Friday, Apr 10 2020 | Time 07:20 Hrs(IST)
Entertainment Share

ಕೊರೊನಾಗೆ ಬಲಿಯಾದ ಹಾಲಿವುಡ್ ನಾಯಕಿಯ ತಂದೆ

ಲಂಡನ್, ಮಾ ೨೨(ಯುಎನ್‌ಐ) ಪ್ರಸಿದ್ಧ ಹಾಲಿವುಡ್ ನಾಯಕಿ ಸೋಫಿಯಾ ಮೈಲ್ಸ್ ತಂದೆ ಪೀಟರ್ ಮೈಲ್ಸ್ (೬೭) ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೀಟರ್ ಮೈಲ್ಸ್ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅವರು ಶನಿವಾರ ನಿಧನರಾದರು. ಸೋಫಿಯಾ ತನ್ನ ತಂದೆಯ ಸಾವಿನ ಸುದ್ದಿಯನ್ನು ಟ್ವಿಟ್ಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ತಂದೆ ಕೆಲವು ಗಂಟೆಗಳ ಹಿಂದೆ ನಿಧನರಾದರು. ಕೊರೊನಾ ವೈರಸ್ ಕಾರಣ ಸಾವನ್ನಪ್ಪಿದರು ಎಂದು ಪ್ರಕಟಿಸಿದ್ದಾರೆ.
ಆಸ್ಪತ್ರೆಯಲ್ಲಿ ತನ್ನ ತಂದೆ ಬಳಿಯಿರುವ ಫೋಟೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವ ಅವರು, ಕೆಲವು ದಿನಗಳಿಂದ ತನ್ನ ತಂದೆಯ ಆರೋಗ್ಯದ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದ ಸೋಫೀಯಾ, ಕೆಲ ದಿನಗಳ ಹಿಂದೆ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಎಲ್ಲರಿಗೂ ಎಚ್ಚರಿಕೆ ನೀಡುತ್ತೇನೆ. ಕರೋನಾ ಸೋಂಕಿಗೆ ಒಳಗಾಗಿದ್ದ ನನ್ನ ತಂದೆಯನ್ನು ವಿಶೇಷ ವಾರ್ಡ್‌ನಲ್ಲಿ ಇರಿಸಿದ್ದರು. ಅಲ್ಲಿ ಎಲ್ಲರೂ ಕೊರೊನಾ ಬಾಧಿತರೇ ಇದ್ದರು. ಈಗ ಒಬ್ಬಬ್ಬರೇ ಸಾಯುತ್ತಿದ್ದಾರೆ. ಇವರೆಲ್ಲರೂ ಹಿರಿಯರು. ದಯವಿಟ್ಟು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿ ಎಂದು ಮನವಿ ಮಾಡಿದ್ದರು. ಬ್ರಿಟನ್ ನಲ್ಲಿ ಈವರೆಗೆ ೫,೦೧೮ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಸುಮಾರು ೨೩೩ ಜನರು ಸಾವನ್ನಪ್ಪಿದ್ದಾರೆ.
ಯುಎನ್‌ಐ ಕೆವಿಆರ್ ೧೮೩೪
More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..