Saturday, Aug 15 2020 | Time 10:51 Hrs(IST)
  • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
National Share

ಕೈಫಿ ಅಜ್ಮಿ ಜನ್ಮದಿನಾಚರಣೆ: ಗೂಗಲ್ ನಿಂದ ಡೂಡಲ್ ಅರ್ಪಣೆ

ಕೈಫಿ ಅಜ್ಮಿ ಜನ್ಮದಿನಾಚರಣೆ: ಗೂಗಲ್ ನಿಂದ ಡೂಡಲ್ ಅರ್ಪಣೆ
ಕೈಫಿ ಅಜ್ಮಿ ಜನ್ಮದಿನಾಚರಣೆ: ಗೂಗಲ್ ನಿಂದ ಡೂಡಲ್ ಅರ್ಪಣೆ

ಕೊಲ್ಕತಾ, ಜ 14(ಯುಎನ್‍ಐ)- ಇಪ್ಪತ್ತನೇ ಶತಮಾನದ ಖ್ಯಾತ ಉರ್ದು ಕವಿ, ಗೀತೆರಚನೆಕಾರ ಕೈಫಿ ಅಜ್ಮಿ ಅವರ 101ನೇ ಜನ್ಮದಿನದ ಅಂಗವಾಗಿ ಗೂಗಲ್ ಸಂಸ್ಥೆ ಡೂಡಲ್ ಮೂಲಕ ಗೌರವ ಅರ್ಪಿಸಿದೆ.

ಪ್ರೇಮ ಕವನಗಳಿಂದ ಹಿಡಿದು ಬಾಲಿವುಡ್ ಚಿತ್ರಗೀತೆಗಳವರೆಗೆ ಅವರು ಬರೆದಿದ್ದಾರೆ. 20ನೇ ಶತಮಾನದ ಖ್ಯಾತಿ ಕವಿಗಳಲ್ಲಿ ಒಬ್ಬರಾದ ಅಜ್ಮಿ ಅವರು ಜನರ ಬದುಕು ಪರಿವರ್ತನೆಗೆ ಪಟ್ಟ ಶ್ರಮ ಇಂದಿಗೂ ಪರಿಣಾಮ ಬೀರುತ್ತಿದೆ.

1919ರಲ್ಲಿ ಉತ್ತರ ಪ್ರದೇಶದ ಅಜಾಂಗಢ ಜಿಲ್ಲೆಯಲ್ಲಿ ಅಜ್ಮಿ ಜನಿಸಿದ್ದರು.

11ನೇ ವಯಸ್ಸಿನಲ್ಲೇ ಅವರು ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. 1942ರಲ್ಲಿ ಗಾಂಧೀಜಿ ಅವರ ಕ್ವಿಟ್ ಇಂಡಿಯಾ ಆಂದೋಲನದಿಂದ ಪ್ರಭಾವಿತರಾದ ಅಜ್ಮಿ ಅವರು ನಂತರ ಬರೆಯುವುದಕ್ಕಾಗಿ ಮುಂಬೈಗೆ ತೆರಳಿದರು. 1943ರಲ್ಲಿ ಮೊದಲ ಬಾರಿಗೆ ಕವನ ಸಂಕಲನವನ್ನು ಅವರು ಪ್ರಕಟಿಸಿದ್ದರು. ಕೆಲವೇ ವರ್ಷಗಳಲ್ಲಿ ಅವರು ಪ್ರಭಾವಿ ಪ್ರಗತಿಪರ ಲೇಖಕರ ಸಂಘದ ಸದಸ್ಯರಾದರು. ಸಾಮಾಜಿಕ-ಆರ್ಥಿಕ ಸುಧಾರಣೆಗಳಿಗಾಗಿ ಅವರು ಶ್ರಮಿಸಿದ್ದರು. ಅಜ್ಮಿ ಅವರಿಗೆ ಪದ್ಮಶ್ರಿ ಸೇರಿದಂತೆ ಅನೇಕ ಪ್ರಶಸ್ತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್ ಗೆ ಭಾಜನರಾಗಿದ್ದರು.

2002ರ ಮೇ 10ರಂದು ಮುಂಬೈನಲ್ಲಿ ಅವರು ನಿಧನ ಹೊಂದಿದ್ದರು.

ಯುಎನ್‍ಐ ಎಎಸ್‍ಎಲ್‍ಎಸ್ 1309