Sunday, Apr 5 2020 | Time 16:09 Hrs(IST)
 • ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಿಂದ ಥಾಯ್ಲೆಂಡ್, ಮಲೇಷ್ಯಾಅಮಾನತು
 • ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
 • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
business economy Share

ಕೊರೊನಾ : ಆದಾಯ ತೆರಿಗೆ, ಪ್ಯಾನ್ ಆಧಾರ್ ಜೋಡಣೆ ಅವಧಿ ವಿಸ್ತರಣೆ

ನವದೆಹಲಿ, ಮಾರ್ಚ್ 24 (ಯುಎನ್ಐ) ಕೊರೊನಾ ಸೋಂಕು ವ್ಯಾಪಿಸಿದ್ದು ಅನೇಕ ರಾಜ್ಯಗಳು ಸ್ತಬ್ಧವಾಗಿರುವ ಕಾರಣ ಮಾರ್ಚ್ 31 ಕ್ಕೆ ಕೊನೆಯಾಗಲಿರುವ ಆದಾಯ ತೆರಿಗೆ ವಿವರ ಸಲ್ಲಿಕೆ ಅವಧಿ, ಪ್ಯಾನ್ – ಆಧಾರ್ ಜೋಡಣೆ ಅವಧಿ ಮೊದಲಾದವುಗಳನ್ನು ಜೂನ್ 30 ರವರೆಗೆ ವಿಸ್ತರಿಸಿದೆ.

ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ, ಅಬಕಾರಿ ಮತ್ತು ಸುಂಕ, ಬ್ಯಾಂಕಿಂಗ್ ಮೊದಲಾದ ವಲಯಗಳಿಗೆ ಸಂಬಂಧಿಸಿದ ಅನೇಕ ಘೋಷಣೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಪಸಚಿವ ಅನುರಾಗ್ ಠಾಕುರ್ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 31 ಕ್ಕಿ ನಿಗದಿಯಾಗಿರುವ ಬಹುತೇಕ ಅಂತಿಮ ದಿನಾಂಕಗಳನ್ನು ಜೂನ್ 30 ಕ್ಕೆ ವಿಸ್ತರಿಸಲಾಗಿದೆ.

ಮೂರು ತಿಂಗಳ ವರೆಗೆ ಇತರ ಬ್ಯಾಂಕ್ ಗಳ ಎಟಿಎಂ ನಿಂದ ಹಿಂಪಡೆಯುವ ಹಣಕ್ಕೆ ಯಾವುದೇ ಶುಲ್ಕ ವಿಧಿಸಲಾಗುತ್ತಿದೆ. ಜೊತೆಗೆ ಮೂರು ತಿಂಗಳ ಅವಧಿಗೆ ಯಾವುದೇ ಕನಿಷ್ಠ ಮಿತಿಯ ನಿರ್ಬಂಧ ಇರುವುದಿಲ್ಲ.
2018-19 ರ ಕೊನೆ ದಿನಾಂಕದ ನಂತರ ಸಲ್ಲಿಸುವ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವನ್ನು ಜೂನ್ 30 ರವರೆಗೆ ವಿಸ್ತರಿಸಿದೆ ಮತ್ತು ಬಡ್ಡಿದರವನ್ನು ಶೇ 9 ಕ್ಕೆ ಇಳಿಕೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಅಡಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ವಿವರ ಸಲ್ಲಿಕೆಗೆ ಜೂನ್ 30 ರವರೆಗೆ ಅವಕಾಶ ನೀಡಲಾಗಿದೆ. ಕಾಂಪೊಸಿಷನ್ ಸ್ಕೀಂ ಅಡಿ ನೋಂದಾಯಿಸಿಕೊಂಡಿರುವವರಿಗೂ ಜೂನ್ 30 ರವರೆಗೆ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ಕಂಪೆನಿಯ ಸ್ವತಂತ್ರ ನಿರ್ದೇಶಕರು ಈ ವರ್ಷ ಒಂದೇ ಒಂದು ಸಭೆ ಕೂಡ ನಡೆಸದೇ ಇದ್ದಲ್ಲಿ ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ. ಹೀಗೆ ಅನೇಕ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಷೇರು ಮಾರುಕಟ್ಟೆಯ ವಹಿವಾಟಿನ ಮೇಲೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ದಿನಕ್ಕೆ ಮೂರು ಬಾರಿ ನಿಗಾ ವಹಿಸಿದ್ದಾರೆ. ಜನರ ಹಿತವೇ ಸರ್ಕಾರಕ್ಕೆ ಮುಖ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಯುಎನ್ಐ ಜಿಎಸ್ಆರ್ 1904
More News
ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

02 Apr 2020 | 3:46 PM

ನವದೆಹಲಿ, ಏ 2 [ಯುಎನ್ಐ] ಲಾಕ್ ಡೌನ್ ಅವಧಿಯಲ್ಲಿ ವಾಹನ ಮತ್ತು ಆರೋಗ್ಯ ವಿಮಾ ಕಂತು ಪಾವತಿಸದಿದ್ದರೂ ಪಾಲಿಸಿದಾರರು ವಿಮಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

 Sharesee more..