Wednesday, Dec 2 2020 | Time 08:33 Hrs(IST)
National Share

ಕೋವಿಡ್‌ ಲಸಿಕೆಯ ಪ್ರಗತಿ ಪರಿಶೀಲಿಸಿದ ಪ್ರಧಾನಿ ಮೋದಿ

ನವದೆಹಲಿ, ನ 21 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕೋವಿಡ್‌-19 ಲಸಿಕೆ ವಿತರಣೆ, ಅದರ ವಿತರಣೆ ಮತ್ತು ನಿರ್ವಹಣೆಯ ಸಿದ್ದತೆಯನ್ನು ಪರಿಶೀಲಿಸಿದರು.
ಜೊತೆಗೆ, ಲಸಿಕೆ ವಿತರಣಾ ಆಭಿಯಾನವನ್ನು ಶೀಘ್ರ ಆರಂಭಿಸಲು ತ್ವರಿತ ನಿಯಂತ್ರಣ ಕ್ಲಿಯರೆನ್ಸ್‌ ಮತ್ತು ಸಮಯಕ್ಕೆ ಸರಿಯಾದ ಸಂಗ್ರಹಕ್ಕೆ ಸಮಯೋಚಿತ ಯೋಜನೆ ರೂಪಿಸಬೇಕು ಎಂದು ನಿರ್ದೇಶಿಸಿದರು.
ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಅವರು ಲಸಿಕೆಯಲ್ಲಿ ಉನ್ನತ ಜಾಗತಿಕ ಗುಣಮಟ್ಟ ಖಾತರಿಪಡಿಸುವಂತೆ ಸಲಹೆ ನೀಡಿದರು.
ಲಸಿಕೆ ಅಭಿವೃದ್ಧಿಪಡಿಸಲು ಶ್ರಮಿಸಿದವರನ್ನು ಶ್ಲಾಘಿಸಿದ ಮೋದಿ, ಸಂಶೋಧನೆ, ಅಭಿವೃದ್ಧಿ ಮತ್ತು ಲಸಿಕೆ ತಯಾರಿಕೆಗೆ ಎಲ್ಲಾ ಪ್ರಯತ್ನ ಮಾಡುವಂತೆ ಕರೆ ನೀಡಿದರು.
ಐದು ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯ ಮುಂದುವರಿದ ಹಂತಗಳಲ್ಲಿವೆ, ಅವುಗಳಲ್ಲಿ 4 ಹಂತ 2 ಮತ್ತು 3 ಮತ್ತು ಒಂದು ಹಂತ -1 ಮತ್ತು 2ರಲ್ಲಿವೆ. ಲಸಿಕೆ ಅಭಿವೃದ್ಧಿ ಮತ್ತು ಭಾರತೀಯ ಲಸಿಕೆಗಳ ಬಳಕೆಗೆ ಸಹಭಾಗಿತ್ವ ವಹಿಸಲು ಬಾಂಗ್ಲಾದೇಶ, ಮ್ಯಾನ್ಮಾರ್, ಕತಾರ್, ಭೂತಾನ್, ಸ್ವಿಟ್ಜರ್ಲೆಂಡ್, ಬಹ್ರೇನ್, ಆಸ್ಟ್ರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಆಸಕ್ತಿ ತೋರಿಸಿವೆ.
ದೇಶದ ಪ್ರತಿ ಸ್ಥಳ ಹಾಗೂ ಅಗತ್ಯವಿರುವ ವ್ಯಕ್ತಿಗಳಿಗೆ ಲಸಿಕೆ ಒದಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್‌-19ಗಾಗಿ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ತಂಡ (ನೆಜ್ವಾಕ್‌) ಎಲ್ಲಾ ಸರ್ಕಾರಗಳು ಮತ್ತು ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ.
ಪ್ರಧಾನಿ ಮೋದಿ ತುರ್ತು ಬಳಕೆಯ ದೃಢೀಕರಣ ಅಂಶಗಳನ್ನು ಮತ್ತು ಔಷಧಿ ತಯಾರಿಕೆ ಮತ್ತು ಸಂಗ್ರಹಣೆಯನ್ನು ಪರಿಶೀಲಿಸಿದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಲಸಿಕೆಯಿಂದ ಈ ಮೂರನೇ ಹಂತದ ಪ್ರಯೋಗಗಳ ಫಲಿತಾಂಶಗಳು ಬರುತ್ತಿದ್ದಂತೆ, ಅವುಗಳ ಬಳಕೆಯನ್ನು ತ್ವರಿತವಾಗಿ ಪರಿಶೀಲಿಸಲಾಗುವುದು ಎಂದರು.
ಸಭೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ನೀತಿ ಆಯೋಗದ ಸದಸ್ಯರು, ಸಂಪುಟ ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು.
ಯುಎನ್ಐ ಎಸ್ಎಚ್ 2018
More News
ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

01 Dec 2020 | 8:29 PM

ನವದೆಹಲಿ, ಡಿ 1 (ಯುಎನ್‌ಐ) ತಮ್ಮನ್ನು ಹುದ್ದೆಯಿಂದ ವಜಾಗೊಳಿಸಿದ ಐಸಿಐಸಿಐ ಬ್ಯಾಂಕ್‍ ಕ್ರಮದ ವಿರುದ್ಧ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಚಂದಾ ಕೊಚ್ಚರ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

 Sharesee more..
‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

01 Dec 2020 | 5:48 PM

ನವದೆಹಲಿ, ಡಿ01 (ಯುಎನ್‌ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56 ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

 Sharesee more..