Saturday, Feb 29 2020 | Time 16:10 Hrs(IST)
 • ಬಿಬಿಎಂಪಿ ಸಭೆ; ಇಂದಿರಾ ಕ್ಯಾಂಟೀನ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಕಿಡಿ
 • ಇರಾನ್ ನಲ್ಲಿರುವ ಕಾಶ್ಮೀರ ವಿದ್ಯಾರ್ಥಿಗಳು ವಾಪಸ್ಸಾಗಲು ಸೌಲಭ್ಯ ಕಲ್ಪಿಸಿ; ಸಚಿವ ಜೈಶಂಕರ್ ಗೆ ಸೋಜ್ ಮನವಿ
 • ಪ್ರತೀ ಜಿಲ್ಲೆಗೊಂದು ಮತ್ಸ್ಯದರ್ಶಿನಿ ಹೋಟೇಲು: ಬಜೆಟ್ ನಲ್ಲಿ ಹೊಸ ಯೋಜನೆ ಘೋಷಣೆ
 • ಮಲೇಷಿಯಾ ನೂತನ ಪ್ರಧಾನಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಮಲೇಷಿಯಾದ ನೂತನ ಪ್ರಧಾನಮಂತ್ರಿಯಾಗಿ ಮುಹಿದ್ದೀನ್ ಯಾಸಿನ್ ನೇಮಕ
 • ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್
 • ದೇಶದ ಜನರಿಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ; ಪ್ರಧಾನಿ ಮೋದಿ
 • ಕಾಂಗ್ರೆಸ್ ಜತೆ ಜೆಡಿಎಸ್ ವಿಲೀನಗೊಳ್ಳಲು ಸಲಹೆ ನೀಡಿದ್ರಾ ಪ್ರಶಾಂತ್ ಕಿಶೋರ್ ?
 • ಅಕಾಲಿಕವಾಗಿ ಸಾವನ್ನಪ್ಪಿದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿಗಳಿಂದ ತಲಾ ೫ ಲಕ್ಷ ಪರಿಹಾರ ಘೋಷಣೆ
 • ದುಬೈ ಟೆನಿಸ್‌ ಚಾಂಪಿಯನ್‌ಶಿಪ್ : ಪ್ರಶಸ್ತಿಗಾಗಿ ಜೊಕೊವಿಚ್, ಸಿಟ್ಸಿಪಸ್ ಕಾದಾಟ
 • ಅಪಾರ್ಟ್‌ಮೆಂಟ್ ಗಳಲ್ಲಿ ಶೌರಶಕ್ತಿ‌ ಫಲಕ ಅಳವಡಿಕೆ ಉತ್ತಮ ಪ್ರಯತ್ನ; ಡಾ ಅಶ್ವತ್ಥನಾರಾಯಣ
 • 10ನೇ ಬಾರಿ ವಿರಾಟ್ ಕೊಹ್ಲಿಯನ್ನು ಕೆಡವಿದ ಟಿಮ್ ಸೌಥಿ
 • ಕೊರೊನಾವೈರಸ್ ಆತಂಕ: ಅಮೆರಿಕದಿಂದ ಆಸಿಯಾನ್ ಶೃಂಗಸಭೆ ಮುಂದೂಡಿಕೆ
 • ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯಕ್ಕೆ ಗೈರುಹಾಜರಾದ 40 ಜನರ ಅಮಾನತ್ತು
 • ರಜನೀಕಾಂತ್ ಜೊತೆ ಭಾರತೀಯ ಹಜ್ ಅಸೋಸಿಯೇಷನ್ ಅಧ್ಯಕ್ಷ ಮಾತುಕತೆ
Health -Lifestyle Share

ಕೊರೋನವೈರಸ್ : ಚೀನಾದಲ್ಲಿ ಮತ್ತೆ 108 ಸಾವು

ಬೀಜಿಂಗ್, ಫೆ 11 (ಯುಎನ್‍ಐ) ಮಾರಣಾಂತಿಕ ಕೊರೋನಾವೈರಸ್‍ ಸೋಂಕಿನಿಂದಾಗಿ ಮತ್ತೆ 108 ಹೊಸ ಸಾವಿನ ಪ್ರಕರಣಗಳು ವರದಿಯಾಗಿದ್ದು, 2,478 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಚೀನಾ ತಿಳಿಸಿದೆ.
ಸಾವಿನ ಪೈಕಿ 103 ಹುಬೈ ಪ್ರಾಂತ್ಯದಲ್ಲಿದ್ದರೆ ಬೀಜಿಂಗ್, ಟಿಯಾಂಜಿನ್, ಹೀಲಾಂಗ್‌ಜಿಯಾಂಗ್, ಅನ್ಹುಯಿ ಮತ್ತು ಹೆನಾನ್ ನಲ್ಲಿ ಒಂದೊಂದು ಸಾವು ಸಂಭವಿಸಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಟಣೆ ಮಾಹಿತಿ ನೀಡಿದೆ.

ಇನ್ನೂ 3,536 ಹೊಸ ಶಂಕಿತ ಪ್ರಕರಣಗಳು ವರದಿಯಾಗಿವೆ. ಸೋಮವಾರವೂ 849 ರೋಗಿಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರೆ, 716 ಜನರನ್ನು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಚೀನಾದಲ್ಲಿ ಒಟ್ಟಾರೆ ದೃಢಪಡಿಸಿದ ಪ್ರಕರಣಗಳು ಸೋಮವಾರದ ಅಂತ್ಯದ ವೇಳೆಗೆ 42,638 ಕ್ಕೆ ತಲುಪಿದ್ದು, 1,016 ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.

7,333 ರೋಗಿಗಳು ತೀವ್ರ ಸ್ಥಿತಿಯಲ್ಲಿದ್ದಾರೆ ಮತ್ತು 21,675 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಆಯೋಗ ಹೇಳಿದೆ.

ಚೇತರಿಸಿಕೊಂಡ ನಂತರ ಒಟ್ಟು 3,996 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆಯೋಗವು 428,438 ನಿಕಟ ಸಂಪರ್ಕಗಳನ್ನು ಪತ್ತೆಹಚ್ಚಿದೆ ಮತ್ತು ಅವರಲ್ಲಿ 26,724 ಜನರನ್ನು ಸೋಮವಾರ ವೈದ್ಯಕೀಯ ವೀಕ್ಷಣೆಯಿಂದ ಬಿಡುಗಡೆ ಮಾಡಲಾಗಿದೆ, 187,728 ಇತರರು ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ.

ಸೋಮವಾರದ ಅಂತ್ಯದ ವೇಳೆಗೆ, ಹಾಂಗ್ ಕಾಂಗ್ ವಿಶೇಷ ಆಡಳಿತ ಪ್ರದೇಶದಲ್ಲಿ (ಎಸ್‌ಎಆರ್) ಒಂದು ಸಾವು ಸೇರಿದಂತೆ 42 ದೃಢಪಡಿಸಿದ ಪ್ರಕರಣಗಳು, ಮಕಾವೊ ಎಸ್‌ಎಆರ್‌ನಲ್ಲಿ 10, ತೈವಾನ್‌ನಲ್ಲಿ 18 ಪ್ರಕರಣಗಳು ದೃಢಪಟ್ಟಿರುವ ವರದಿಯಾಗಿವೆ.

ಚೇತರಿಸಿಕೊಂಡ ನಂತರ ಮಕಾವೊದಲ್ಲಿ ಒಬ್ಬ ರೋಗಿಯನ್ನು ಮತ್ತು ತೈವಾನ್‌ನಲ್ಲಿ ಒಬ್ಬ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಯುಎನ್‍ಐ ಎಸ್‍ಎ ವಿಎನ್ 0730