share

ಕೈಗಾರಿಕೆ, ವ್ಯಾಪಾರ ಸಂಘಟನೆ, ಸೇವಾ ವಲಯದೊಂದಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಪೂರ್ವಭಾವಿ ಸಭೆ

ನವದೆಹಲಿ, ಜೂನ್ 11 (ಯುಎನ್ಐ) ಕೈಗಾರಿಕೆ, ವ್ಯಾಪಾರ ಸಂಘಟನೆ, ಸೇವಾ ವಲಯದ ತಜ್ಞರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಎರಡನೇ ಬಜೆಟ್ ಪೂರ್ವಭಾವಿ ಸಭೆ ನಡೆಸಿದರು.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯದ ತಜ್ಞರೊಂದಿಗೆ ನಿರ್ಮಲಾ ಸೀತಾರಾಮನ್ ಮೊದಲ ಸಭೆ ನಡೆಸಿದ್ದರು.
ಜುಲೈ 5 ರಂದು ಮಂಡನೆಯಾಗಲಿರುವ 2019-20 ರ ಬಜೆಟ್ ಗೆ ಪೂರ್ವಭಾವಿಯಾಗಿ ಸಚಿವರು ಸಂಬಂಧಪಟ್ಟ ತಂಡದೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ.
2014 ದಿಂದೀಚೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಫಲವಾಗಿ ಒಟ್ಟಾರೆ ವ್ಯಾಪಾರ ವಾತಾವರಣ ಸುಧಾರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಇದ್ದ ನಿಯಮಗಳ ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಇ - ಆಡಳಿತ ಸುಧಾರಿಸಲು ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಅಳವಡಿಸಿಕೊಳ್ಳಲಾಗಿದೆ. ಈ ಮೂಲಕ 190 ರಾಷ್ಟ್ರಗಳ ಪೈಕಿ ಭಾರತ 77 ನೇ ಸ್ಥಾನಕ್ಕೆ ಜಿಗಿದಿದೆ ಎಂದು ಅವರು ಹೇಳಿದ್ದಾರೆ. ದೇಶದ ಒಟ್ಟಾರೆ ಕಾರ್ಯಬಲದ ಶೇ 24 ರಷ್ಟು ಕೈಗಾರಿಕೆಗಳಲ್ಲಿದ್ದು ಪ್ರದೇಶಾವಾರು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕೈಗಾರಿಕೆಗಳು ನೆರವಾಗಬೇಕು ಎಂದರು.
ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಸುಭಾಷ್ ಸಿ ಗರ್ಗ್, ವೆಚ್ಚ ಕಾರ್ಯದರ್ಶಿ ಗಿರೀಶ್ ಚಂದ್ರ ಮರ್ಮು, ಕಂದಾಯ ಕಾರ್ಯದರ್ಶಿ ಅಜಯ್ ನಾರಾಯಣ್ ಪಾಂಡೆ ಮತ್ತು ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧವನ್ ಮತ್ತಿರರು ಸಭೆಯಲ್ಲಿ ಉಪಸ್ಥಿತರಿದ್ದರು.
ಭಾರತದ ಆರ್ಥಿಕತೆಗೆ ಚೇತರಿಕೆ ನೀಡಲು ಕೈಗಾರಿಕಾ ವಲಯ, ಭೂ ಸುಧಾರಣೆ, ವಿಶೇಷ ಆರ್ಥಿಕ ವಲಯ, ಕೈಗಾರಿಕಾ ನೀತಿ, ಸಂಶೋಧನೆಯಲ್ಲಿ ಹೂಡಿಕೆ, ತೆರಿಗೆ ಸರಳೀಕರಣ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕೈಗಾರಿಕೆ, ಸೇವಾ ವಲಯ ಮತ್ತು ವ್ಯಾಪಾರ ಸಂಘಟನೆಗಳ ಪ್ರತಿನಿಧಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.
ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ), ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕಾರ್ಪೊರೇಟ್ ತೆರಿಗೆ, ಇ - ಕಾಮರ್ಸ್, ಶಿಕ್ಷಣ, ಆರೋಗ್ಯ ವಲಯ, ನವೋದ್ಯಮ (ಸ್ಟಾರ್ಟ್ ಅಪ್) ಸೇರಿದಂತೆ ವಿವಿಧ ವಲಯಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಲಾಯಿತು.
ಇದಕ್ಕೂ ಮುನ್ನ ಸಚಿವೆ ನಿರ್ಮಲಾ ಸೀತಾರಾಮನ್ ಗ್ರಾಮೀಣ ವಲಯದ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯ ಉತ್ತೇಜನಕ್ಕೆ ಕೈಗೊಳ್ಳಬಹುದಾದ ಕ್ರಮಗಳು, ಕೃಷಿ ಮತ್ತು ಕೃಷಿಯೇತರ ವಲಯದಲ್ಲಿ ನಿರುದ್ಯೋಗ ಮತ್ತು ಬಡತನ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಕೃಷಿ ವಲಯದ ಸಮಸ್ಯೆಗಳೂ ಪ್ರಸ್ತುತ ಸರ್ಕಾರಕ್ಕೆ ಆದ್ಯತಾ ವಿಷಯವಾಗಿದ್ದು ದೇಶದ ವಿವಿಧ ಭಾಗಗಳಲ್ಲಿನ ಕೃಷಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಮೀನುಗಾರಿಕಾ ವಲಯದ ತಜ್ಞರೊಂದಿಗೂ ಸಮಾಲೋಚನೆ ನಡೆಸಿ ಜಲಸಂಪನ್ಮೂಲಗಳ ಸಮರ್ಥ ಬಳಕೆಯಾಗುವತ್ತ ಗಮನ ಹರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಯುಎನ್ಐ ಜಿಎಸ್‌ಆರ್ ವಿಎನ್‌ 2100
More News
ಮೈಸೂರು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕ ಪ್ರಮಾಣ ಏರಿಕೆ

ಮೈಸೂರು ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಕ ಪ್ರಮಾಣ ಏರಿಕೆ

15 Sep 2019 | 4:44 PM

ಮೈಸೂರು, ಸೆಪ್ಟೆಂಬರ್ 15 (ಯುಎನ್‌ಐ) ದೇಶೀಯ ಮತ್ತು ಪ್ರವಾಸಿಗರ ವಾಯುಯಾನಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಡಾನ್ 3 ಯೋಜನೆಯಡಿ ನಿರ್ಮಿಸಲಾದ ಮೈಸೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರ ಪ್ರಮಾಣ ಹೆಚ್ಚಾಗಿದ್ದು, ಇತರ ನಗರಗಳಿಗೆ ಹೆಚ್ಚಿನ ವಿಮಾನಗಳನ್ನು ಸಂಪರ್ಕಿಸಲಾಗಿದೆ.

 Sharesee more..

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..