Saturday, Jan 16 2021 | Time 07:27 Hrs(IST)
National Share

ಕಾನೂನು ವಿವಿ ಮೀಸಲು ಪ್ರಕರಣ; ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್‌ ನ್ಯಾ.ಲಲಿತ್‌

ನವದೆಹಲಿ, ಜ 13: ಕರ್ನಾಟದ ವಿದ್ಯಾರ್ಥಿಗಳು ಶೇ.25ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ರದ್ದುಗೊಳಿಸುವ ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ವಿಚಾರಣೆಯಿಂದ ನ್ಯಾಯಮೂರ್ತಿ ಲಲಿತ್ ಹಿಂದೆ ಸರಿದಿದ್ದಾರೆ.
ತಾವು ಈ ಹಿಂದೆ ಎನ್‌ಎಲ್‌ಎಸ್‌ಐಯು ಆಡಳಿತ ಮಂಡಳಿಯ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಬೇರೊಂದು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿದರು.
ಕಳೆದ ವರ್ಷ ಮಾರ್ಚ್‌ನಲ್ಲಿ, ಕಾನೂನು ಶಾಲೆಯಲ್ಲಿ "ಕರ್ನಾಟಕದ ವಿದ್ಯಾರ್ಥಿಗಳಿಗೆ" 25 ಪಿಸಿ ಮೀಸಲಾತಿ ನೀಡುವ ಕರ್ನಾಟಕ ವಿಧಾನಸಭೆಯಲ್ಲಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ (ಎನ್‌ಎಲ್‌ಎಸ್‌ಐಯು) ತಿದ್ದುಪಡಿ ಕಾಯ್ದೆ 2020ಕ್ಕೆ ಅಂಗೀಕಾರಗೊಂಡಿತ್ತು. ಈ ತಿದ್ದುಪಡಿಯು ಅದೇ ವರ್ಷದ ಏಪ್ರಿಲ್‌ನಲ್ಲಿ ರಾಜ್ಯಪಾಲರ ಒಪ್ಪಿಗೆ ಪಡೆಯಿತು.
ಆದರೆ, ಈ ಕಾಯ್ದೆ ಸಂವಿಧಾನದ 14 ನೇ ಪರಿಚ್ಛೇದ (ಸಮಾನತೆ) ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟ ರಾಜ್ಯ ಹೈಕೋರ್ಟ್‌ 2020 ರ ಸೆಪ್ಟೆಂಬರ್‌ನಲ್ಲಿ ಈ ತಿದ್ದುಪಡಿಯನ್ನು ರದ್ದುಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೊರ್ಟ್‌ ಮೆಟ್ಟಿಲೇರಿತ್ತು.
ಯುಎನ್ಐ ಎಸ್ಎಚ್ 1751