Monday, Oct 26 2020 | Time 03:07 Hrs(IST)
business economy Share

ಕ್ಯಾಮರೂನ್‌ನ ಆಂಗ್ಲೋಫೋನ್ ಪ್ರದೇಶದಲ್ಲಿ 11 ಒತ್ತೆಯಾಳುಗಳ ಬಿಡುಗಡೆ

ಯವೊಂದೆ, ಅ 16 (ಕ್ಸಿನ್ಹುವಾ) ಕ್ಯಾಮರೂನ್‍ ನ ತೀವ್ರ ಬಾಧಿತವಾಗಿರುವ ಎರಡು ಇಂಗ್ಲಿಷ್ ಮಾತನಾಡುವ ಪ್ರದೇಶಗಳಲ್ಲಿ ಒಂದಾದ ನೈರುತ್ಯ ಭಾಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಪಹರಣಕ್ಕೊಳಗಾಗಿದ್ದ 11 ಜನರನ್ನು ಕ್ಯಾಮರೂನ್‍ ರಕ್ಷಣಾ ಪಡೆಗಳು ರಕ್ಷಿಸಿವೆ ಎಂದು ಸೇನೆಯು ಶುಕ್ರವಾರ ರಾತ್ರಿ ತಿಳಿಸಿದೆ.
ಪ್ರತ್ಯೇಕತಾವಾದಿ ಹೋರಾಟಗಾರರಿಗೆ ತರಬೇತಿ ನೀಡಲು ಮತ್ತು ನೆಲೆ ಒದಗಿಸಲು ಸಶಸ್ತ್ರ ಪ್ರತ್ಯೇಕತಾವಾದಿಗಳು ಬಳಸುತ್ತಿದ್ದ ಲೆಬಿಯಾಲೆಮ್‌ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗ ನಂತರ ಕ್ಯಾಥೋಲಿಕ್ ಪಾದ್ರಿ ಮತ್ತು ಮೂವರು ಮಹಿಳೆಯರು ಸೇರಿದಂತೆ ಒತ್ತೆಯಾಳುಗಳನ್ನು ಪ್ರತ್ಯೇಕವಾದಿಗಳು ಬಿಡುಗಡೆ ಮಾಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಒತ್ತೆಯಾಳುಗಳಲ್ಲಿ ಅನೇಕರಿಗೆ ಮಾರಣಾಂತಿಕ ಗಾಯಗಳಾಗಿವೆ. ಭದ್ರತಾ ವರದಿಗಳಂತೆ, ಸಶಸ್ತ್ರ ಪ್ರತ್ಯೇಕತಾವಾದಿಗಳು ಈ ಪ್ರದೇಶದ ಅಪರಿಚಿತ ಸ್ಥಳದಲ್ಲಿ ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದರು.
ಸಶಸ್ತ್ರ ಪ್ರತ್ಯೇಕತಾವಾದಿಗಳು ವಾಯವ್ಯ ಮತ್ತು ನೈರುತ್ಯದ ಎರಡು ಇಂಗ್ಲಿಷ್ ಮಾತನಾಡುವ ಪ್ರದೇಶಗಳಲ್ಲಿ ಪ್ರತ್ಯೇಕ ರಾಷ್ಟ್ರಕ್ಕಾಗಿ 2017 ರಿಂದಲೂ ಸರ್ಕಾರಿ ಪಡೆಗಳೊಂದಿಗೆ ಘರ್ಷಣೆ ನಡೆಸುತ್ತಿದ್ದಾರೆ.
ಯುಎನ್ಐ ಎಸ್ಎಲ್ಎಸ್ 2144
More News
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ

24 Oct 2020 | 5:23 PM

ನವದೆಹಲಿ, ಅ 24 (ಯುಎನ್‍ಐ)- ಪ್ರಸಕ್ತ ಸಾಲಿನ (2019-20) ಆದಾಯ ತೆರಿಗೆ ವಿವರ ಸಲ್ಲಿಕೆ(ಐಟಿಆರ್) ಗೆ ತೆರಿಗೆ ಪಾವತಿದಾರರಿಗೆ ಈ ವರ್ಷದ ಡಿಸೆಂಬರ್ 31ರವರೆಗೆ ಗಡುವು ವಿಸ್ತರಿಸಲಾಗಿದೆ.

 Sharesee more..
ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ  ಬಿಡುಗಡೆ

ಜಿಎಸ್ ಟಿ ಪರಿಹಾರ: ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ6,000 ಕೋಟಿ ರೂ ಬಿಡುಗಡೆ

23 Oct 2020 | 9:25 PM

ನವದೆಹಲಿ, ಅ 23 []ಯುಎನ್ಐ] 2020-2021ನೇ ಸಾಲಿಗೆ ಜಿಎಸ್ ಟಿ ಪರಿಹಾರದ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಅಡಿ ಸಾಲ ಮಂಜೂರು ಮಾಡಿದೆ. ಕರ್ನಾಟಕ ಸೇರಿ 16 ರಾಜ್ಯಗಳಿಗೆ ಮೊದಲ ಕಂತಿನಲ್ಲಿ 6,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

 Sharesee more..