Wednesday, Mar 3 2021 | Time 19:42 Hrs(IST)
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
 • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
 • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
 • ಆ ದೇಶದಲ್ಲಿ ಒಂದೇ ದಿನ 1,641 ಮಂದಿ ಸಾವು
Sports Share

ಕ್ರೀಡಾ ವಸತಿ ನಿಲಯಗಳ ಮೇಲ್ದರ್ಜೆಗೆ: ಕಿರಣ್ ರಿಜಿಜು

ಬೆಂಗಳೂರು, ಫೆ 22 [ಯುಎನ್ಐ] ದೇಶದಲ್ಲಿನ ಕ್ರೀಡಾ ವಸತಿ ನಿಲಯಗಳು ಮತ್ತು ಅಕಾಡೆಮಿಗಳಲ್ಲಿ ತ್ರಿತಾರಾ ಹೋಟೆಲ್ ಗಳ ಸೌಲಭ್ಯಗಳನ್ನು ಕಲ್ಪಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಯುವ ಸೇವೆ ಮತ್ತು ಕ್ರೀಡಾ ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ.
ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ [ಸಾಯಿ] ದಲ್ಲಿ 330 ಹಾಸಿಗೆಗಳ ವಸತಿ ನಿಲಯ, ಸಿಂಥೆಟಿಕ್ ಅಥ‍್ಲೆಟಿಕ್ ಟ್ರ್ಯಾಕ್ ಗಳು ಮತ್ತು ಅಡುಗೆ ಮನೆ, ಊಟದ ಸಭಾಂಗಣಗಳ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳಿಗೆ ಉತ್ತಮ ಸೌಕರ್ಯ ಕಲ್ಪಿಸಲು ಕ್ರೀಡಾ ವಸತಿ ನಿಲಯಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ವಸತಿ ನಿಲಯಗಳಲ್ಲಿರುವವರು ಪೌಷ್ಠಿಕ ಆಹಾರ ಪಡೆಯಲಿದ್ದಾರೆ ಮತ್ತು ಇಲ್ಲಿಗೆ ವೃತ್ತಿಪರ ಮುಖ್ಯಸ್ಥರನ್ನು ನೇಮಿಸಲಾಗುವುದು ಎಂದು ಹೇಳಿದರು.
ಪ್ರಾಯೋಗಿಕವಾಗಿ ದೆಹಲಿಯ ಕ್ರೀಡಾ ಸೌಲಭ್ಯ ಕೇಂದ್ರ, ಪಂಜಾಬ್. ಪಾಟಿಯಾಲ ಮತ್ತು ಬೆಂಗಳೂರಿನ ಪ್ರಾದೇಶಿಕ ಕ್ರೀಡಾ ಪ್ರಾಧಿಕಾರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ಟೆಂಡರ್ ಆಹ್ವಾನಿಸಿದ್ದು, ವೃತ್ತಿಪರರರು ಇವುಗಳನ್ನು ನಿರ್ವಹಿಸಲಿದ್ದಾರೆ. ದೇಶದ 23 ರಾಷ್ಟ್ರೀಯ ಉತ್ಕೃಷ್ಟ ಕೇಂದ್ರಗಳನ್ನು ಇದೀಗ ವೃತ್ತಿಪರರೇ ನಿಭಾಯಿಸುತ್ತಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಪೌಷ್ಠಿಕ ಆಹಾರ ಮತ್ತು ಅಗತ್ಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಕ್ರೀಡಾ ಸೌಲಭ್ಯ ಕೇಂದ್ರಗಳನ್ನು ವಿಶ್ವ ದರ್ಜೆಯ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಕಿರೆಣ್ ರಿಜಿಜು ಹೇಳಿದರು.
ದೇಶಾದ್ಯಂತ ಕ್ರೀಡಾ ಪ್ರತಿಭೆಗಳ ಶೋಧನೆಗಾಗಿ 5 ಪ್ರಾದೇಶಿಕ ಸಮಿತಿಗಳನ್ನು ರಚಿಸಲಾಗಿದೆ ಮತ್ತು ಪರಿಶೋಧಿಸಿದವರನ್ನು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿ ಮಾಡಲು ಅಗತ್ಯ ತರಬೇತಿ ನೀಡಲಾಗುವುದು ಎಂದರು.
2028 ರ ಲಾಸ್ ಎಂಜಲಿಸ್ ಒಲಿಂಪಿಕ್ಸ್ ಅನ್ನು ಉಲ್ಲೇಖಿಸಿದ ಸಚಿವರು, ಚಿನ್ನದ ಪದಕಗಳಲ್ಲಿ ಮೊದಲ ಹತ್ತು ರಾಷ್ಟ್ರಗಳ ಸಾಲಿಗೆ ಭಾರತ ಸೇರಬೇಕು. ಈ ಗುರಿ ಸಾಧನೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈವರೆಗೆ ಇಂತಹ 1,000 ಕೇಂದ್ರಗಳ ಸ್ಥಾಪನೆಯನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಹಿರಿಯ ಅಧಿಕಾರಿಗಳು, ಅಥ್ಲೆಟಿಕ್ ಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
ಯುಎನ್ಐ ವಿಎನ್ 2022