EntertainmentPosted at: Jan 13 2021 2:49PM Shareಕೆಜಿಎಫ್ 2 ಟೀಸರ್ : ಆರೋಗ್ಯ ಇಲಾಖೆಯಿಂದ ಯಶ್ ಗೆ ನೋಟಿಸ್ಬೆಂಗಳೂರು, ಜ 13 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದ್ದು, ಈಗಾಗಲೇ ಕೋಟ್ಯಂತರ ಜನರು ಸಂಭ್ರಮದಿಂದ ವೀಕ್ಷಿಸಿರುವ ಕೆಜಿಎಫ್ 2 ಟೀಸರ್ ನಲ್ಲಿ ಯಶ್ ಸಿಗರೇಟ್ ಸೇದುತ್ತಿರುವ ದೃಶ್ಯಕ್ಕೆ ಕತ್ತರಿ ಹಾಕುವಂತೆ ಸೂಚಿಸಿದೆ. ಟೀಸರ್ ನಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಯಾವುದೇ ಎಚ್ಚರಿಕೆಯಿಲ್ಲದ ಕಾರಣಕ್ಕೆ ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5ರ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದು, ದೃಶ್ಯವನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ತಿಳಿಸಿದೆ. ನೋಟಿಸ್ ಅಲ್ಲ ಮನವಿ : ಸಚಿವ ಸುಧಾಕರ್ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಟೀಸರ್ ಗೆ ಸಂಬಂಧಿಸಿದಂತೆ ಯಶ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, ಇದು ನೋಟಿಸ್ ಅಲ್ಲ ಮನವಿ ಅಷ್ಟೆ ಎಂದು ಹೇಳಿದ್ದಾರೆ. ಯಶ್ ಮಾತ್ರವಲ್ಲ ಎಲ್ಲಾ ನಟರಿಗೂ ಮನವಿ ಮಾಡುತ್ತೇವೆ. ಸಾವಿರಾರು ಅಭಿಮಾನಿಗಳು ಅವರನ್ನು ಫಾಲೋ ಮಾಡುತ್ತಾರಾದ್ದರಿಂದ ಇಂತಹ ದೃಶ್ಯಗಳನ್ನು ತೋರಿಸಬಾರದು. ನಟರು ಈ ಬಗ್ಗೆ ಜಾಗೃತಿ ಮೂಡಿಸಬೇಕು' ಎಂದು ಹೇಳಿದ್ದಾರೆ.ಯುಎನ್ಐ ಎಸ್ಎ 1449