Tuesday, Aug 11 2020 | Time 18:15 Hrs(IST)
  • ಅಶೋಕ್ ಗೆಹ್ಲೋಟ್ ಜತೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ !: ಸಚಿನ್ ಪೈಲೆಟ್
  • ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೇ 80 ರಷ್ಟು ಸೋಂಕು: ಪ್ರಧಾನಿ ಮೋದಿ
  • ಕೋವಿಡ್‌; 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಂವಾದ
  • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
  • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
  • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
  • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
  • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
  • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
  • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
  • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
  • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
  • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
  • ಕನ್ನಡ ಭಾಷಾ ಕೌಶಲ್ಯ ಆನ್‌ ಲೈನ್ ಪರೀಕ್ಷೆ ತಂತ್ರಾಂಶಕ್ಕೆ ರಾಜ್ಯೋತ್ಸವ ವೇಳೆ ಚಾಲನೆ: ಟಿ ಎಸ್ ನಾಗಾಭರಣ
  • ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಯಶಸ್ವಿ; ಮುಖ್ಯಮಂತ್ರಿ ಕೃತಜ್ಞತೆ
International Share

ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು

ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು

ವಾಷಿಂಗ್ಟನ್, ನ.15 (ಯುಎನ್ಐ) ದಕ್ಷಿಣ ಕ್ಯಾಲಿಫೋರ್ನಿಯಾದ ಸೌಗಸ್ ಪ್ರೌಢ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಗುಂಡು ಹಾರಿಸಿದ ನಂತರ ಸ್ವಯಂ ಗುಂಡು ಹಾರಿಸಿದ್ದರಿಂದ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಗುರುವಾರ ಜನ್ಮದಿನ ಆಚರಿಸಿಕೊಂಡ ಶಂಕಿತ ಆರೋಪಿ, ಶಾಲೆಗೆ ತೆರಳಿ ತನ್ನ ಬೆನ್ನ ಹಿಂದೆ ಇದ್ದ ಚೀಲದಿಂದ ಪಿಸ್ತೂಲ್ ತೆಗೆದು ಐವರು ಸಹಪಾಠಿಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾನೆ. ಬಳಿಕ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಇವೆಲ್ಲವೂ ಕೇವಲ 16 ಸೆಕೆಂಡುಗಳಲ್ಲಿ ನಡೆದಿವೆ ಎಂದು ಬಿಬಿಸಿ ವರದಿ ಮಾಡಿದೆ.

ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಅಲೆಕ್ಸ್ ವಿಲ್ಲಾನುಯೆವಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಂಭೀರ ಗಾಯಗೊಂಡಿರುವ ಶಂಕಿತನು ಈ ಕೃತ್ಯಕ್ಕೆ ಪಾಯಿಂಟ್ 45 ಕ್ಯಾಲಿಬರ್ ಅರೆ-ಸ್ವಯಂಚಾಲಿತ ಪಿಸ್ತೂಲ್ ಅನ್ನು ಬಳಸಿದ್ದಾನೆ ಎಂದು ಹೇಳಿದರು.

ಹದಿನಾರು ವರ್ಷದ ಹುಡುಗಿ ಹಾಗೂ 14 ವರ್ಷದ ಬಾಲಕ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.

ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ವಿಭಾಗದ ಕ್ಯಾಪ್ಟನ್ ಕೆಂಟ್ ವೆಜೆನರ್ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತನದ್ದೆಂದು ಹೇಳಲಾಗಿರುವ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ' ನಾಳೆ ಸೌಗಸ್ ಶಾಲೆಯಲ್ಲಿ ಮೋಜು ಮಾಡಿ' ಎಂದು ಬರೆದಿದ್ದಾನೆ.

ಈ ಘಟನೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳಿಗೆ ಉಪಾಧ್ಯಕ್ಷ ಮೈಕ್ ಪೆನ್ಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು "ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮತ್ತೊಂದು ಹೃದಯ ವಿದ್ರಾವಕ ದಿನ" ಎಂದು ಕರೆದಿದ್ದಾರೆ.

ಉತ್ತರ ಕ್ಯಾಲಿಫೋರ್ನಿಯಾದ ನಾಸಾದಲ್ಲಿ ಮಾತನಾಡಿದ ಅವರು, ' ಸಾಮೂಹಿಕ ಗುಂಡಿನ ದಾಳಿಯನ್ನು ಕೊನೆಗೊಳಿಸಲು ಈ ಆಡಳಿತವು ಕೈಗೊಂಡ ಸಂಕಲ್ಪ ಇನ್ನೂ ಹಾಗೇ ಉಳಿದಿದೆ. ನಮ್ಮ ಕಾಲದಲ್ಲಿ ಈ ದುಷ್ಟತನವನ್ನು ಕೊನೆಗೊಳಿಸುವವರೆಗೆ ಮತ್ತು ನಮ್ಮ ಶಾಲೆಗಳನ್ನು ಮತ್ತು ನಮ್ಮವರನ್ನು ಸುರಕ್ಷಿತವಾಗಿಸುವವರಿಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ತನಿಖಾಧಿಕಾರಿಗಳಿಗೆ ಸಹಕಾರ ನೀಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಡರಲ್ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪೆನ್ಸ್ ಹೇಳಿದ್ದಾರೆ.

ಸಾಂತಾ ಕ್ಲಾರಿಟಾದ ವಿಲಿಯಂ ಎಸ್. ಹಾರ್ಟ್ ಸ್ಕೂಲ್ ಡಿಸ್ಟ್ರಿಕ್ ನ ಎಲ್ಲಾ ಶಾಲೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದರೆ ನಂತರ ನಿರ್ಬಂಧಗಳನ್ನು ತೆಗೆದುಹಾಕಲಾಯಿತು ಎಂದು ತಿಳಿದುಬಂದಿದೆ.

ಯುಎನ್ಐ ಎಎಚ್ 1100