Saturday, Dec 5 2020 | Time 01:16 Hrs(IST)
Entertainment Share

ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಆ್ಯಕ್ಷನ್ ಪ್ರಿನ್ಸ್ ಕೇಶ ದಾನ!

ಬೆಂಗಳೂರು, ನ 21 (ಯುಎನ್‍ಐ) ಸ್ಯಾಂಡಲ್ ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ತಮ್ಮ ನೀಳ ಕೂದಲಿಗೆ ಕತ್ತರಿ ಹಾಕಿದ್ದಾರೆ. ಆದರೆ ಒಂದು ಒಳ್ಳೆಯ ಉದ್ದೇಶಕ್ಕೆ ಕೂದಲು ದಾನ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಪೊಗರು ಸಿನಿಮಾಗಾಗಿ ಕೆಲ ತಿಂಗಳುಗಳಿಂದ ಉದ್ದ ಕೂದಲು ಬೆಳೆಸಿದ್ದ ಧ್ರುವ ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ಹಿನ್ನಲೆ ಹೇರ್ ಕಟ್ ಮಾಡಿದ್ದು, ಕೂದಲನ್ನು, ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ದಾನ ಮಾಡುವುದಾಗಿ ಹೇಳಿದ್ದಾರೆ.
ಕೂದಲಿಗೆ ಕತ್ತರಿ ಹಾಕುವ ವಿಡಿಯೋವನ್ನು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸುವ ಮೊದಲು ವಿಡಿಯೋದಲ್ಲಿ ಮಾತನಾಡಿದ್ದು, 'ಪೊಗರು ಶೂಟಿಂಗ್ ಮುಗೀತು, ಸ್ನೇಹಿತರೆಲ್ಲ ಕುಳಿತು ಕೂದಲು ದಾನ ಮಾಡುವಂತೆ ಹೇಳಿದರು. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ” ಎಂದಿದ್ದಾರೆ.

'10 ಇಂಚು ಉದ್ದ ಇರುವ ಕೂದಲನ್ನು ದಾನ ಮಾಡಬಹುದು. ಸಾಕಷ್ಟು ಜನ ದಾನ ಮಾಡಿದ್ದಾರೆ. ಕ್ಯಾನ್ಸರ್ ಬಂದು ಕೂದಲು ಉದುರುವ 15 ವರ್ಷದ ಒಳಗಿನ ಮಕ್ಕಳಿಗೆ ಕೂದಲು ಉಪಯೋಗವಾಗುತ್ತೆ. ಅವರಿಗೆ ಸಹಾಯವಾಗಲಿ ಎಂದು ಹೀಗೆ ಮಾಡುತ್ತಿದ್ದೇನೆ. ಕೂದಲು ಕತ್ತರಿಸುವ ಎಲ್ಲರೂ ಹೀಗೆ ಮಾಡಿದರೆ ಸಾಕಷ್ಟು ಜನರಿಗೆ ಒಳ್ಳೆಯದಾಗುತ್ತೆ.' ಎಂದು ಧ್ರುವ ಸರ್ಜಾ ವಿಡಿಯೋದಲ್ಲಿ ಹೇಳಿದ್ದಾರೆ.

ಯುಎನ್ಐ ಎಸ್‍ಎ 1644
More News
“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

04 Dec 2020 | 9:22 PM

ಬೆಂಗಳೂರು, ಡಿ 04 (ಯುಎನ್ಐ) ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಶೂಟಿಂಗ್ ಸೆಟ್ ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

 Sharesee more..

ತೆಲುಗು ನಟ, ನಿರ್ಮಾಪಕ ಯಾದ ಕೃಷ್ಣ ನಿಧನ

03 Dec 2020 | 6:17 PM

 Sharesee more..